ವಾಷಿಂಗ್ಟನ್: ಮಂಗಳಗ್ರಹ ಕುರಿತ ಸಂಶೋಧನೆಗಾಗಿ ನಾಸಾ ವಿಜ್ಞಾನಿಗಳು ಉಡಾಯಿಸಿದ ಮಾರ್ಸ್ ಕ್ಯೂರಿಯಾಸಿಟಿ ರೋವರ್ ಉಪಗ್ರಹ ಹೊಸದೊಂದು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸಿದ್ದು, ಈ ಆಕೃತಿಗಳು ‘ಪಿರಮಿಡ್’ಗಳನ್ನು ಹೋಲುವಂತಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಮಂಗಳಗ್ರಹದಲ್ಲಿ ಒಂದಾನೊಂದು ಕಾಲದಲ್ಲಿ ಪುರಾತನ ನಾಗರೀಕತೆ ಇತ್ತೆಂಬ ಕಲ್ಪನೆಗೆ ಪುಷ್ಠಿ ನೀಡಿದೆ. ಸಣ್ಣ ಗಾತ್ರದ ಕಾರಿನಷ್ಟಿರುವ ಈ ಆಕೃತಿ ಥೇಟ್ ಪಿರಮಿಡ್‘ಗಳನ್ನು ಹೋಲುತ್ತಿದೆ. ಈಜಿಫ್ಟಿನ ಪಿರಮೀಡ್ ಗಳ ರೀತಿಯೇ ಇಲ್ಲೂ ಬೃಹತ್ ಗಾತ್ರದ ಪಿರಮಿಡ್ ಗಳಿದ್ದು ಕಾಲಾನಂತರ ಮರಳಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ.
ಈ ಆಕೃತಿಗಳು ನೋಡುವುದಕ್ಕೆ ಪಿರಮಿಡ್ ರೀತಿ ಕಾಣುತ್ತಿದ್ದು, ನೇರವಾದ ಅಂಚುಗಳು, ನುಣುಪಾದ ಮೇಲ್ಮೈ, ಚೂಪಾದ ಶಿಖರ ಎಲ್ಲವೂ ಮನುಷ್ಯನೇ ಇದನ್ನ ರೂಪಿಸಿರಬಹುದೆಂಬ ಅನುಮಾನವನ್ನು ದಟ್ಟಗೊಳಿಸಿದೆ.
ಮಂಗಳ ಗ್ರಹದಲ್ಲಿರುವ ಕೆಂಪು ಕಾಯದ ಬಗೆಗಿರುವ ಕುತೂಹಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ನಾಸಾ ವಿಜ್ಞಾನಿಗಳು 26.11.2011ರಂದು ಉಡಾಯಿಸಿದ ‘ಮಾರ್ಸ್ ಕ್ಯೂರಿಯಾಸಿಟಿ ರೋವರ್’ ಮಂಗಳ ಗ್ರಹದ ಕೌತುಗಳನ್ನು ಒಂದೊಂದಾಗೇ ಬಯಲಿಗೆಳೆಯುತ್ತಿದೆ.