ಕರಾವಳಿ

ಮ್ಯೊಲಿಯವರದು ಸತ್ಯವನ್ನು ತಿರುಚುವ ಪ್ರವೃತ್ತಿ : ದ.ಕ ಬಿಜೆಪಿ ಆರೋಪ

Pinterest LinkedIn Tumblr

BJP Logo

ಮಂಗಳೂರು : ಪೆಟ್ರೋಲ್ ಡೀಸೆಲ್ ಬೆಲೆ‌ಏರಿಕೆ ಮೋದಿ ಸರಕಾರದ್ದು ಅಲ್ಲ ಹಾಗೂ ಮಹಾರಾಷ್ಟ್ರ, ಹರಿಯಾಣ ಬಿಜೆಪಿ ವಿಜಯಕ್ಕೆ ಬಿಜೆಪಿ ಬ್ಲ್ಯಾಕ್‌ಮೇಲ್ ಕಾರಣ ಎಂದು ಹೇಳಿಕೆ ನೀಡಿರುವ ಕೇಂದ್ರ ಮಾಜಿ ಮಂತ್ರಿ ವೀರಪ್ಪ ಮ್ಯೊಲಿಯವರ ಹೇಳಿಕೆ ರಾಜಕೀಯ ಪ್ರೇರಿತವಾಗಿದ್ದು ಸತ್ಯವನ್ನು ತಿರುಚುವ ಪ್ರವೃತ್ತಿಯಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಟೀಕಿಸಿದೆ.

ಕೇಂದ್ರದಲ್ಲಿ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ನಿರಂತರ ಪೆಟ್ರೋಲ್ ದರ ಇಳಿಕೆಯಾಗುತ್ತಿದ್ದು, ಜಿಡಿಪಿ ದರ ೪.೬ ಇದ್ದದ್ದು ೫.೭ಕ್ಕೆ ಏರಿಕೆಯಾಗಿದೆ, ಹಣದುಬ್ಬರ ೩.೭ ಇದ್ದದ್ದು ೨.೮ಕ್ಕೆ ಇಳಿದಿದೆ, ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ. ದೇಶಕ್ಕೆ ೧೦೦ ಸ್ಮಾರ್ಟ್‌ಸಿಟಿ ಕೊಡುಗೆ, ಕಾರ್ಮಿಕರ ಪಿಂಚಣಿ ದರ ಏರಿಕೆ, ನದಿ ಜೋಡಣೆ, ಆದಾಯ ತೆರಿಗೆಯಲ್ಲಿ ಸರಳೀಕರಣ, ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ, ದೇಶದ ರಕ್ಷಣೆಗೆ ಆದ್ಯತೆ, ೨೦೨೦ರಲ್ಲಿ ಎಲ್ಲಾ ನಾಗರಿಕರಿಗೂ ವಸತಿ, ಮೇಕ್ ಇನ್ ಇಂಡಿಯಾ ಮತ್ತು ಸ್ವಚ್ಛ ಭಾರತದ ಕಲ್ಪನೆಗಳು ಇತ್ಯಾದಿಗಳಿಂದಾಗಿ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ದಿವಾಳಿ ತೆಗೆದಿದೆ ಎಂದು ಸ್ವತ: ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಹೇಳಿಕೆ ಹಾಗೂ ಕಾಂಗ್ರೆಸ್‌ನ ಕೇಂದ್ರ ನಾಯಕರು ಮೋದಿಯವರ ಆಡಳಿತವನ್ನು ಪ್ರಶಂಸಿಸುತ್ತಿರುವಾಗ ವೀರಪ್ಪ ಮೊಲಿಯವರು ಸತ್ಯವನ್ನು ಅರಗಿಸಲಾಗದೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಸರಿಯಾದ ಕ್ರಮ ಅಲ್ಲ ಎಂದು ಜಿಲ್ಲಾ ವಕ್ತಾರ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿರುವರು.

Write A Comment