ಮನೋರಂಜನೆ

ಮುಂಬೈ ದೇವಾಡಿಗ ಸಂಘದ 90ರ ಸಂಭ್ರಮಾಚಾರಣೆಗೆ ತೆರೆ: ಹರೀಶ್ ಶೇರಿಗಾರ್‌ರಿಗೆ ‘ದೇವಾಡಿಗ ಉದ್ಯೋಗ ರತ್ನ’, ಧರ್ಮಪಾಲರಿಗೆ ‘ದೇವಾಡಿಗ ಸಮಾಜ ರತ್ನ’ ಪ್ರಶಸ್ತಿ ಪ್ರಧಾನ

Pinterest LinkedIn Tumblr

Devadiga sangha mumbai -Apr 21_2015-016

ಮುಂಬೈ,(ನೆರುಳ್), ಎ.21: ನೆರುಳ್ ಪಶ್ಚಿಮದ ಸೆಕ್ಟರ್ 12ರಲ್ಲಿರುವ ದೇವಾಡಿಗ ಭವನ (ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರ)ದಲ್ಲಿ ನಡೆದ ದೇವಾಡಿಗ ಸಂಘ ಮುಂಬೈ ಇದರ 90ರ ಅದ್ದೂರಿಯ ಸಂಭ್ರಮಕ್ಕೆ ಅಂತಿಮ ತೆರೆಬಿದ್ದಿದೆ.

ಎ.18 ಮತ್ತು 19ರಂದು ಎರಡು ದಿನಗಳ ಕಾಲ ನಡೆದ 90ರ ಸಂಭ್ರಮಾಚಾರಣೆಯು ಅರ್ಥಪೂರ್ಣವಾಗಿ ಸಮಾಪನಗೊಂಡಿದ್ದು, ಈ ವೇಳೆ ದೇವಾಡಿಗ ಸಮುದಾಯದ ಏಳಿಗೆಗೆ ಸೇವೆ ಸಲ್ಲಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕೂಡಾ ನಡೆಯಿತು.

DSC_0359

DSC_0340

Devadiga sangha mumbai -Apr 21_2015-013

Devadiga sangha mumbai -Apr 21_2015-014

Devadiga sangha mumbai -Apr 21_2015-015

Devadiga sangha mumbai -Apr 21_2015-017

Devadiga sangha mumbai -Apr 21_2015-018

Devadiga sangha mumbai -Apr 21_2015-019

Devadiga sangha mumbai -Apr 21_2015-020

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರಿಗೆ ‘ದೇವಾಡಿಗ ಸಮಾಜ ರತ’್ನ, ದುಬೈಯ ಖ್ಯಾತ ಯುವ ಉದ್ಯಮಿ, ದುಬೈ ದೇವಾಡಿಗ ಸಂಘದ ಅಧ್ಯಕ್ಷ, ಖ್ಯಾತ ಗಾಯಕ ಹರೀಶ್ ಶೇರಿಗಾರ್ ಅವರಿಗೆ ‘ದೇವಾಡಿಗ ಉದ್ಯೋಗ ರತ್ನ’, ಅಕ್ಷಯ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬಯಿ ಕಾರ್ಯಾಧ್ಯಕ್ಷ ಗೋಪಾಲ್ ಎಂ. ಮೊಯಿಲಿಯವರಿಗೆ ‘ದೇವಾಡಿಗ ಸೇವಾ ರತ್ನ’, ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಮಾಜಿ ವೈಸ್ ಚಾನ್ಸಿಲರ್ ಡಾ ಬಿ.ಎಸ್.ಶೇರಿಗಾರ್ ಅವರಿಗೆ ‘ದೇವಾಡಿಗ ಪ್ರಚಾರ್ಯ ರತ್ನ’, ನಾಗಸ್ವರ ವಾದಕ ನಾಗೇಶ್ ಎ. ಬಪ್ಪನಾಡು ಅವರಿಗೆ ‘ದೇವಾಡಿಗ ನಾದ ರತ್ನ’, ಹಿರಿಯ ರಂಗನಟ, ನಿರ್ದೇಶಕ ಗುಣಪಾಲ್ ಉಡುಪಿ ಅವರಿಗೆ ‘ದೇವಾಡಿಗ ಕಲಾ ರತ್ನ’ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.

ಇದೇ ಸಂದರ್ಭದಲ್ಲಿ ‘ದೇವಾಡಿಗ ವೈದ್ಯ ರತ್ನ’ ಪ್ರಶಸ್ತಿ ಪಡೆದ ಡಾ.ಕೆ.ವಿ.ದೇವಾಡಿಗ, ‘ದೇವಾಡಿಗ ವಿದ್ಯರತ್ನ’ ಪಡೆದ ಸಿಎ ದಿನಕರ್ ಅತ್ತಾವರ್ ಹಾಗೂ ‘ದೇವಾಡಿಗ ವಿಜ್ಞಾನರತ್ನ’ಡಾ.ಹರಿನ್ ಎಸ್.ಉಳ್ಳಾಲ್‌ರ ಅನುಪಸ್ಥಿತಿಯಲ್ಲಿ ಅವರನ್ನು ಸ್ಮರಿಸಲಾಯಿತು.

Devadiga sangha mumbai -Apr 21_2015-010

Devadiga sangha mumbai -Apr 21_2015-011

Devadiga sangha mumbai -Apr 21_2015-012

ಜಯಶ್ರೀಕೃಷ್ಣ ಪರಿಸ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಶ್ರೀಕೃಷ್ಣ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಉದ್ಯಮಿಗಳಾದ ಅಶೋಕ್ ಎನ್. ತ್ರಿವೇದಿ, ಪ್ರೇಮಾನಂದ ಶೆಟ್ಟಿ, ಶೋಧನ್ ಪ್ರಸಾದ್ ಅವರಿಗೆ ‘ದೇವಾಡಿಗ ಸನ್ಮಿತ್ರ ಪ್ರಶಸ್ತಿ’ಯನ್ನು ಪ್ರದಾನಿಸಲಾಯಿತು. ‘ಗಲ್ಫ್ ಕನ್ನಡಿಗ’, ದೇವಾಡಿಗ ಡಾಟ್‌ಕಾಂನ ಸ್ಥಾಪಕ ನಿರ್ದೇಶಕ ಬಿ. ಜಿ. ಮೋಹನ್‌ದಾಸ್‌ರಿಗೆ ಮಾಧ್ಯಮ ಕ್ಷೇತ್ರದದ ಸೇವೆಗಾಗಿ ಹಾಗೂ ಖ್ಯಾತ ಕಬಡ್ಡಿಪಟು ಶಶಾಂಕ್ ದೇವಾಡಿಗರಿಗೆ ಕ್ರೀಡೆಗಾಗಿ ಮತ್ತು ರಿಲಾಯನ್ಸ್‌ನ ವಿಶ್ವಾಸ್ ಅತ್ತಾವರ್‌ರವರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಜೊತೆಗೆ ದೇವಾಡಿಗ ಸಮುದಾಯದ ಸುಮಾರು ಮೂವತ್ತು ಪ್ರತಿಭೆಗಳಿಗೆ ‘ದೇವಾಡಿಗ ಭೂಷಣಶ್ರೀ ಪ್ರಶಸ್ತಿ’ಯನ್ನು ದೇವಾಡಿಗ ಸಂಘ ನೀಡಿ ಗೌರವಿಸಿತು.

Devadiga sangha mumbai pr-Apr 21_2015-013

Devadiga sangha mumbai pr-Apr 21_2015-012

Devadiga sangha mumbai pr-Apr 21_2015-011

Devadiga sangha mumbai pr-Apr 21_2015-009

Devadiga sangha mumbai pr-Apr 21_2015-010

Devadiga sangha mumbai pr-Apr 21_2015-006

Devadiga sangha mumbai pr-Apr 21_2015-005

Devadiga sangha mumbai pr-Apr 21_2015-004

Devadiga sangha mumbai pr-Apr 21_2015-003

Devadiga sangha mumbai pr-Apr 21_2015-002

Devadiga sangha mumbai pr-Apr 21_2015-001

ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್‌ದಾಸ್ ಸಮ್ಮಾನಿತರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಸ್ವಾಗತಿಸಿದರು. ಕೇಂದ್ರದ ಮಾಜಿ ಸಚಿವ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯಿಲಿ ಮತ್ತು ಮಾಲತಿ ವೀರಪ್ಪಮೊಯಿಲಿ ದಂಪತಿ, ಉಡುಪಿ ಜಿಲ್ಲೆಯ ಹಿಂದುಳಿದ ವರ್ಗದ ಗೌರವ ಕಾರ್ಯದರ್ಶಿ ಎ. ಜಯಾನಂದ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ್ ಮರೋಲಿ, ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ರಘು ಶೇರಿಗಾರ್, ರತ್ನಾಕರ ಎ. ಬಂಗೇರ, ದೇವಾಡಿಗ ಡಾಟ್‌ಕಾಂನ ಸ್ಥಾಪಕ ನಿರ್ದೇಶಕ ಬಿ. ಜಿ. ಮೋಹನ್‌ದಾಸ್, ಅತಿಥಿಗಳಾದ ರಿಲಾಯನ್ಸ್‌ನ ವಿಶ್ವಾಸ್ ಅತ್ತಾವರ್, ದಿನೇಶ್ ಆರ್. ದೇವಾಡಿಗ, ಮಹಾಬಲ ದೇವಾಡಿಗ, ಆನಂದ ಎಸ್. ದೇವಾಡಿಗ, ಹರೀಶ್ಚಂದ್ರ ಆರ್. ದೇವಾಡಿಗ, ಕೆ. ಅಣ್ಣಯ್ಯ ಶೇರಿಗಾರ್, ಕೆ. ಜೆ. ದೇವಾಡಿಗ, ಎಂ. ಗಣೇಶ್, ಉಪಾಧ್ಯಕ್ಷರುಗಳಾದ ರವಿ ಎಸ್. ದೇವಾಡಿಗ, ಕೆ. ಎನ್. ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ. ದೇವಾಡಿಗ, ಗೌರವ ಜತೆ ಕಾರ್ಯದರ್ಶಿ ಮಾಲತಿ ಜೆ. ಮೊಯಿಲಿ, ಗಣೇಶ್ ಶೇರಿಗಾರ್, ವಿಶ್ವನಾಥ್ ಬಿ. ದೇವಾಡಿಗ, ದಯಾನಂದ ಆರ್. ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ದೇವಾಡಿಗ ಸಂಘದ ಅಧಿವೇಶನ-ವಿಷನ್ 2025 ಗೆ ಚಾಲನೆ

Devadiga sangha mumbai -Apr 21_2015-009

ಬೆಳಗ್ಗೆ ನಡೆದ ಸಮಾರಂಭವನ್ನು ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉದ್ಘಾಟಿಸಿದರು.

ವಿಷನ್-2025 ನ್ನು ದೀಪ ಪ್ರಜ್ವಲಿಸಿ ಮಾಲತಿ ವೀರಪ್ಪಮೊಯಿಲಿ ಉದ್ಘಾಟಿಸಿದರು. ಅಧಿವೇಶನದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಾಸು ಎಸ್. ದೇವಾಡಿಗ ವಹಿಸಿದ್ದರು.

ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಸಂಘದ ಮಾಜಿ ಅಧ್ಯಕ್ಷ ಎಚ್. ಮೋಹನ್‌ದಾಸ್ ಉಪಸ್ಥಿತರಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎ. ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಎಚ್. ಮೋಹನ್‌ದಾಸ್ ಅಧಿವೇಶನವನ್ನು ಸಂಯೋಜಿಸಿದ್ದರು.

ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ದೇವಾಡಿಗ ಸಂಘಟನೆಗಳ ಪ್ರತಿನಿಧಿಗಳಾದ ಶ್ರೀನಿವಾಸ ಮನ್‌ಕುಡೆ, ದಿನೇಶ್ ಸಿ. ದೇವಾಡಿಗ, ಚಂದ್ರಶೇಖರ್, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಎನ್. ರಘುರಾಂ ದೇವಾಡಿಗ, ಭಾಸ್ಕರ ಮೊಯಿಲಿ ಕೆ., ಗೌರಿ ದೇವಾಡಿಗ, ವಸಂತ ಕುಮಾರ್ ನಿಟ್ಟೆ, ಕೃಷ್ಣಮೂರ್ತಿ, ರಾಜು ದೇವಾಡಿಗ ತ್ರಾಸಿ, ಪ್ರಕಾಶ್ ಯು. ಅಚ್ಚಣ್ಣ, ಪ್ರಭಾಕರ ಜಿ. ದೇವಾಡಿಗ, ಗಣೇಶ್ ದೇವಾಡಿಗ, ಬ್ರಹ್ಮಚಾರಿ, ರವಿಶಂಕರ್ ಜಿ. ಶೇರಿಗಾರ್, ವಿಶ್ವನಾಥ ದೇವಾಡಿಗ, ಕೆ. ನಾರಾಯಣ ದೇವಾಡಿಗ, ಚಂದ್ರಶೇಖರ್ ದೇವಾಡಿಗ, ಪರಮೇಶ್ವರ ದೇವಾಡಿಗ, ಹರಿ ಟಿ. ದೇವಾಡಿಗ, ರಮೇಶ್ ದೇವಾಡಿಗ, ಜನಾರ್ಧನ ದೇವಾಡಿಗ, ಕರುಣಾಕರ ದೇವಾಡಿಗ, ರಾಘವೇಂದ್ರ ಮಣಿಪಾಲ್, ಪ್ರವೀಣ್ ಮಣಿಪಾಲ್ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Devadiga sangha mumbai -Apr 21_2015-021

Devadiga sangha mumbai -Apr 21_2015-022

ಸುಶೀಲಾ ದೇವಾಡಿಗ ಪ್ರಾರ್ಥನೆಗೈದರು. ಜತೆ ಕಾರ್ಯದರ್ಶಿ ಗಣೇಶ್ ದೇವಾಡಿಗ ವಂದಿಸಿದರು. ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ವಿಷನ್-2025 ಹೊರನಾಡು-ಒಳನಾಡು ಸಮಾಜ ಬಾಂಧವರು ಮಂಡಿಸಿದ ಉಪನ್ಯಾಸ, ಸಲಹೆ -ಸೂಚನೆಗಳು ಬರುವ 10 ವರ್ಷಗಳ ಅವಧಿಯಲ್ಲಿ ದೇವಾಡಿಗ ಸಂಘ ಮತ್ತಷ್ಟು ಬಲಶಾಲಿಯಾಗಿ ಬೆಳೆಯುವಲ್ಲಿ ಪ್ರೇರಕಶಕ್ತಿಯಾಗಿ ಮೂಡಿಬಂತು.

ಸಂಗೀತ ಸುಧೆಹರಿಸಿದ ಖ್ಯಾತ ಗಾಯಕ ಹರೀಶ್ ಶೇರಿಗಾರ್

Devadiga sangha mumbai -Apr 21_2015-006

 Devadiga sangha mumbai -Apr 21_2015-008

ಕಾರ್ಯಕ್ರಮದ ಕೊನೆಯಲ್ಲಿ ದುಬೈಯಲ್ಲಿ ತನ್ನ ಉದ್ಯಮದೊಂದಿಗೆ, ಸಮಾಜ ಸೇವೆ, ಕಲಾ ಸೇವೆ, ಹಾಗೂ ದಾನಿಯಾಗಿ ಗುರುತಿಸಲ್ಪಟ್ಟ ದುಬೈಯ ಖ್ಯಾತ ಸಂಗೀತ ಕಲಾವಿದ ಹರೀಶ್ ಶೇರಿಗಾರ್ ಅವರ ನೇತೃತ್ವದಲ್ಲಿ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮ ನೆರೆದವರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿತು.

ಹಳೆಯ ಸಿನಿಮಾದ ಹಾಡುಗಳನ್ನು ಮೆಲುಕು ಹಾಕಿದ ಹರೀಶ್ ಶೇರಿಗಾರ್ ನೆರೆದವರಲ್ಲಿ ರೋಮಾಂಚನವನ್ನು ಮೂಡಿಸಿದರಲ್ಲದೆ ತಾವೂ ಕೂಡಾ ಹಾಡಿಗೆ ತಾಳಹಾಕುವಂತೆ ಪ್ರೇರಣೆ ನೀಡಿದರು.

Devadiga sangha mumbai -Apr 21_2015-001

Devadiga sangha mumbai -Apr 21_2015-003

Devadiga sangha mumbai -Apr 21_2015-004

Devadiga sangha mumbai -Apr 21_2015-005

ಕನ್ನಡ, ತುಳು ಹಾಗೂ ಹಿಂದಿ ಹಾಡಿನ ಮೂಲಕ ಮನತಣಿಸಿದ ಹರೀಶ್ ಶೇರಿಗಾರ್‌ರೊಂದಿಗೆ ಕಿಶೋರಿ ದೇವಾಡಿಗ, ಗಣೇಶ್ ಶೇರಿಗಾರ್, ದೀಕ್ಷಿತ್ ದೇವಾಡಿಗ, ರಿಯಾ, ರಂಜಿನಿ ಮೊಯಿಲಿ ಹಾಗೂ ಲೋಕು ಕುಡ್ಲ ಸಹಕರಿಸಿದರೆ, ಅಶೋಕ್ ದೇವಾಡಿಗ ತಾಂತ್ರಿಕ ಸಹಕಾರ ನೀಡಿದರು.

ಅನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಧರ್ಮಪಾಲ ಯು. ದೇವಾಡಿಗರ ನಿರ್ಮಾಪಕತ್ವದಲ್ಲಿ ಲೋಕು ಕುಡ್ಲ ಅವರ ನಿರ್ದೇಶನದಲ್ಲಿ ‘ಬೊಲ್ಕಿರ್’ ತುಳು ನಾಟಕ ಪ್ರದರ್ಶನವಾಯಿತು.

2 Comments

  1. Hiriadka Mohandas

    It’s an elaborate reporting by Kannadigaworld.com . Thanks for the nice coverage. The 90th Celebration of Devadiga Sangha Mumbai was a grand success and a memorable one with participation of representatives from Devadiga Sanghas all over the globe. The presence of Mr. Harish Sherigar with his melodious voice at the Musical event was electrifying and youngsters were admiring his personality. It’s the Team work which ensured the success and satisfaction of hosting a large number of guest fellowmen. Congratulations to all in the GREAT TEAM of Devadiga Sangha Mumbai.

  2. Congratulations Harishanna. For being honoured with “Udyoga Ratna” award…..you truly deserve it…..we wish you very best for luck for all your future endearment…..

Write A Comment