ಆರೋಗ್ಯ

ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವವರಿಗೆ ಸಿಹಿಸುದ್ದಿ

Pinterest LinkedIn Tumblr

8281facebook-comment-editing

ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ 66(ಎ ) ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದ್ದು , ಅವರೆಲ್ಲರೂ ಪ್ರಕರಣಗಳಿಂದ ಬಚಾವ್ ಆಗಲಿದ್ದಾರೆ .

ಕಾನೂನು ವಿದ್ಯಾರ್ಥಿನಿ ಶ್ರೇಯಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಚೆಳವರಾಜ್ ಅವರಿದ್ದ ಸುಪ್ರೀಂ ಪೀಠ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು 66(ಎ) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹಾಗಾಗಿ ಈ ಸೆಕ್ಷನ್ ಗೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದಿರುವುದರಿಂದ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದವರು ನಿರಾಳರಾಗಿದ್ದಾರೆ.

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ರೀತಿಯ ಬರಹಗಳಿಗೆ ಮಾನಹಾನಿ ಕೇಸ್ ದಾಖಲಿಸಬಹುದಿತ್ತು. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಬರುತ್ತಿದೆ ಎಂಬ ಕೂಗು ಕೇಳಿ ಬರುತ್ತಿತ್ತು. ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ಈ ಸೆಕ್ಷನ್ ವಿರುದ್ದ ಹಲವು ಎನ್ ಜಿ ಓ ಗಳು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದೀಗ  ಸುಪ್ರೀಂಕೋರ್ಟ್ ಈ ತೀರ್ಪು ನೀಡಿರುವುದರಿಂದ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುವವರಿಗೆ ಸಂತಸ ಮೂಡಿದೆ. ಆದರೆ ಅಶ್ಲೀಲ ಬರಹಗಳು ಹಾಗೂ ಮಾನಹಾನಿಯಾಗುವಂತಹ ಬರಹಗಳಿಗೆ ಸಂಬಂಧಿಸಿದಂತೆ ಇನ್ನೂ ಹಲವು ಕಾನೂನುಗಳಿದ್ದು, ಹಾಗಾಗಿ ಮನಬಂದಂತೆ ಕಾಮೆಂಟ್ ಮಾಡುವವರು ಎಚ್ಚರಿಕೆ ವಹಿಸುವುದು ಒಳಿತು.

Write A Comment