ಕುಂದಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಂಗೊಳ್ಳಿ ಘಟಕದ ಸದಸ್ಯರು ಗಂಗೊಳ್ಳಿಯಲ್ಲಿ ಪಾದಯತ್ರೆ ಮೂಲಕ ಕಾಶ್ಮೀರ ಪ್ರವಾಹ ಪೀಡಿತರ ಪರಿಹಾರ ನಿಧಿಯನ್ನು ಸಂಗ್ರಹಿಸಿದರು.
ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಮೇಸ್ತ ನಿಧಿ ಸಂಗ್ರಹ ಪಾದಯಾತ್ರೆಗೆ ಚಾಲನೆ ನೀಡಿದರು.
ಆರೆಸ್ಸೆಸ್ ಮುಖಂಡ ಉಮಾನಾಥ ದೇವಾಡಿಗ, ಹಿಂಜಾವೇ ಗಂಗೊಳ್ಳಿ ಘಟಕದ ಸಂಚಾಲಕ ರತ್ನಾಕರ ಗಾಣಿಗ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ಗಣೇಶ ಶೆಣೈ, ಮಾಜಿ ಗ್ರಾಪಂ ಸದಸ್ಯ ಬಿ.ರಾಘವೇಂದ್ರ ಪೈ, ಹಿಂದು ಸಂಘಟನೆಗಳ ಪ್ರಮುಖರಾದ ರವೀಂದ್ರ ಪಟೇಲ್, ಮೋಹನ ಖಾರ್ವಿ, ಶ್ರೀಧರ ನಾಯ್ಕ್, ಅಶೋಕ ಪೂಜಾರಿ, ಜಯರಾಮ ದೇವಾಡಿಗ (ರಾಜ) ಮೊದಲಾದವರು ಉಪಸ್ಥಿತರಿದ್ದರು.
ಪಾದಯಾತ್ರೆ ಮೂಲಕ ಸಂಗ್ರಹಿಸಲಾದ 25 ಸಾವಿರ ರೂ.ಗಳನ್ನು ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿಗೆ ನೀಡಲಾಯಿತು.