ಮುಂಬಯಿ ಸೆ. 14 ; ಬಿಲ್ಲವ ಜಾಗೃತಿ ಬಳಗ ಮುಂಬಯಿ ಪ್ರತೀ ವರ್ಷ ಆಚರಿಸುತ್ತಿರುವ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಚರಣೆಯು ಈ ಬಾರಿ ಬೋರಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಸೆ. 14ರಂದು ಬೋರಿವಲಿ ಪಶ್ಚಿಮದ ಗೋರಾಯಿ ರೋಡ್ ನಲ್ಲಿರುವ ಸಾಯ್ ಲೀ ಇಂಟರ್ ನೇಷನಲ್ ಕಾಲೇಜು ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಬೆಳಿಗ್ಗೆ ಬಳಗದ ಸ್ಥಾಪಕ ಸದಸ್ಯ ಕೆ. ಬೋಜರಾಜ್, ಅಧ್ಯಕ್ಷ ಎನ್. ಟಿ. ಪೂಜಾರಿ ಹಾಗೂ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ 160 ನೇಯ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಚಾಲನೆ ನೀಡಿದರು. ಬಳಿಕ ಬಳಗದ ಗೌ. ಪ್ರಧಾನ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್ ಮತ್ತು ರೇಖಾ ಕೆ. ಕೋಟ್ಯಾನ್ ರವರ ನೇತೃತ್ವದಲ್ಲಿ ಹರೀಶ್ ಶಾಂತಿ ಹೆಜ್ಮಾಡಿಯವರ ಪೌರೋಹಿತ್ಯದಲ್ಲಿ ಗುರುಪೂಜೆ ನಡೆಯಿತು.
ಬೋರಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ. ಪೂಜಾರಿಯವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಗದ ಗೌ. ಪ್ರಧಾನ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅವರು ಧಾರ್ಮಿಕ ಸಭೆಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಖ್ಯಾತ ಸಾಹಿತಿ, ಸಂಘಟಕ , ರವಿ ರಾ. ಅಂಚನ್ ಅವರು ನಾರಾಯಣ ಗುರುಗಳ ತತ್ವದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಹೊಸ ಪ್ರತಿಭೆಗಳು ಗುರುಗಳ ತತ್ವಗಳ ಬಗ್ಗೆ ಅರಿತು ಇಂತಹ ಸಮಾರಂಭಗಳಲ್ಲಿ ಮಾತನಾಡುವಂತಾಗಬೇಕು ಎಂದರು. ಗುರುತು ಸಂಪಾದಕ ಬಾಬು ಶಿವ ಪೂಜಾರಿ ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಗೋರೆಗಾಂವ್ ನ ಹೋಟೇಲು ಉದ್ಯಮಿ ಕರ್ನಿರೆ ಗಂಗಾಧರ ಅಮೀನ್, ಸಾಯ್ ಲೀ ಇಂಟರ್ ನೇಷನಲ್ ಕಾಲೇಜು ಪ್ರಾಂಶುಪಾಲ ಆಶೀರ್ವಾದ್ ಲೋಖಂಡೆ, ಬಿಲ್ಲವರ ಅಸೋಷಿಯೇಶನ್ ನ ನಿಕಟ ಪೂರ್ವ ಅಧ್ಯಕ್ಷ, ಎಲ್. ವಿ ಅಮೀ ನ್, ಸಾಹಿತಿ ರವಿ ರಾ. ಅಂಚನ್, ಬಳಗದ ಉಪಾಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಕರ್ಕೇರ, ಕೋಶಾಧಿಕಾರಿ ಪದ್ಮನಾಭ ಪೂಜಾರಿ, ಯುವ ವಿಭಾಗದ ಕಾರ್ಯಧ್ಯಕ್ಷ ಮಹೇಂದ್ರ ಸೂರು ಕರ್ಕೇರ, ಕಾರ್ಯದರ್ಶಿ ಎನ್. ವಿ. ಕೋಟ್ಯಾನ್, ಜೆ. ಎಂ. ಕೋಟ್ಯಾನ್ ಬಳಗದ ಹಾಗೂ ಸ್ಥಳೀಯ ಸಮಿತಿಗಳ ಇತರ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಗುರು ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಶ್ರೀ ನಾರಾಯಣಗುರುಗಳ ನಾಮಸ್ಮರಣೆ, ಭಜನೆ, ಕೀರ್ತನೆಗಳೊಂದಿಗೆ ಮಹಾ ಮಂಗಳಾರತಿ ನೆರವೇರಿತು. ಬಳಿಕ ಅನ್ನ ಸಂತರ್ಪರ್ಪಣೆ ನಡೆಯುತು.
ಗುರುಪೂಜೆಯನ್ನು ಪುರೋಹಿತ ಹರೀಶ್ ಶಾಂತಿ ನಡೆಸಿದರೆ ಜಗದೀಶ್ ಕೇಮಾರು ಮತ್ತು ನಿಕೇಶ್ ಪೂಜಾರಿ ಸಹಕರಿಸಿದರು. ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ವಂದಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್