ಅಂತರಾಷ್ಟ್ರೀಯ

ಭಾರತೀಯ ವೈದ್ಯೆಗೆ ಇಗ್ನೊಬೆಲ್

Pinterest LinkedIn Tumblr

Saraiya_Sonal1

ಬೋಸ್ಟನ್, ಸೆ.19: ಮಿಚಿಗನ್‌ನಲ್ಲಿ ವೈದ್ಯೆಯಾಗಿರುವ ಭಾರತೀಯ ಮೂಲದ ಡಾ. ಸೋನಾಲ್ ಸರೈಯಾ ನಡೆಸಿರುವ ಸಂಶೋಧನೆಯೊಂದಕ್ಕೆ ಈ ಸಾಲಿನ ಇಗ್ನೊಬೆಲ್ ಬಹುಮಾನ ಸಂದಿದೆ.

ಮೂಗಿನಲ್ಲಿ ಅನಿಯಂತ್ರಿತ ರಕ್ತಸ್ರಾವದಿಂದ ಬಳಲುತ್ತಿರುವ ಮಗುವಿನ ಮೂಗಿಗೆ ವೈದ್ಯಕೀಯವಾಗಿ ಉಪಚರಿಸಲಾದ ಪ್ರಾಣಿ ಮಾಂಸದ ಪಟ್ಟಿಯನ್ನು ಕಟ್ಟುವ ಮೂಲಕ ಮೂಗಿನಲ್ಲಿ ಕಂಡು ಬರುವ ರಕ್ತಸ್ರಾವವನ್ನು ತಡೆಯಬಹುದು ಹಾಗೂ ಇದರಿಂದ ಮೆದುಳಿನ ರಕ್ತಸ್ರಾವವನ್ನೂ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದು ಸರೈಯಾ ಹಾಗೂ ಅವರ ಸಿಬ್ಬಂದಿ ಸಂಶೋಧನೆಯ ಮೂಲಕ ಕಂಡುಕೊಂಡಿದ್ದಾರೆ.

ಮೇಲ್ನೋಟಕ್ಕೆ ಕ್ಲುಲ್ಲಕವಾಗಿ ಕಂಡರೂ ಪ್ರಾಯೋಗಿಕವಾಗಿ ಉಪಯುಕ್ತವೆನಿಸುವ ಸಂಶೋಧನೆಗಳಿಗೆ ಇಗ್ನೊಬೆಲ್ ಬಹುಮಾನವನ್ನು ನೀಡಲಾಗುತ್ತದೆ.

ಮೂಗಿನ ಹೊಳ್ಳೆಗಳಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ನಾಲ್ಕರ ಹರೆಯದ ಮಗುವೊಂದರ ಮೂಗಿಗೆ ವೈದ್ಯಕೀಯವಾಗಿ ಉಪಚರಿಸಲಾದ ಪ್ರಾಣಿ ಮಾಂಸದ ಪಟ್ಟಿಯನ್ನು ಎರಡು ಬಾರಿ ಬಳಸಿದ ಬಳಿಕ ಮೂಗಿನಲ್ಲಿ ರಕ್ತಸ್ರಾವವು ಸಂಪೂರ್ಣವಾಗಿ ನಿಂತಿರುವುದನ್ನು ತಮ್ಮ ಪ್ರಯೋಗದಿಂದ ಸಂಶೋಧಕರು ಖಚಿತಪಡಿಸಿಕೊಂಡಿದ್ದಾರೆ.

ಆದರೆ ಈ ಮಾಂಸಪಟ್ಟಿ ಪ್ರಯೋಗವನ್ನು ಮೂಗಿನ ಸಾಮಾನ್ಯ ರಕ್ತಸ್ರಾವದ ಸಂದರ್ಭಗಳಿಗೆ ವೈದ್ಯೆ ಶಿಫಾರಸು ಮಾಡಿಲ್ಲವೆನ್ನಲಾಗಿದೆ. ಹಾಗೆ ಮಾಡಿದಲ್ಲಿ ಅದು ಸೋಂಕಿಗೆ ಕಾರಣವಾಗಬಹುದು ಎಂದವರು ಎಚ್ಚರಿಸಿದ್ದಾರೆ.

Write A Comment