ರಾಷ್ಟ್ರೀಯ

ಅತ್ಯಾಚಾರಕ್ಕೊಳಗಾಗಿ ದೂರು ನೀಡಲು ಬಂದವಳ ಮೇಲೆಯೇ ಅತ್ಯಾಚಾರ : ಪೊಲೀಸ್ ಅಧಿಕಾರಿ ವಿರುದ್ಧ ಕೇಸ್

Pinterest LinkedIn Tumblr

rape1111

ನವದೆಹಲಿ, ಸೆ.20: ಉತ್ತರ ದೆಹಲಿಯ ಕಾರ್ವಾಲ್ ನಗರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬಳು ಸಹಾಯ ಬೇಡಿಬಂದ ಸಂದರ್ಭ ಅಂದಿನ ಠಾಣಾಧಿಕಾರಿ ಮತ್ತು ಇಂದಿನ ರಾಷ್ಟ್ರಪತಿ ಭವನದ ಭದ್ರತಾ ಅಧಿಕಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಅಧಿಕಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಅಧಿಕಾರಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಿವೃತ್ತ ಅಧಿಕಾರಿ ಹೆಸರು ರಮಣ್‍ಝಾ. ಈಗ ಈ ವ್ಯಕ್ತಿ ರಾಷ್ಟ್ರಪತಿ ಭವನದ ಭದ್ರತಾ ಅಧಿಕಾರಿ. ಜೂನ್ 6ರಂದು ಮಹಿಳೆಯೊಬ್ಬಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ಕಾರ್ವಾಲ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮೂವರು ಆರೋಪಿಗಳ ಹೆಸರುಗಳನ್ನೂ ದಾಖಲಿಸಿದ್ದಳು.

ಪ್ರಕರಣದ ತನಿಖೆ ವೇಳೆ ಮಹಿಳೆ ಹಾಜರಾಗಿದ್ದಳು. ಆಗ ಅಲ್ಲಿ ಅಧಿಕಾರಿಯಾಗಿದ್ದ ರಮಣ್ ಝಾ ಆಕೆಗೆ ಮತ್ತು ಬರುವ ಔಷಧಿ ಮಿಶ್ರಿತ ಪಾನೀಯ ಕುಡಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದ. ಆ ದೃಶ್ಯವನ್ನು ಮಹಿಳೆಯ ಮೊಬೈಲ್‍ಗೆ ರವಾನಿಸಿದ್ದ. ಮಹಿಳೆ ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ರಮಣ್‍ಝಾ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳೆಯ ದೂರಿನಲ್ಲಿ ಸತ್ಯಾಂಶಗಳಿದ್ದು, ಶೀಘ್ರವೇ ರಮಣ್ ಝಾನನ್ನು ತನಿಖೆಗೆ ಗುರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment