ಕರಾವಳಿ

ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ : ವಾಹನ, ಮೂರು ದನ ಹಾಗೂ ಒರ್ವ ಆರೋಪಿ ಪೊಲೀಸ್ ವಶ

Pinterest LinkedIn Tumblr

Bantwal_cattle_Crime_1

ಬಂಟ್ವಾಳ: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟವನ್ನು ಬಂಟ್ವಾಳ ನಗರ ಠಾಣಾ ಪೊಲಿಸರು ಬಿ.ಸಿ.ರೋಡಿನ ವೃತ್ತ ಬಳಿ ಭಾನುವಾರ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಬಡಗಬೆಳ್ಳೂರಿನ ನಿವಾಸವೊಂದರಲ್ಲಿ ಅವಿತು ಕುಳಿತಿದ್ದ ಒರ್ವ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯು ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್ ಅವರು ಮೆಲ್ಕಾರ್ ಬಳಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಮಾಣಿಯಿಂದ ಮಂಗಳೂರು ಕಡೆಗೆ ತರಳುತ್ತಿದ್ದ ಪಿಕಪ್ ವಾಹನವನ್ನು ಅನುಮಾನದಿಂದ ನಿಲ್ಲಿಸಲು ಸೂಚನೆ ನೀಡಿದರು. ಆದರೆ ಪಿಕಪ್ ಚಾಲಕ ಪೊಲೀಸರ ಸೂಚನೆಯನ್ನು ದಿಕ್ಕರಿಸಿ ಶರವೇಗದಲ್ಲಿ ಬಿ.ಸಿ.ರೋಡಿನತ್ತ ದಾವಿಸಿದ್ದು ತಕ್ಷಣ ಪೊಲೀಸರು ಈ ವಾಹನವನ್ನು ಬೆನ್ನಟ್ಟಿ ಬಿ.ಸಿ.ರೋಡಿನ ವೃತ್ತ ಬಳಿ ಅಡ್ಡಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Bantwal_cattle_Crime_2

Bantwal_cattle_Crime_3 Bantwal_cattle_Crime_5

ಈ ಸಂದರ್ಭದಲ್ಲಿ ಪಿಕಪ್ ಚಾಲಕ ಸಹಿತ ಇತರ ಇಬ್ಬರು ವಾಹನ ಬಿಟ್ಟು ಸ್ಥಳದಿಂದ ಪರಾರಿಯಾದರು. ಪೊಲಿಸರು ವಾಹನವನ್ನು ಪರಿಸೀಲಿಸಿದಾಗ ಮೂರು ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂತು. ಕೂಡಲೇ ವಾಹನ ಹಾಗೂ ದನವನ್ನು ವಶಪಡಿಸಿಕೊಂಡರು.

Bantwal_cattle_Crime_4

ಇದಾದ ಕೆಲ ಹೊತ್ತಿನ ಬಳಿಕ ಪರಾರಿಯಾದ ಆರೋಪಿಗಳ ಪೈಕಿ ಮುಜಾಜ್ ಎಂಬಾತ ಬಡಗಬೆಳ್ಳೂರಿನ ಮನೆಯೊಂದರಲ್ಲಿ ಅವಿತುಕೊಂಡಿರುವ ಬಗ್ಗೆ ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮಾಹಿತಿ ಪಡೆದು ಆತನನ್ನು ಹಿಡಿದು ಪೊಲಿಸರಿಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ. ಪರಾರಿಯಾಗುವ ವೇಳೆ ಇನ್ನೋರ್ವ ಆರೋಪಿಗೆ ಗಾಯವಾಗಿರುವ ಬಗ್ಗೆಯೂ ಪೊಲಿಸರಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದದಾರೆ.

Write A Comment