ಮಂಗಳೂರು, ಸೆ.22: ಬಡತನ ಮತ್ತು ನಿರುದ್ಯೋಗ ದೇಶದ ಪ್ರಮುಖ ಸಮಸೈಗಳಾಗಿದ್ದು, ಇದರ ನಿವಾರಣೆಯಲ್ಲಿ ಸಮಾಜ ಸೇವಾ ಸಂಸ್ಥೆಗಳು ನೀಡುವ ಪ್ರತಿಯೊಂದು ಕೊಡುಗೆ ಮಹತ್ತರ ಪರಿವರ್ತನೆ ತರುತ್ತದೆ. ಮತ್ರವಲ್ಲದೇ ಬಡತನ, ನಿರುದ್ಯೋಗ ಸಮಸ್ಯೆಯ ಸವಾಲನ್ನು ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಭಾರತದ ಉಪ ರಾಷ್ಟ್ರಪತಿ ಎಂ. ಹಮಿದ್ ಅನ್ಸಾರಿ ಹೇಳಿದ್ದಾರೆ..ಅವರು ಇಂದು ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆದ ಕೆಥೊಲಿಕ್ ಅಸೋಸಿಯೇಶ್ ಆ್ ಸೌತ್ ಕೆನರಾ(ಕಾಸ್ಕ್)ದ ಶತಮಾನೋತ್ಸವ ಆಚರಣೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳು, ಚರ್ಚ್ಗಳು ಗಮನಾರ್ ಸೇವೆ ಸಲ್ಲಿಸುತ್ತಾ ಬಂದಿವೆ. ಏಸುಕ್ರಿಸ್ತರ ಸಂದೇಶದಂತೆ ನಿಸ್ವಾರ್ಥ ಸೇವೆಗೆ ಒತ್ತು ನೀಡುತ್ತಾ ಬಂದಿರುವ ಕಾಸ್ಕ್ ನಂತಹ ಕ್ರೈಸ್ತ ಸಂಸ್ಥೆಗಳು ಈ ನಿಟ್ಟಿನಲ್ಲಿ ಮಹತ್ವದ ಸಾಧನೆಗೈದಿವೆ ಎಂದು ಹಾಮಿದ್ ಅನ್ಸಾರಿ ಕ್ರೈಸ್ತ ಸಂಸ್ಥೆಗಳನ್ನು ಅಭಿನಂದಿಸಿದರು.
ದೇಶದಲ್ಲಿ ಬಡತನ, ನಿರುದ್ಯೋಗ ಗಂಭೀರ ಸಮಸ್ಯೆಯಾಗಿ ಕಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲೂ ತಮ್ಮ ಸೇವಾ ಚಟುವಟಿಕೆಯನ್ನು ವಿಸ್ತರಿಸಬೇಕಾಗಿದೆ. ನಿರುದ್ಯೋಗಿಗಳಿಗೆ ವೃತ್ತಿಪರ ಕೌಶಲ್ಯ ವನ್ನು ಮೈಗೂಡಿಸಿೊಳ್ಳಲು, ಉದ್ಯೋಗಾವ ಾಶಗಳನ್ನು ಸೃಷ್ಟಿಸಲು ಸಹಕರಿಸುವಂತೆ ಕರೆ ನೀಡಿದರು.
ಕ್ರೈಸ್ತ ಧರ್ಮದ ಕೆಥೊಲಿಕ್ ಸಮುದಾಯವು ಸೈಂಟ್ ಥೋಮಸ್ರವರು ಭಾರತದ ಮಲಬಾರ್ ತೀರಕ್ಕೆ ಬಂದಿಳಿದ ನಂತರದಿಂದ ಇಲ್ಲಿ ಸೇವಾ ಕಾರ್ಯನಿರ್ವಹಿಸುತ್ತಾ ಬಂದಿದೆ. ಕ್ರೈಸ್ತರು ದೇಶದಲ್ಲಿ ಜಾತ್ಯತೀತ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾ ದೇಶದ ಏಕತೆ, ಸಮಗ್ರತೆೆಯನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದ್ದಾರೆ. ಕೆಥೊಲಿಕ್ ಅಸೋಸಿಯೇಶನ್ನಂತಹ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಸಮಾಜ ಸೇವೆಯ ಜೊತೆಗೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಇಂತಹ ಸಂಸ್ಥೆಗಳು ಶತಮಾನೋತ್ಸವ ಆಚರಿ ಸುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ ಮಾತನಾಡುತ್ತಾ, ಕ್ರೈಸ್ತರು ಸೇವಾ ಮನೋಭಾವ ಹೊಂದಿದವರು. ಬಡವರ ಸೇವೆಯೆ ದೇವರ ಕಾರ್ಯ ಎಂದು ಭಾವಿಸಿಕೊಂಡು ತಮ್ಮನ್ನು ದೇಶಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ದೇಶದ ಪ್ರಗತಿಯಲ್ಲಿ ಜಾತಿ-ಧರ್ಮ, ಮೇಲು ಕೀಳು ಎಂದು ವಿಭಾಗಿಸದೆ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಕವಿ ಇಕ್ಬಾಲ್ ಹೇಳಿದಂತೆ, ಭಾರತದಲ್ಲಿ ಭಾಷೆ, ಧರ್ಮ, ಪ್ರಾದೇಶಿಕ ಭಿನ್ನತೆ ಇದ್ದರೂ ಭಾರತೀಯರೆಲ್ಲಾ ಒಂದೇ ಎನ್ನುವ ಮನೋಭಾವದ ಮೂಲಕ ದೇಶದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಸ್ಕ್ನ ಪೋಷಕರ ಹಾಗೂ ಮಂಗಳೂರು ಕೆಥೊಲಿಕ್ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಅತಿ.ವಂ.ಡಾ.ಅಲೋಶೀಯಸ್ ಪಾವ್ಲ್ ಡಿಸೋಜ, ಶತಮಾನೋತ್ಸವ ಆಚರಿ ಸುತ್ತಿರುವ ಕಾಸ್ಕ್ ಸಂಸ್ಥೆಗಳು ದ್ವಿಶತ ಮಾನೋತ್ಸವವನ್ನು ಆಚರಿಸುವಂತಾ ಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಸ್ಕ್ ಸಂಸ್ಥೆಯ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು ಬಿಡುಗಡೆ ಗೊಳಿಸಿದರು.
ಸಮಾರಂಭದಲ್ಲಿ ಉಪರಾಷ್ಟ್ರಪತಿ ಯವರ ಪತ್ನಿ ಸಲ್ಮಾ ಹಾಮಿದ್ ಅನ್ಸಾರಿ, ಭಾರತ ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ ರಾಯಬಾರಿ ಎರಿಕ್ ಗೊನ್ಸಾಲ್ವಿಸ್, ರಾಜ್ಯ ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕರ್ನಾಟಕ ವೃತ್ತದ ಪೋಸ್ಟ್ ಮಾಸ್ಟರ್ ಪ್ರಧಾನ ಮಹಾಪ್ರಬಂಧಕ ಎಂ.ಎಸ್.ರಾಮಾನುಜನ್ ಉಪಸ್ಥಿತರಿದ್ದರು.
ಕಾಸ್ಕ್ ಸಂಸ್ಥೆಯ ಅಧ್ಯಕ್ಷ ಡಾ.ಡೆರಿಕ್ ಲೋಬೊ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾಪ್ಟನ್ ಜೆ.ಪಿ. ಮಿನೇಜಸ್ ವಂದಿಸಿದರು.