ಮುಂಬಯಿ : 2014 ಡಿಸೆಂಬರ 12ರಿಂದ 14ರ ತನಕ ಮಂಗಳೂರಿನ ಸಯ್ಯಾದ್ರಿ ಕಾಲೇಜು ಆವರಣದಲ್ಲಿ ಜರಗಲಿರುವ ವಿಶ್ವ ತುಳುವೆರೆ ಪರ್ಬದ ನಿಮಿತ್ತ ಪೂರ್ವಭಾವಿ ಸಭೆಯು ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗರ ಅಧ್ಯಕ್ಷತೆಯಲ್ಲಿ ಸೆ. 20 ರಂದು ಕುರ್ಲಾದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ್ದು ಮುಂಬಯಿ ಹಾಗೂ ಉಪನಗರಗಳ ಹೆಚ್ಚಿನ ಗಣ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಅಖಿಲ ಭಾರತ ತುಳು ಒಕ್ಕೂಟ, ವಿಶ್ವ ತುಳುವೆರೆ ಪರ್ಬ ರಜತೋತ್ಸವ ಸಮಿತಿ ಮಹಾರಾಷ್ಟ್ರ ಮತ್ತು ತುಳು ಕೂಟ ಮುಂಬಯಿಯ ಜಂಟಿ ಆಶ್ರಯದಲ್ಲಿ ನಡೆದ ಈ ಸಭೆಯನ್ನು ಬಂಟರ ಸಂಘದ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಇತರ ಕಡೆಗಳಲ್ಲಿ ಹಾಗೂ ದೆಹಲಿಯಲ್ಲಿ ತುಳು ಬಾಷಾ ಅಭಿಯಾನವನ್ನು ನಡೆಸಲಿದ್ದು ತುಳುವರನ್ನು ಒಂದುಗೂಡಿಸಿ ವಿಶ್ವ ತುಳುವೆರೆ ಪರ್ಬಕ್ಕೆ ಆಹ್ವಾನಿಸುತ್ತೇವೆ. ಎಲ್ಲಾ ತುಳುವರು ಒಂದಾಗಿ ಈ ಉತ್ಸವವನ್ನು ಯಶಸ್ಸಿಗೊಳಿಸಬೇಕು ಎಂದು ಧರ್ಮಪಾಲ್ ಯು. ದೇವಾಡಿಗರು ನುಡಿದರು.
ಬಂಟರ ಸಂಘದ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಯವರು ಮಾತನಾಡುತ್ತಾ ತುಳು ಸಂಸ್ಕೃತಿಗೆ ಪೂರಕವಾಗಿರುವ ಈ ಉತ್ಸವಕ್ಕೆ ಬಂಟ ಸಮುದಾಯದ ಹಾಗೂ ಸಂಘಟನೆಯ ಸಹಕಾರ, ಬೆಂಬಲವನ್ನು ವ್ಯಕ್ತಪಡಿಸಿದರು.
ರಜತಮಹೋತ್ಸವ ಸಮಿತಿ ಮಹಾರಾಷ್ಟ್ರ ಇದರ ಕಾರ್ಯಾಧ್ಯಕ್ಷ ಜಯಕೃಷ್ಣ ಎ. ಶೆಟ್ಟಿ ಯವರು ಮಾತನಾಡುತ್ತಾ ಪ್ರತಿಯೊಬ್ಬ ತುಳುವರು ಆಸಕ್ತಿಯಿಂದ ಈ ಪರ್ಬದಲ್ಲಿ ಪಾಲ್ಗೊಳ್ಳಬೇಕು ಎಂದರು. ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕರ್ನಾಟಕದ ಮುಖ್ಯಮಂತ್ರಿಯವರನ್ನು ಈ ಪರ್ಬಕ್ಕೆ ಆಮಂತ್ರಿಸಿ, ತುಳು ಬಾಷೆಗೆ ಮಾನ್ಯತೆ ನೀಡುವ ಬಗ್ಗೆ ಮುಖ್ಯ ಮಂತ್ರಿಯಿಂದಲೇ ಹೇಳಿಕೆ ನೀಡುವಂತೆ ಮಾಡಬೇಕಾಗಿದೆ ಎಂದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಮುಂಬಯಿ ಸಮಿತಿ ಸಂಚಾಲಕ ಜಿ. ಟಿ. ಆಚಾರ್ಯ, ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟಿ ಶಶಿಧರ ಶೆಟ್ಟಿ, ತುಳುಕೂಟ ಇದರ ಅಧ್ಯಕ್ಷ ಡಾ| ನಿರಂಜನ ರೈ,
ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿತ್ಯಾನಂದ ಡಿ. ಕೋಟ್ಯಾನ್, ವಿಶ್ವನಾಥ ಮಾಡ, ಬಾಲಕೃಷ್ಣ ಭಂಡಾರಿ, ಡಾ| ಸುನೀತಾ ಎಂ. ಶೆಟ್ಟಿ, ಎಲ್. ವಿ. ಅಮೀನ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ಪಿ. ಡಿ. ಶೆಟ್ಟಿ, ಎಸ್. ಕೆ. ಶ್ರೀಯಾನ್, ಶ್ಯಾಮ ಎನ್. ಶೆಟ್ಟಿ, ನ್ಯಾಯವಾದಿ ಶೇಖರ್ ಭಂಡಾರಿ, ಗಣೇಶ್ ಎರ್ಮಾಳ್, ಅಶೋಕ್ ಸಸಿಹಿತ್ಲು, ಕರ್ನೂರು ಮೋಹನ್ ರೈ, ದಯಾಸಾಗರ್ ಚೌಟ, ನ್ಯಾಯವಾದಿ ಬಿ. ಮೊಯಿದ್ದೀನ್ ಮುಂಡ್ಕೂರು, ಸಿಎ ಐ. ಆರ್. ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ, ರವಿ ಮೆಂಡನ್ ಕುರ್ಕಾಲ್, ಜಯಕರ ಡಿ ಪೂಜಾರಿ, ಶೆಡ್ಡೆ ವಿಶ್ವನಾಥ ಶೆಟ್ಟಿ, ಚಿತ್ರಾಪು ಕೆ. ಎಂ. ಕೋಟ್ಯಾನ್, ಎಂ. ಎನ್. ಕರ್ಕೇರ, ಹಿರಿಯಡ್ಕ ಮೋಹನ್ ದಾಸ್, ವಾಸು ದೇವಾಡಿಗ, ಡಾ| ರವಿರಾಜ್ ಸುವರ್ಣ, ಮುಂಬಯಿ ನ್ಯೂಸ್ ನ ವಾಣಿ ಪ್ರಸಾದ್ ಕರ್ಕೇರ ಮತ್ತು ಇತರ ತುಳು-ಕನ್ನಡಿಗ ಸಂಘಟನೆಗಳ ಗಣ್ಯರು ಹಾರೂ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್