ಮಂಜೇಶ್ವರ,ಸೆ.25: ಹದಿನೆಂಟು ಪೇಟೆಯ ದೇವಳ ವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ಅನುಗ್ರಹ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರಕ್ಕೆ ಸಂಭಂದಪಟ್ಟ ಸ್ವರ್ಣ ಪ್ರಶ್ನೆಯ ಪರಿಹಾರಕ್ಕಾಗಿ 18 ಪೇಟೆಗಳಿಗೆ ಸಂಭಂದಪಟ್ಟ ಮಹಾಜನರ ಸಾಮೂಹಿಕ ಪ್ರಾರ್ಥನೆಯು ಸೆಪ್ಟೆಂಬರ್ 27 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ . ಬಳಿಕ 11 ಗಂಟೆಗೆ 18 ಪೇಟೆಗೆ ಒಳಪಟ್ಟ ಸರ್ವ ದೇವಾಲಗಳ ಮತ್ತು ಭಜನಾ ಮಂದಿರಗಳ ಮೋಕ್ಥೆಸರರು , ಹತ್ತು ಸಮಸ್ತರು ಹಾಗೂ ಪ್ರತಿನಿಧಿಗಳ ಮಹಾಸಭೆ ನಡೆಯಲಿದೆ . ಮಧ್ಯಾನ 1.30 ಕ್ಕೆ ಮಹಾ ಪೂಜೆ , ಸಮಾರಾಧನೆ ಸಂಜೆ ನಗರ ಭಜನೆ ಬಳಿಕ ಮಂಜೇಶ್ವರ ಭಜಕರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ರಾತ್ರಿ ಹೂವಿನ ಪೂಜೆ ನಡೆಯಲಿದೆ .
ಕ್ಷೇತ್ರದಲ್ಲಿ ಭಜಕರು ಪ್ರತಿಸ್ಥಾಪಿಸಿದ ಹಲವಾರು ಶಿಲಾಮಯ ನಾಗಮುರ್ತಿ ಭಿನ್ನವಾಗಿರುವುದರಿಂದ ಇದರ ಪರಿಹಾರ ವಿವರವನ್ನು ಭಜಕರು ದೇವಳದ ಅಗ್ರಹಾರಕ್ಕೆ ಸಂಪರ್ಕಿಸಿ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಮ್ರ ವಿನಂತಿ . ಶತಮಾನಗಳಿಂದ ನಡೆದು ಬಂದ “ದೇವದರ್ಶನ” ಎಂಬ ವಿಶೇಷ ಆವೇಶವು ದೇಶದಲ್ಲಿಯೇ ಪ್ರಸಿದ್ಧವಾಗಿತ್ತು.ಸುಮಾರು 76 ವರುಷಗಳಿಂದ ಈ ದೇವ ದರ್ಶನ ನೋಡುವ ಭಾಗ್ಯ ನಮಗೆ ಇಲ್ಲ.ಈ ಬಗ್ಯೆ ವಿಶೇಷ ಪ್ರಾರ್ಥನೆ ಗಳಿಂದ ಸಿಗಬಹುದು ಎಂಬ ಆಶಯ ಭಜಕವೃಂದಕ್ಕೆ ಇದೆ.ಈ ಮಂಜುಳ ಕ್ಷೇತ್ರವು ಶ್ರದ್ಧೆ, ಭಕ್ತಿ,ಶಕ್ತಿ, ಸಾಹಸ,ಐಶ್ವರ್ಯ,ದಾನ,ಧರ್ಮ, ಮತ್ತು ಪರೋಪಕಾರಗಳ ಸೌಭಾಗ್ಯಗಳಿಂದ ತುಂಬಿತ್ತು ಎಂದು ಸ್ಥಳಪುರಾಣಗಳು ತಿಳಿಸುತ್ತವೆ.
“ಭಕ್ತಿಯಲಿ ಶಕ್ತಿಯಲಿ ಧನ ಸಂ/ಪತ್ತಿಯಲಿ ಸತ್ವಾತಿಶಯದಲಿ/ವ್ಯಕ್ತ ಲೌಕಿಕ ಪಾರಲೌಕಿಕ ಬುದ್ಧಿ ಮಾರ್ಗದಲಿ/
ಶಕ್ತರಿಹರೀ ಕ್ಷೇತ್ರವಾಸಿ ಸ/ಮಸ್ತ ಕೊಂಕಣ ವರ್ಗವೆನಿಸಿದು/ದುತ್ತಮ ಶ್ರೀಶೇಷನಾರಾಧನೆಯ ಫಲವಂತೆ//
ಈಪವಿತ್ರ ಪುಣ್ಯ ಕ್ಷೇತ್ರವು ದೈವದತ್ತವಾಗಿ ಪ್ರಾಪ್ತವಾಗಿದೆ ಎನ್ನುತ್ತದೆ. ಸ್ಥಳಪುರಾಣ ಹೀಗನ್ನುತ್ತದೆ.
ಸತ್ಯ. ಸದ್ಧರ್ಮಿಗಳ ಶಾಂತರ /ನಿತ್ಯ ಸದ್ಭಕ್ತರ ವಿರಕ್ತರ /ಸ್ಥೈರ್ಯ ಕಾರ್ಯರ ಗೌಡಸಾರಸ್ವತ ಸುಭ್ರಾಹ್ಮಣರ //
ನಿತ್ಯ ಜಪ, ತಪ, ಭಕ್ತಿ, ಮಾರ್ಗದಿ /ಸತ್ಯ ನಾರಾಯಣನ ತಣಿಸಿದ /ಭಕ್ತಿ ಸಾಧನ ಮಾಗಿ ಲಭಿಸಿದ ಪುಣ್ಯ ಕ್ಷೇತ್ರವಿದು.
ಇಂತಹ ಪರಮ ಪವಿತ್ರ ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಪೌರಾಣಿಕ ಐತಿಹಾಸಿಕ ದೈವಿಕ ಕಾರಣೀಕಗಳು ಅನೇಕ.ಈ ಎಲ್ಲ ವಿಷಯಗಳ, ಹಾಗೂ ಗತ ವೈಭವಗಳ ಪುನರುತ್ಥಾನ ಚರಿತ್ರಯು ಕ್ರಿ.ಶಕ 6 ನೇ ಶತಮಾನದ ವರೆಗೆ ಸಂಶೋಧಿಸಲ್ಪಟ್ಟಿದೆ ಎಂದು ದೇವಸ್ಥಾನದ ದಾಖಲೆಗಳಲ್ಲಿದೆ.
2011 ರಲ್ಲಿ 75 ದಿವಸಗಳಲ್ಲಿ ಗರ್ಭಗೃಹ ದ ಪೂರ್ಣ ಜೀರ್ಣೋದ್ಧಾರ ವಾದುದು ಇತ್ತೀಚೆಗಿನ ದಿವಸಗಳಲ್ಲಿ ನಾವು ನೋಡಿದ ಪವಾಡ ಸದೃಶ್ಯ ಭಗವಂತನ ಕೃಪೆ ಎಂದರೆ ಆಶ್ಚಯ೯ ವಲ್ಲ.ಮುಂದಿನ ಎಲ್ಲ ದೇವತಾಕಾರ್ಯಗಳು ಅತ್ಯಂತ ಶ್ರದ್ಧಾಭಕ್ತಿಗಳಿಂದ ಎಲ್ಲ ಭಜಕವೃಂದದವರ ಸಮಾಜ ಭಾಂಧವರ ಸಹಯೋಗದಿಂದ ನಡೆಯುವ ಭಾಗ್ಯದಲ್ಲಿ ನಮ್ಮೆಲ್ಲರ ತನು ಮನ ಧನ ಗಳ ವಿನಿಯೋಗದಿಂದ ನಾವೆಲ್ಲ ಪಾವನರಾಗೋಣ ಎಂಬುವ ಸದಾಶಯ.
ಚಿತ್ರ : ಮಂಜು ನಿರೇಶ್ವಲ್ಯ