ಕರಾವಳಿ

ಕುಂದಾಪುರದಲ್ಲಿ ಹುತಾತ್ಮ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ

Pinterest LinkedIn Tumblr

ಕುಂದಾಪುರ: ಭಾರತದ ರಾಜಕಾರಣ ದಿಗಂತದಲ್ಲಿ ರಾಜಕಾರಣಕ್ಕೆ ದಿವ್ಯ ಪ್ರಕಾಶವನ್ನು ನೀಡಿ ಶುದ್ದ ಚಾರಿತ್ರ್ಯಶೀಲ ವ್ಯಕ್ತಿಯೊಬ್ಬ ರಾಜಕೀಯ ಕ್ಷೇತ್ರವನ್ನು ಪವಿತ್ರಗೊಳಿಸಲು ಸಾಧ್ಯವಿದೆ ಎಂಬುವುದನ್ನು ಸಾಧಿಸಿ ತೋರಿಸಿದ ಮಹಾನ್ ವ್ಯಕ್ತಿ ಹುತಾತ್ಮ ಪಂಡಿತ್ ದೀನದಯಾಳ್ ಉಪಾಧ್ಯಾಯರು ಎಂದು ಮಾಜಿ ಸಚಿವ ಶ್ರೀನಿವಾಸ ಪೂಜಾರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

Sep25-Kundapur BJP-(2)
ಹುತಾತ್ಮ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಅಂಗವಾಗಿ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯವನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸಿರುವವರು ಹಲವರಿದ್ದು ರಾಜಕೀಯವನ್ನು ಒಂದು ವೃತವನ್ನಾಗಿ ಸ್ವೀಕರಿಸಿದ ಭಾರತದ ಕೆಲವೇ ಕೈಬೆರಳೆಣಿಕೆಯ ನಾಯಕರಲ್ಲಿ ದೀನದಯಾಳ್ ಉಪಾಧ್ಯಾಯರು ಒಬ್ಬರಾಗಿದ್ದರು. ತನ್ನ ಬದುಕಿನುದ್ದಕ್ಕೂ ಜನಪ್ರಿಯ ಗೌರವಾನ್ವಿತ ವ್ಯಕಿಯಾಗಿ ಬಾಳಿದ ದೀನದಯಾಳರು ಇಂದು ಬದುಕಿದ್ದರೆ ದೇಶದ ರಾಜಕೀಯವನ್ನೇ ಬದಲಿಸುತ್ತಿದ್ದರು.

ಭಾರತದ ಅರ್ಥನೀತಿಗೆ ಏಕಾತ್ಮ ಮಾನವತಾವಾದದ ಮೂಲಕ ಒಂದು ಹೊಸ ಆಯಾಮವನ್ನು ನೀಡಿದ ದೀನದಯಾಳರ ಕೊಡುಗೆಗೆ ದೇಶ ಚಿರ‌ಋಣಿಯಾಗಬೇಕು. ಅವರ ದೂರದರ್ಶಿತ್ವದ ವಿಚಾರಧಾರೆಗಳು ಎಷ್ಟು ಸಹಜವಾಗಿತ್ತೆಂದು ಇಂದು ಎಲ್ಲರೂ ಒಪ್ಪಿಕೊಳ್ಳುವಂತಹದಾಗಿದೆ. ವ್ಯಕ್ತಿತ್ವ, ವಿಚಾರ ಮತ್ತು ಸ್ಪಷ್ಟ ಸಿದ್ದಾಂತಗಳಿಂದಾಗಿ, ಅವರು ರಾಜಕಾರಣಿಗಳಿಗೆ ಆದರ್ಶ ಪುರುಷರಾಗಿದ್ದಾರೆ. ವ್ಯಕ್ತಿ ಕಣ್ಮರೆಯಾದ ನಂತರ ಆತನ ವಿಚಾರಧಾರೆಯನ್ನು ಅನುಷ್ಠಾನಕ್ಕೆ ತರುವುದೇ ನಿಜವಾದ ಸ್ಮರಣೆ ಮತ್ತು ಅರ್ಥಪೂರ್ಣ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಪ್ರಮುಖರಾದ ಶಿವರಾಮ ಉಡುಪ, ಪುಂಡಲೀಕ ನಾಯಕ್ ಉಪಸ್ಥಿತರಿದ್ದರು. ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಚಂದ್ರ ಪೂಜಾರಿ ಸ್ವಾಗತಿಸಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮಹೇಶ್ ಪೂಜಾರಿ ವಂದಿಸಿದರು,

Write A Comment