ಮಂಗಳೂರು,ಸೆ.27: ಬೆಸೆಂಟ್ ಶಾಲೆ ಹಾಗೂ ಶಿಲಾ ಇಂಟರ್ನ್ಯಾಶನಲ್ ಸ್ಕೂಲ್ ಉಡುಪಿ ಇಲ್ಲಿ ನಡೆದ ವಲಯ ಮತ್ತು ತಾಲೂಕು ಮಟ್ಟದ ಕರಾಟೆ ಪಂದ್ಯದಲ್ಲಿ ಇನ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲಾಯ್ಡ್ ಆರ್ಟ್ ಕೆನರಾ ಉರ್ವಾ ಶಾಲೆಯ ವಿದ್ಯಾರ್ಥಿಗಳು 9 ಚಿನ್ನ, 8 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ನಿವೇದಿತಾ, ಕೀರ್ತಿ, ಅನುಷ್ಕಾ, ಅನುಷಾ,ವಿಜಯಲಕ್ಷ್ಮಿ, ಜಾನವಿ, ಸುಬ್ರಹ್ಮಣ್ಯ, ಆದಿತ್ಯ, ಅನಘಾ, ಅಮೋಘ ಹಾಗೂ ಕರಾಟೆ ಶಿಕ್ಷಕರಾದ ಪೂಜಾ ಜೈನ್, ಪ್ರತೀಕ್ ಯು. ಪೂಜಾರಿ, ದೈಹಿಕ ಶಿಕ್ಷಕರಾದ ಶ್ರೀಮತಿ ಸರಿತಾ ಮತ್ತು ಮುಖ್ಯೋಪಾಧ್ಯಾಯರಾದ ಲಲನಾ ಜೆ ಶೆಣೈ ಇವರನ್ನು ಚಿತ್ರದಲ್ಲಿ ಕಾಣಬಹುದು.