ಮಂಗಳೂರು,ಸೆ.27 : ಪ್ರೊ.ಅಮೃತ ಸೋಮೇಶ್ವರವರ 80ನೇ ಜನ್ಮದಿನದ ಪ್ರಯುಕ್ತ ನಗರದ ವಿಶ್ವ ವಿಧ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅಭಿನಂದನಾ ಸಮಾರಂಭ ಶನಿವಾರ ನಡೆಯಿತು.
ಅಮೃತ ಸೋಮೇಶ್ವರ ಅವರ ಕೃತಿಗಳ ಹಿನ್ನೋಟ `ಅಮೃತ ಲಹರಿ’ ಸಾಕ್ಷ್ಯಚಿತ್ರ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಅಮೃತ ಸೋಮೇಶ್ವರ ಅವರೊಂದಿಗೆ ಸಂವಾದ ಕಾರ್ಯಕ್ರಮ ಈ ಸಂಧರ್ಭದಲ್ಲಿ ಅಯೋಜಿಸಲಾಗಿತು. ನಾಟಕ ನಿರ್ದೇಶಕ ಸದಾನಂದ ಸುವರ್ಣ, ಕಲಾ ನಿರ್ದೇಶಕ ಶಶಿಧರ ಅಡಪ, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಪಾದೆಕಲ್ಲು ವಿಷ್ಣು ಭಟ್ ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಅಮೃತ ಸೋಮೇಶ್ವರ ಅವರ ಅಭಿನಂದನ ಸಮಾರಂಭವನ್ನು ಹಂಪಿ ಕನ್ನಡ ವಿಶ್ವ ಚ್ ವಿಧ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಬಿ.ಎ ವಿವೇಕ ರೈ ಅವರ ನಡೆಸಿಕೊಟ್ಟರು.