ಮುಂಬಯಿ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಮತ್ತು ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡ ಮೂರು ದಿನಗಳ ಸಿ. ಲಕ್ಷ್ಮಣ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಮಕ್ಕಳ ಚಲನಚಿತ್ರೋತ್ಸವನ್ನು ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಸೆ. 24ರಂದು ಸಂಜೆ ಕರ್ನಾಟಕ ವಿಧಾನ ಸಭೆಯ ಮಾಜಿ ಸಚಿವೆ ಮೋಟಮ್ಮ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾಜದಲ್ಲಿ ದುಷ್ಕತ್ಯಗಳು ಹೆಚ್ಚುತ್ತಿದ್ದು, ಉತ್ತಮ ಪ್ರಜೆಯಾಗುವಂತೆ ಮಕ್ಕಳನ್ನು ರೂಪಿಸಬೇಕು. ನಮ್ಮ ಚಲನ ಚಿತ್ರಗಳಲ್ಲಿ ಈ ಸಂದೇಶ ಇರಬೇಕು. ಎಂದ ಮೋಟಮ್ಮ ಅವರು ನಾವು ಸಂದೇಶವಿರುವ ಉತ್ತಮ ಚಿತ್ರಗಳನ್ನು ವೀಕ್ಷಿಸಬೇಕು. ಅಂತಹ ಸಂದೇಶ ಸಿ. ಲಕ್ಷ್ಮಣ ಅವರ ಚಲನ ಚಿತ್ರಗಳಲ್ಲಿ ಕಾಣುತ್ತೇವೆ ಎಂದರು.
ನಿರ್ದೇಶಕ ಸಿ. ಲಕ್ಷ್ಮಣ ಅವರು ಮಾತನಾಡುತ್ತಾ ಮಕ್ಕಳಿಗೆ ರಂಗಭೂಮಿಯಲ್ಲಿ ಆಸಕ್ತಿಯಿದ್ದರೆ ಹಿರಿಯರು ಅದಕ್ಕೆ ಅವಕಾಶ ಕಲ್ಪಿಸಿ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್ ಬುರ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಡಾ. ಭರತ್ ಕುಮಾರು ಪೊಲಿಪು ನಿರೂಪಿಸಿದರು. ಶ್ರೀನಿವಾಸ ಜೋಕಟ್ಟೆ ಮತ್ತು ಅನಿತಾ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಓಂದಾಸ್ ಕನ್ನಂಗಾರ್ ಸ್ವಾಗತಿಸಿದರು. ಕೋಶಾಧಿಕಾರಿ ಎಂ. ಎನ್. ಗುಡಿ ಅತಿಥಿಗಳನ್ನು ಗೌರವಿಸಿದರು. ’ಕಾರಣಿಕದ ಶಿಸು’ ಚಲನಚಿತ್ರ ಪ್ರದರ್ಶನಗೊಂಡಿತು. ಸೆ. 26ರಂದು ಸಮಾರೋಪ ಸಮಾರಂಭ ನಡೆಯಲಿದೆ.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್