ಗಲ್ಫ್

ಕೆಸಿಎಫ್ ಮಾನವತಾ ಸಮಾವೇಶಕ್ಕೆ ಪ್ರೌಡೋಜ್ವಲ ಸಮಾಪ್ತಿ; ಹಲವು ಯೋಜನೆಗಳಿಗೆ ಚಾಲನೆ

Pinterest LinkedIn Tumblr

KCF Dubai_Sept 29_2014_015

ದುಬೈ: “ಮನುಕುಲವನ್ನು ಗೌರವಿಸಿ” ಎಂಬ ಘೋಷ ವಾಕ್ಯದೊಂದಿಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ AP ಅಬೂಬಕರ್ ಮುಸ್ಲಿಯಾರ್ ಹಮ್ಮಿಕೊಂಡ ಕರ್ನಾಟಕ ಯಾತ್ರೆಗೆ ಬೆಂಬಲವನ್ನು ಸೂಚಿಸಿ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ದುಬೈ ಖಿಸೈಸ್ ಇಂಡಿಯನ್ ಅಕಾಡೆಮಿ ಸ್ಕೂಲ್ ನಲ್ಲಿ ಹಮ್ಮಿಕೊಂಡ ಮಾನವತಾ ಸಮಾವೇಶವು ಪ್ರೌಡೋಜ್ವಲವಾಯಿತು. ಸಂಜೆ 7 ಗಂಟೆಗೆ ಪ್ರಾರಂಭಗೊಂಡ ಮಾನವತಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಜಂ ಇಯ್ಯತುಲ್ ಉಲಮಾ ಅದ್ಯಕ್ಷ ಅಲ್ ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪವಿತ್ರ ಇಸ್ಲಾಮಿನ ನೈಜತೆಯನ್ನು ಕಾಪಾಡುವುದು ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ. ಆದುದರಿಂದ ಕೆಸಿಎಫ್ ನಂತಹ ಆದರ್ಶ ಸುನ್ನೀ ಸಂಘಟನೆಗಳ ಸದಸ್ಯತನ ಪಡೆದು ಬಿಡುವು ವೇಳೆಯನ್ನು ಅಹ್ಲುಸ್ಸುನ್ನತಿನ ಶ್ರೆಯಾಭಿವೃದ್ಧಿಗಾಗಿ ಮೀಸಲಿಟ್ಟರೆ ಜೀವನ ದನ್ಯವೆಂದು ಅವರು ನುಡಿದರು.

ಕರ್ನಾಟಕ ಆರೋಗ್ಯ ಖಾತೆ ಸಚಿವ ಸನ್ಮಾನ್ಯ UT ಖಾದರ್ ರವರು ಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲುಬು ಮೂಳೆ ರಕ್ತ ಮಾಂಸ ಖಂಡಗಳು ಇದ್ದ ಮಾತ್ರಕ್ಕೆ ಮನುಷ್ಯ ಸಂಪೂರ್ಣನಾಗುವುದಿಲ್ಲ ಹೊರತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾಜದ ಶ್ರೇಯಸ್ಸಿಗಾಗಿ ದುಡಿಯುವವನೇ ನಿಜವಾದ ಮನುಜ. ಅಸಹಾಯಕರ ಬೆನ್ನೆಲುಬಾಗಿರುವ ಕೆಸಿಎಫ್ ಜಗತ್ತಿಗೆ ಮಾದರೀ ಯೋಗ್ಯ ಸಂಘಟನೆ ಎಂದು ಅವರು ನುಡಿದರು.

KCF Dubai_Sept 29_2014_001

KCF Dubai_Sept 29_2014_002

KCF Dubai_Sept 29_2014_003

KCF Dubai_Sept 29_2014_004

KCF Dubai_Sept 29_2014_005

ಕೆಸಿಎಫ್ ಯುಎಇ ರಾಷ್ಟ್ರೀಯ ಅದ್ಯಕ್ಷ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ರವರು ಪ್ರಾಸ್ತಾವಿಕ ಬಾಷಣ ನಿರ್ವಹಿಸಿ ಮಾನವತಾ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಕರ್ನಾಟಕ ಪ್ರಾಧಿಕಾರ ಮಂಡಳಿ ಉಪಾದ್ಯಕ್ಷ, ಮಾಜಿ ಕೇಂದ್ರ ಮಂತ್ರಿ ಜನಾಬ್ CM ಇಬ್ರಾಹೀಂ ಮುಖ್ಯ ಬಾಷಣ ನಿರ್ವಹಿಸಿದರು. ವಿದ್ವಾಂಸರನ್ನು ಗೌರವಿಸುವುದು ಸತ್ಯ ವಿಶ್ವಾಸಿಯ ಕರ್ತವ್ಯ, ಅವಹೇಳಿಸುವುದು ನೀಚ ಸಂಸ್ಕ್ರತಿ ಆದುದರಿಂದ ಉಲಮಾಗಳನ್ನು ನಿಂದಿಸಿ ಶಾಪಕ್ಕೆ ಗುರಿಯಾಗದಿರಿ ಎಂದು ಅವರು ಹಿತವಚನ ನೀಡಿದರು. ಅಲ್ಪಾವದಿಯಲ್ಲಿ ಊಹನಾತೀತ ಅಭಿವೃದ್ದಿಯನ್ನು ಕಂಡ ಕೆಸಿಎಫ್ ನ್ನು ಅವರು ಶ್ಲಾಘಿಸಿದರು.

KCF Dubai_Sept 29_2014_006

KCF Dubai_Sept 29_2014_007

KCF Dubai_Sept 29_2014_008

KCF Dubai_Sept 29_2014_009

KCF Dubai_Sept 29_2014_010

ಅಖಿಲ ಭಾರತ ಎಸ್ ಎಸ್ ಎಫ್ ಉಪಾದ್ಯಕ್ಷ MSM ಅಬ್ದುರ್ರಶೀದ್ ಝೈನಿ ಕಾಮಿಲಿ ಮಾತನಾಡುತ್ತಾ ಕಾಂತಪುರಂ ಉಸ್ತಾದ್ ರವರ ಕರ್ನಾಟಕ ಯಾತ್ರೆಯ ಅನಿವಾರ್ಯತೆಯನ್ನು ವಿವರಿಸಿದರು. ಕರ್ನಾಟಕ ವಖ್ಫ್ ಬೋರ್ಡ್ ಸದಸ್ಯ ಮೌಲಾನಾ NKM ಶಫಿ ಸಅದಿ ಬೆಂಗಳೂರು ರವರು ಉತ್ತರ ಕರ್ನಾಟಕದ ಸ್ಥಿತಿಗತಿಗಳನ್ನೂ ಎಸ್ಎಸ್ಎಫ್ ನ ಬೆಳ್ಳಿಹಬ್ಬ ಸಮಾರಂಭದ ಕುರಿತು ವಿವರಣೆ ನೀಡಿದರು. ಕರ್ನಾಟಕ ರಾಜ್ಯ ಎಸ್ ವೈ ಎಸ್ ಉಪಾದ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ ಮಾತನಾಡಿ ಸಂಘ ಶಕ್ತಿಯ ಸಾಮರ್ಥ್ಯದಿಂದ ಜಯಿಸಲಾಗದ್ದು ಯಾವುದೂ ಇಲ್ಲ, ಅಹ್ಲುಸ್ಸುನ್ನತಿಗಾಗಿ, ಸಮಾಜ ಸೇವೆಗಾಗಿ ಸಂಘಟಿತರಾಗಿ ದುಡಿಯಲು ಕರೆ ನೀಡಿದರು.

ಸಮಾರಂಭದಲ್ಲಿ ಅಲ್ ಮದೀನ ಮಂಜನಾಡಿ ಶಿಲ್ಪಿ ಅಲ್ ಹಾಜ್ ಅಬ್ಬಾಸ್ ಉಸ್ತಾದ್, ಮಾಣಿ ದಾರುಲ್ ಇರ್ಶಾದ್ ಶಿಲ್ಪಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಚ್ಚಂಪಾಡಿ, ICF ಮಿಡ್ಲ್ ಈಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಪಾಡ್, ಮುಮ್ತಾಝ್ ಅಲಿ ಕೃಷ್ಣಾಪುರ, ಕುವೈಟ್ ಕೆಸಿಎಫ್ ಅದ್ಯಕ್ಷ ಹಬೀಬ್ ಕೋಯಾ ಕಾರವಾರ, ಕುಶಿ ಗ್ರೂಪ್ ಆಫ್ ಡೈರೆಕ್ಟರ್ ಶರೀಫ್, ಒಮಾನ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಂಝ ಸುಲೈಮಾನ್ ಕಣ್ಣಂಗಾರ್, ಕೋಸ್ಟಲ್ ಡೈಜೆಸ್ಟ್ ನಿರ್ದೇಶಕ ಆಸಿಫ್ AMACO ಸೌದಿ ಅರೇಬಿಯಾ, ಅನ್ವರ್ ಶರೀಫ್ ಬೆಂಗಳೂರು, ಸುಹೈಲ್ ಖಂದಕ್, ಅಬ್ದುಲ್ ಹಮೀದ್ PM ಈಶ್ವರಮಂಗಿಲ, ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶಿಷ್ಟ ಅಥಿತಿಗಲೆಲ್ಲರೂ ಸಮಾರಂಭಕ್ಕೆ ಶುಭಾಶಯ ಕೋರಿ ಮಾತನಾಡಿದರು.

KCF Dubai_Sept 29_2014_011

KCF Dubai_Sept 29_2014_012

KCF Dubai_Sept 29_2014_013

KCF Dubai_Sept 29_2014_014

KCF Dubai_Sept 29_2014_016

ಸಾರ್ವಜನಿಕ ಸೇವೆಯ ಭಾಗವಾಗಿ ಕೆಸಿಎಫ್ ಯುಎಇ ವತಿಯಿಂದ ಆಂಬುಲೆನ್ಸ್, ಜಿಲ್ಲಾಸ್ಪತ್ರೆಗಳಿಗೆ ಜನರೇಟರ್, ವಿಕಲಾಂಗರಿಗೆ ವೀಲ್ ಚೆಯರ್ ವಿತರಿಸುವ ಸಲುವಾಗಿ ಚೆಕ್ ಹಸ್ತಾಂತರಿಸಲಾಯಿತು. ಸಮಾವೇಶ ಪ್ರಯುಕ್ತ ವಿಶೇಷ ಪುರವಣಿ “ಅಲ್ ಇಖ್ದಾಮ್” ಸಂಚಿಕೆಯನ್ನು ಪ್ರಕಾಶನಗೈಯ್ಯಲಾಯಿತು. ವಿಧವಾ ಕಲ್ಯಾಣ ಪ್ರಯುಕ್ತ ” Window for Widow ” ಹಾಗೂ ಆರೋಗ್ಯ ಮಾಹಿತಿ ಪ್ರಯುಕ್ತ ” Health Awareness ” ಎಂಬ ಎರಡು ಅಂತರ್ಜಾಲಗಳಿಗೆ ಕೆಸಿಎಫ್ ಯುಎಇ ಚಾಲನೆ ನೀಡಿತು. ಸಯ್ಯಿದ್ ಕುಟುಂಬದ ಕಣ್ಮಣಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ಅಲ್ ಬುಖಾರಿ ಕೂರತ್ ರವರು ದುವಾಶೀರ್ವಚನ ನೀಡಿದರು. ಜುಮುಅ ನಮಾಝಿನ ಬಳಿಕ ಸುನ್ನೀ ದಅವತೇ ಇಸ್ಲಾಮಿ ತಂಡದವರಿಂದ ನಅತೆ ಶರೀಫ್ ಆಲಾಪನೆ, ದಾರುಲ್ ಅಶ್ಅರಿಯಾ ರಶೀದ್ ಹನೀಫಿ ತಂಡದವರಿಂದ ಬುರ್ದಾ ಆಲಾಪನೆ, ಡಾ. ಮುಹಮ್ಮದ್ ಫಾಝಿಲ್ ರಝ್ವಿ ನೇತೃತ್ವದಲ್ಲಿ “ನಾರ್ತ್ ಕರ್ನಾಟಕ ಮೀಟ್” ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿತು. ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ಸ್ವಾಗತಿಸಿ ಕನ್ವೀನರ್ ಇಖ್ಬಾಲ್ ಕಾಜೂರು ಧನ್ಯವಾದವಿತ್ತರು.

Write A Comment