ಕರ್ನಾಟಕ

ಆಯುಧಪೂಜೆ, ಬಕ್ರೀದ್‍ಗೆ ದುಬಾರಿಯಾಯ್ತು ಕುರಿ-ಮೇಕೆ ಬೆಲೆ

Pinterest LinkedIn Tumblr

goalalalalal

ಚಿಂತಾಮಣಿ, ಸೆ.29: ಹಿಂದೂಗಳ ಪವಿತ್ರ ಹಬ್ಬ ಆಯುಧಪೂಜೆ ಹಾಗೂ ಮುಸಲ್ಮಾನರ ಬಕ್ರೀದ್ ಹಬ್ಬ ಒಂದೇ ವಾರದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಕುರಿ ಮತ್ತು ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿರುವುದೇ ಅಲ್ಲದೆ, ಬೆಲೆಯೂ ಹೆಚ್ಚಳಗೊಂಡಿದೆ. ಪ್ರತಿ ಭಾನುವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾನವಾರು ಸಂತೆ ನಡೆಯುತ್ತದೆ. ಹಬ್ಬದ ಸಂದರ್ಭದಲ್ಲಿ ಜಾನವಾರುಗಳ ಮಾರುಕಟ್ಟೆಗೆ ಕುರಿ ಮತ್ತು ಮೇಕೆಗಳು ಹೆಚ್ಚು ಆಗಮಿಸುತ್ತವೆ.

ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಿದ್ದರೂ ಬೆಲೆಗಳು ಹೆಚ್ಚಾಗಿರುವುದು ವಿಶೇಷ. ಆಯಧಪೂಜೆ ಮತ್ತು ಬಕ್ರೀದ್ ಹಬ್ಬ ಒಂದೇ ವಾರದಲ್ಲಿ ಬಂದಿದ್ದು, ಬಕ್ರೀದ್ ಸಂದರ್ಭದಲ್ಲಿ ಮುಸಲ್ಮಾನರು ಮಾಂಸ ದಾನ ಮಾಡಿದರೆ, ಆಯುಧಪೂಜೆಯಂದು ಹಿಂದೂಗಳು ಕುರಿ ಮತ್ತು ಮೇಕೆಗಳನ್ನು ಬಲಿಕೊಡುವುದು ಮಾಮೂಲು ಪ್ರತಿವರ್ಷ ಬಕ್ರೀದ್ ಹಬ್ಬಕ್ಕೆಂದೇ ಕುರಿ ಮತ್ತು ಮೇಕೆಗಳನ್ನು ಮಾರಲು ವ್ಯಾಪಾರಿಗಳು ತರುತ್ತಾರೆ ಅದರ ಜೊತೆಯಲ್ಲಿ ಆಯಧ ಪೂಜೆ ಬಂದಿರುವುದ ರಿಂದ ಇಂದು ಇಲ್ಲಿನ ಮಾರುಕಟ್ಟೆಯಲ್ಲಿ ಒಂದು ಕುರಿಯ ಬೆಲೆ 25 ರಿಂದ 30 ಸಾವಿರ ರೂ ಗಳವರೆವಿಗೂ ಮಾರಾಟ ಮಾಡಿದರೆ ಅದೇ ಮೇಕೆಯೊಂದರ ಬೆಲೆ 50 ರಿಂದ 60 ಸಾವಿರ ರೂ ವರೆವಿಗೂ ಏರಿಕೆಯಾಗಿದ್ದು ವಿಶೇಷ.

ಬೆಲೆ ಏರಿಕೆಯಿಂದ ಕಂಗಾಲಾದ ಖರೀದಿದಾರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳೊಂದಿಗೆ ಚೌಕಾಶಿ ವ್ಯಾಪಾರಕ್ಕೆ ಇಳಿದಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸೇರಿದಂತೆ ನೆರಯ ಆಂಧ್ರಪ್ರದೇಶದ ಮದನಪಲ್ಲಿ, ಪುಂಗನೂರು, ಚಿತ್ತೂರು, ಭಾಗಗಳಿಂದ ರೈತರು ಮತ್ತು ಕೆಲ ವ್ಯಾಪಾರಿಗಳು ಕುರಿ, ಮೇಕೆಗಳು ಮಾರುಕಟ್ಟೆಗೆ ಕರೆತಂದಿದ್ದಾರೆ.

Write A Comment