ಬರೇಲಿ(ಉತ್ತರ ಪ್ರದೇಶ), ಅ.1: ಸೇನಾ ಪಡೆಗೆ ಸೇರಿದ ಹೆಲಿಕಾಪ್ಟರೊಂದು ಪತನಗೊಂಡಕಾರಣ ಅದರಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಮೇಲೇರಿದ ಕೆಲವೇ ಕ್ಷಣಗಳಲ್ಲಿ ಪವನಗೊಂಡ ಈ ಕಾಪ್ಟರಿನಲ್ಲಿ ಇಬ್ಬರು ಪೈಲಟ್ಗಳು ಹಾಗೂ ಒಬ್ಬ ಎಂಜಿನಿಯರ್ ಇದ್ದರು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸೇನಾ ಹೆಲಿಕಾಪ್ಟರ್ ಎಂದಿನಂತೆ ಇಂದೂ ತನ್ನ ಹಾರಾಟ ನಡೆಸಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಮೇಲಕ್ಕೆ ಹಾರುವಾಗಲೇ ಅದರಲ್ಲಿ ದೋಷವಿರುವಂತೆ ಕಂಡು ಬಂತು. ನಂತರ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸೇನಾನೆಯ ಬಳಿಯೇ ಧರೆಗೆ ಪತನಗೊಂಡಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.ಈ ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ಗಳು ಹಾಗೂ ಒಬ್ಬರು ಎಂಜಿನಿಯರ್ ಇದ್ದರು. ಹಿರಿಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.