ಅಂತರಾಷ್ಟ್ರೀಯ

ಕಾಲ ಮಿಂಚುವ ಮುನ್ನ ಬನ್ನಿ : ಉದ್ಯಮಿಗಳಿಗೆ ಮೋದಿ ಕರೆ

Pinterest LinkedIn Tumblr

modi-back

ವಾಷಿಂಗ್ಟನ್, ಅ.1: ನಮ್ಮದು ಉದ್ಯಮಸ್ನೇಹಿ ವಾತಾವರಣ ನಿರ್ಮಾಣದ ಗುರಿ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಲ ಮೀರುವ ಮೊದಲು ಭಾರತದಲ್ಲಿ ಉದ್ಯಮಗಳನ್ನು ಆರಂಭಿಸಿ ಎಂದು ಪ್ರಮುಖ ಉದ್ಯಮ ಸಂಸ್ಥೆಗಳನ್ನು ಹುರಿದುಂಬಿಸಿದರು. ತ್ವರಿತ ಅಭಿವೃದ್ಧಿಯ ಲಾಭಪಡೆದುಕೊಳ್ಳಬೇಕು ಮತ್ತು ಭಾರತೀಯ ಆರ್ಥಿಕತೆಯಲ್ಲಿ ಬದಲಾವಣೆ ತರಬೇಕು ಎಂದು ತಮ್ಮ 5 ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತದತ್ತ ಹೊರಡುವ ಮುನ್ನ ಹೇಳಿದರು.

ಪರಸ್ಪರ ಔದ್ಯಮಿಕ ಸಹಕಾರವನ್ನು ಅಭಿವೃದ್ಧಿಯಿಂದ ಹೆಚ್ಚಿನ ಪ್ರಗತಿ ಸಾಧಿಸೋಣ ಎಂದು ಹೇಳಿದ ಪ್ರಧಾನಿ, ನಾವು ಒಟ್ಟಾಗಿಯೇ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಹೊಸ ಅಧ್ಯಾಯ ತೆರೆಯೋಣ ಎಂದು ಅಮೆರಿಕ-ಭಾರತ ವಾಣಿಜ್ಯ-ಉದ್ಯಮ ಮಂಡಳಿಗೆ ಹೇಳಿದರು. ಮೇಕ್ ಇನ್ ಇಂಡಿಯಾಕ್ಕಾಗಿ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಅಮೆರಿಕಕ್ಕೆ ವಂದನೆಗಳು: 5 ದಿನಗಳ ಅಮೆರಿಕ ಭೇಟಿ ಮುಗಿಸಿ ಭಾರತದತ್ತ ಪ್ರಯಾಣ ಬೆಳೆಸಿದ ಮೋದಿ ನನ್ನ ಈ ಭೇಟಿ ಸಂಪೂರ್ಣ ಯಶಸ್ವಿ ಮತ್ತು ತೃಪ್ತಿಯಾಗಿದೆ, ಅದಕ್ಕಾಗಿ ಅಮೆರಿಕಕ್ಕೆ ವಂದನೆಗಳು ಎಂದು ಹೇಳಿದರು. ಉದ್ಯಮಿಗಳೊಂದಿಗಿನ ಕೊನೆಯ ಸಭೆ ಮುಗಿಸಿದ ಮೋದಿ ಅಲ್ಲಿಂದ ಹೊರಟು ಆಂಡ್ರ್ಯೂಸ್ ವಾಯುನೆಲೆಗೆ ಆಗಮಿಸಿದರು. ಆಂಡ್ರ್ಯೂ ವಾಯುನೆಲೆಯಿಂದ ದೆಹಲಿಗೆ ಹೊರಡುವ ಭಾರತೀಯ ವಾಯುಯಾನ ವಿಮಾನದ ಮೂಲಕ ಭಾರತದತ್ತ ಪ್ರಯಾಣ ಬೆಳೆಸಿದರು.

Write A Comment