ಕುಂದಾಪುರ: ಕುಂದಾಪುರದ ಮಹಿಳಾ ಮೋರ್ಚಾವು ಪುನರ್ ರಚನೆಗೊಂಡ ಸಮಿತಿಯ ಪ್ರಥಮ ಸಭೆಯನ್ನು ಪಕ್ಷದ ಕಛೇರಿಯಲ್ಲಿ ನಡೆಸಲಾಯಿತು. ಪಕ್ಷದ ಸೂಚನೆಯಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಶೌಚಾಲಯವಿಲ್ಲದ ಶಾಲೆಗಳನ್ನು ಅತ್ಯಂತ ಶೀಘ್ರವಾಗಿ ಗುರುತಿಸಿ ಸದರಿ ಶಾಲೆಯಲ್ಲಿ ತಕ್ಷಣವೇ ಶೌಚಾಲಯಗಳನ್ನು ನಿರ್ಮಿಸುವ ಕೆಲಸವನ್ನು ತುರ್ತಾಗಿ ನಿರ್ವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜ ಪೂಜಾರಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೌರಿ ಶಿವಾನಂದ, ಜಿಲ್ಲಾ ಕಾರ್ಯದರ್ಶಿ ಮಾಲಿನಿ ಸತೀಶ್ ಮತ್ತು ಮಹಿಳಾ ಮೋರ್ಚಾದ ಸರ್ವ ಸದಸ್ಯೆಯರು ಉಪಸ್ಥಿತರಿದ್ದರು.