ಕರಾವಳಿ

ಇವರು ಖತರ್ನಾಕ್ ಕಳ್ಳರು: ಹಲವೆಡೆ ದೋಚಿದ್ದ ನಟೋರಿಯಸ್ ಕಳ್ಳರಿಬ್ಬರ ಬಂಧನ

Pinterest LinkedIn Tumblr

ಕುಂದಾಪುರ : ಕುಂದಾಪುರ ಸೇರಿದಂತೆ ಹಲವೆಡೆಗಳಲ್ಲಿ ಕಳ್ಳತನ ಎಸಗಿದ್ದ ನಟೋರಿಯಸ್ ಕಳ್ಳರಿಬ್ಬರನ್ನು ಕಾರವಾರ ಪೊಲೀಸರು ಕೆಲವು ದಿನದ ಹಿಂದೆ ಬಂಧಿಸಿದ್ದು ಪ್ರಕರಣ ಒಂದರ ಸಲುವಾಗಿ ಕುಂದಾಪುರಕ್ಕೆ ಇಬ್ಬರು ಆರೋಪಿಗಳನ್ನು ಬುಧವಾರ ಕರೆತರಲಾಗಿತ್ತು.

ಮೂಲತ: ಕಾರವಾರದವರಾದ ಒಂದೇ ಕುಟುಂಬದ ಮಂಜು ( 22 ) ವರ್ಷ ಹಾಗೂ ಮಂಜು ( 22 ) ವರ್ಷ ಆರೋಪಿಗಳಾಗಿದ್ದು ಬಳೆ ಮಾರುವ ವೃತ್ತಿ ಮಾಡುತ್ತಿದ್ದಾರೆ ಎನ್ನಲಾಗಿದೆ.

police_arrest_robberers

Police Arrest_robberers (5) Police Arrest_robberers (4) Police Arrest_robberers (3)

police_arrest_robberers (2) police_arrest_robberers (1)

ಖತರ್ನಾಕ್ ಕಳ್ಳರು : ಮನೆ ಮನೆಗೆ ತೆರಳಿ ಗಾಜಿನ ಬಳೆ ಮಾರುವ ಈ ಇಬ್ಬರು ಕಳ್ಳರು ಸರಕಾರಿ ಉದ್ಯೋಗಿಗಳು ವಾಸವಾಗಿರುವ ಕಾಲೋನಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ಮನೆಗಳಿಗೆ ಬಳೆ ಮಾರುವ ನೆಪದಲ್ಲಿ ತೆರಳುವ ಇವರು ಮನೆಯ ಮಾಹಿತಿ ಕಲೆ ಹಾಕಿ ದರೋಡೆ ಮಾಡುವ ಸ್ಕೆಚ್ ರೂಪಿಸುತ್ತಿದ್ದರು. ರಾತ್ರಿಯ ಸಮಯದಲ್ಲಿ ತಾವು ಸ್ಕೆಚ್ ರೂಪಿಸಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಇವರು ಈವರೆಗೆ ಪೊಲೀಸರಿಗೆ ಸಿಕ್ಕಿರಲಿಲ್ಲ. ಒಂದು ಮನೆಯಿಂದ 1 ಕೆ.ಜಿ ಯಷ್ಟು ಚಿನ್ನವನ್ನು ಯಾಮಾರಿಸಿದ್ದ ಕತರ್ನಕ್ ಗಳು ಸಾರ್ವಜನಿಕರ ಎದುರಲ್ಲಿ ಏನು ತಿಳಿಯದಂತೆ ಇರುತ್ತಿದ್ದರು.

ಹೀಗೆ 2010 ರಿಂದ ಆರಂಭಿಸಿಕೊಂಡು ಬಂದ ದರೋಡೆ ಇಲ್ಲಿಯ ತನಕವೂ ಎಗ್ಗಿಲ್ಲದೆ ನಿರಂತರವಾಗಿ ಸಾಗುತ್ತಿತ್ತು. ಕದ್ದ ಮಾಲನ್ನು ಕವಡೆ ಖಾಸಿನ ಬೆಲೆಗೆ ಕುಂದಾಪುರ, ಭಟ್ಕಳ, ಬೈಂದೂರು, ಸೇರಿದಂತೆ ಹಲವೆಡೆಗಳಲ್ಲಿ ಮಾರುತ್ತಿದ್ದ ಇವರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವರ್ತಿಸುತ್ತಿದ್ದರು. ಆದರೆ ನಿರಂತರ ಕಳ್ಳತನದಿಂದಾಗಿ ಪೊಲೀಸರು ಈ ತಂಡದ ಬಗ್ಗೆ ಬಲೆ ಬೀಸಿದ್ದಾರೆ. ಈ ವೇಳೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಪ್ರಕಾರ ಇಬ್ಬರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಇವರನ್ನು ಠಾಣೆಗೆ ಎತ್ತಾಕಿಕೊಂಡು ಬಂದು ರುಬ್ಬಿದಾಗ ನಮಗೇನು ತಿಳಿದಿಲ್ಲ ಎಂದು ಹೇಳಿದ ಕತರ್ನಕ್ ಗಳು ಪೊಲೀಸರು ಯಾವುದೇ ರೀತಿಯಲ್ಲಿ ಬಾಯಿಬಿಡಿಸಲು ಹರಸಹಾಸ ಪಟ್ಟರು ಬಾಯಿ ಬಿಡಲಿಲ್ಲ. ಕೊನೆಯದಾಗಿ ಇಬ್ಬರನು ಪ್ರತ್ಯೇಕವಾಗಿ ತನಿಖೆಗೆವೊಳಪಡಿಸಿದಾಗ ಇವರ ಅಸಲಿ ಬಣ್ಣ ಬಯಲಾಗಿದೆ. ಪೊಲೀಸರು ಈ ಬಗ್ಗೆ ಇನ್ನಷ್ಟು ಚುರುಕುಗೊಳಿಸಿದಾಗ ಅವರಿಗೆ ತಿಳಿದದ್ದು ಕಾರವಾರ ಸೇರಿದಂತೆ ಕುಂದಾಪುರ ಭಾಗದಲ್ಲೂ ಕೂಡ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಇಬ್ಬರು ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ.

Police Arrest_robberers (6) Police Arrest_robberers (2) Police Arrest_robberers (1) Police Arrest_robberers police_arrest_robberers (2) Police Arrest_robberers (7)

ಯಾರಿವರು ? : ಮನೆ ಮನೆಗೆ ತೆರಳಿ ಬಳೆ ಮಾರುತ್ತಿದ್ದ ಇವರು ನಟೋರಿಯಸ್ ಗಳು. ಭಾವಲಿಯ ರಕ್ತ ಹೀರುತ್ತ, ಬೆಕ್ಕಿನ ಮಾಂಸವನ್ನು ತಿಂದುಂಡು ಗಟ್ಟಿಮುಟ್ಟಾಗಿ ಬೆಳೆದಿದ್ದ ಇವರು ಕದಿಯುತ್ತಿದ್ದ ವಸ್ತುಗಳನ್ನು ಅಗ್ಗದ ಬೆಲೆಗೆ ಮಾರುತ್ತಿದ್ದರು.

ಕಳೆದ 4 ವರ್ಷಗಳಿಂದ ಕದ್ದ ಚಿನ್ನಾಭರಣಗಳನ್ನು ಕುಂದಾಪುರ ಮೂಲದ ಜ್ಯುವೆಲರ್ ಶಾಂಪ್ ವೊಂದಕ್ಕೆ ಅಗ್ಗದ ಬೆಲೆಗೆ ಮಾರುತ್ತಿದ್ದರು. ಮೂಲವೊಂದರ ಪ್ರಕಾರ ೧ವರೆ ಲಕ್ಷ ಮೌಲ್ಯದ ಚಿನ್ನಕ್ಕೆ ಏಳು, ಎಂಟು ಸಾವಿರ ನೀಡಿ ಕೊಳ್ಳುತ್ತಿದ್ದ ಕುಂದಾಪುರ ಜ್ಯುವೆಲರ್ ಶಾಂಪ್ ನ ಮಾಲಿಕ ಬುಧವಾರ ಪೊಲೀಸರೊಂದಿಗೆ ಬಂದ ಇಬ್ಬರು ಕಳ್ಳರನ್ನು ನೋಡಿ ಕಂಗಾಲಾಗಿದ್ದಾರ್‍ಎ.

ಪೊಲೀಸರು ಜ್ಯುವೆಲರ್ ಶಾಂಪ್ ತನಿಖೆ ನಡೆಸಿದ್ದು ಜ್ಯುವೆಲರ್ ಶಾಪ್ ಮಾಲಿಕನನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಖತರ್ನಾಕ್ ಖದೀಮರು ಕಾರವಾರ ಪೊಲೀಸರು ಸುಪರ್ಧಿಯಲ್ಲಿದ್ದಾರೆ. ಅವರ ತನಿಖೆ ಬಳಿಕ ಕುಂದಾಪುರ ಪೊಲೀಸರು ತನಿಖೆಗಾಗಿ ವಶಪಡಿಸಿಕೊಂಡು ಕುಂದಾಪುರದಲ್ಲಿ ಇವರಿಂದ ನಡೆದ ಎರಡು ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಬುಧವಾರ ನಡೆದ ತನಿಖೆ ವೇಳೆ ಕಾರವಾರ ಡಿವೈಎಸ್ ಪಿ ರಾಮ ಅರೆಸಿದ್ದು, ವೃತ್ತ ನಿರೀಕ್ಷಕ ಶರಣಪ್ಪ ಗೌಡ ಪಾಟೀಲ್, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ತನಿಖೆ ಸಹಕಾರ ನೀಡಿದ್ದರು.

Write A Comment