ಕರಾವಳಿ

ಹಿಂದು ಯುವಕನ ಮೇಲೆ ಪೊಲೀಸ್ ದೌರ್ಜನ್ಯ : ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ವಿ‌ಎಚ್‌ಪಿ / ಬಜರಂಗದಳ ಪ್ರತಿಭಟನೆ.

Pinterest LinkedIn Tumblr

vhp_protest_photo_1

ಮಂಗಳೂರು,ಅ.13: ಹಿಂದು ಯುವಕನ ಮೇಲೆ ಪೊಲೀಸರು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ಹಲ್ಲೆ ನಡೆಸಿದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ದ.ಕ.ಜಿಲ್ಲಾ ಘಟಕ ಹಾಗೂ ಬಜರಂಗದಳ ಮಂಗಳೂರು ಘಟಕದ ವತಿಯಿಂದ ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಜರಗಿತು.

vhp_protest_photo_2

ಪ್ರತಿಭಟನಕಾರರನ್ನುದ್ದೇಶಿಸಿ ವಿ‌ಎಚ್.ಪಿ ಮುಖಂಡ ಜಗಧೀಶ್ ಶೇಣವ ಅವರು ಮಾತನಾಡಿ, ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಮನೆಯಲ್ಲಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಚರಣ್ ನನ್ನು ಸುಳ್ಳು ನೆಪದಿಂದ ಠಾಣೆಗೆ ಕರೆಸಿ ಯಾವುದೇ ತಪ್ಪು ಮಾಡದೇ ಇದ್ದರೂ ಆತನಿಗೆ ಚಿತ್ರಹಿಂಸೆ ನೀಡಿರುವ ಪೊಲೀಸರ ಕ್ರಮ ಖಂಡನೀಯ. ರಾಜಕೀಯ ಪ್ರೇರಿತರಾಗಿ ಜವಾಬ್ದಾರಿಯುತ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಈ ರೀತಿಯ ಅಮಾನವೀಯ ರೀತಿಯಲ್ಲಿ ವರ್ತಿಸಿರುವುದು ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಯಾರದೋ ಕೈಗೊಂಬೆಯಂತೆ ಕೆಲಸ ಮಾಡುತ್ತಾ ಈ ರೀತಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿರುವ ಇಂಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸ ಬೇಕು. ಇವರಿಗೆ ಸಹಕಾರ ನೀಡಿದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಬೇಕು ಎಂದು ಅಗ್ರಹಿಸಿದರು.

vhp_protest_photo_3a

ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ ಮಾತನಾಡಿ,ಇದೀಗ ರಾಜ್ಯದಲ್ಲಿ ಹಿಂದುಗಳ ಮೇಲಿನ ದಬ್ಬಾಳಿಕೆ ಹೆಚ್ಚಾಗಿದ್ದು, ಕೆಲ ನಿರ್ಧಿಷ್ಟ ವ್ಯಕ್ತಿಗಳ ಅದೇಶದಂತೆ ಪೊಲೀಸರು ಹಿಂದು ಯುವಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ರಾಜಕೀಯ ಷಡ್ಯಂತ್ರದಿಂದ ಕೂಡಿದ್ದು, ಹಿಂದೂ ಸಂಘಟನೆಯನ್ನು ಧಮನಿಸುವ ತಂತ್ರವಾಗಿದೆ ಎಂದು ಆರೋಪಿಸಿದರು.

vhp_protest_photo_4

ರಾಜಕೀಯ ಪ್ರೇರಿತ ವ್ಯಕ್ತಿಗಳ ಅದೇಶದಂತೆ ಹಿಂದೂ ಸಂಘಟನೆಯ ಕಾರ್ಯಕರ್ತನೆಂಬ ಒಂದೇ ಒಂದು ಕಾರಣದಿಂದ ಯಾವುದೇ ತಪ್ಪು ಮಾಡದೇ ಇದ್ದ ಚರಣ್ ನನ್ನು ಠಾಣೆಗೆ ಕರೆಸಿ ಈ ರೀತಿ ಚಿತ್ರಹಿಂಸೆ ನೀಡಿದ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಕೂಡಲೇ ಅಮಾನತುಗೊಳಿಸಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಮೋನಪ್ಪ ಭಂಡಾರಿ ಒತ್ತಾಯಿಸಿದರು.

ಬಳಿಕ ಪ್ರತಿಭಟನಕಾರರ ನಿಯೋಗದಿಂದ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಅಯುಕ್ತರಿಗೆ ಪ್ರಕರಣದ ಬಗ್ಗೆ ಕುಲಂಕೂಶ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

vhp_protest_photo_5a vhp_protest_photo_6

ಘಟನೆ ವಿವರ : ದೂರು | ಮನವಿ

ಕಾವೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಪೇದೆಗಳು ಚರಣ್ ಎಂಬ ಕಾರ್ಯಕರ್ತನಿಗೆ ಚಿತ್ರ ಹಿಂಸೆ ನೀಡಿದ ಬಗ್ಗೆ ದೂರು. / ಮನವಿ

ಮಂಗಳೂರು : ಚರಣ್ ಎಂಬ್ ಕಾರ್ಯಕರ್ತ ಮೂಡುಶೆಡ್ಡೆಯಲ್ಲಿ ತನ್ನ ಹೆಂಡತಿ ಹಾಗೂ ಚಿಕ್ಕ ಮಗುವಿನೊಂದಿಗೆ ವಾಸವಾಗಿದ್ದಾನೆ. ಅತನಿಗೆ ಮರದ ಕೆಲಸ ಆತ ಹಿಂದೂ ಸಂಘಟನೆಯ ಕಾರ್ಯಕರ್ತ. ದಿನಾಂಕ 8.10.2014 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಮನೆಯಲ್ಲಿ ಕುಳಿತುಕೊಂಡಿರುವಾಗ , ಕಾವೂರು ಠಾಣೆಯ ಸಿಬ್ಬಂದಿ ಆತನಿಗೆ ಪರಿಚಯದ ಶರತ್ ಎಂಬವರು ಬಂದು, ನಿನ್ನನು ಸಬ್ ಇನ್ಸ್ ಪೆಕ್ಟರ್ ಕರೆಯುತ್ತಿದ್ದಾರೆ.ಜೀಪಿನಲ್ಲಿ ಇದ್ದಾರೆ ಬಂದು ಹೋಗು ಎಂದು ಕರೆದರು. ಆಗ ಅತ ಜೀಪು ಇದ್ದಲ್ಲಿಗೆ ಹೋದ. ಜೀಪಿನಲ್ಲಿ ಕಾವೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಇಬ್ಬರು ಪೇದೆಗಳು ಇದ್ದರು. ಚರಣ್ ಜೀಪಿನ ಹತ್ತಿರ ಹೋದ ಕೂಡಲೇ ಸಬ್ ಇನ್ಸ್ ಪೆಕ್ಟರ್ ಜೀಪಿನಿಂದ ಇಳಿದು ಅತನಿಗೆ ಯಧ್ವಾ ತದ್ವಾ ಹೊಡೆದು, ಜೀಪಿನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ಪೊಲೀಸ್ ಠಾಣೆಯೊಳಗೆ ಒಂದು ಸಿಮೆಂಟ್ ನ ಕಂಬಕ್ಕೆ ಅತನನ್ನು ಅದುಮಿ ಹಿಡಿದು ಇಬ್ಬರು ಪೊಲೀಸರು (ಒಬ್ಬ ಅತನ ಪರಿಚಯದ ಶರತ್ ಇನ್ನೋಬ್ಬ ಆತನಿಗೆ ಪರಿಚಯ ಇಲ್ಲದವರು) ಅತನನ್ನು ಬಿಗಿಯಾಗಿ ಹಿಡಿದು, ಸಬ್ ಇನ್ಸ್ ಪೆಕ್ಟರ್ ಉಮೇಶ್ ಕುಮಾರ್ ರವರು 3 ಲಾಠಿ ಹುಡಿ ಹುಡಿ ಆಗುವವರೆಗೆ ಹೊಡೆದರು. ಅತ ಎಷ್ಟು ಬೊಬ್ಬೆ ಹೊಡೆದರೂ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಯಾಕೆ ಹೊಡೆಯುತ್ತೀರಿ ಎಂದು ಕೇಳಿದಾಗ ಬೋಳಿ ಮಗನೇ ಭಾರೀ ಕೋರ್ಟಿಗೆ ಹಾಜರಾಗುತ್ತಿಯ ಎಂದು ಹೇಳಿದರು.

vhp_protest_photo_9 vhp_protest_photo_7

ಈ ಹಿಂದೆ ಒಂದು ಕೇಸಿನಲ್ಲಿ ಚರಣ್ ಠಾಣೆಗೆ ಹಾಜರಾಗದೆ, ನೇರ ನ್ಯಾಯಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ, ಅದಕ್ಕಾಗಿ ಅತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಅತನ ಪೃಷ್ಠ ಭಾಗಕ್ಕೆ ಹೊಡೆದುದರ ಪರಿಣಾಮ, ಅತನ ರಕ್ತ ಹೆಪ್ಪುಗಟ್ಟಿದೆ., ಅತನಿಗೆ ನಡೆಯಲಿಕ್ಕೆ ಅಗುವುದಿಲ್ಲ. ಅಂಗಾತ ಮಲಗಲಿಕ್ಕೆ ಅಗುವುದಿಲ್ಲ. ಯಾವುದೇ ತಪ್ಪು ಮಾಡದೇ ಇದ್ದ ಆತನಿಗೆ ಈ ರೀತಿ ಚಿತ್ರಹಿಂಸೆ ನೀಡಿದ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ..

Write A Comment