ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಲಗೇಣಿ ಬಗ್ಗೆ ಸಾಕಷ್ಟು ಸಮಸ್ಯೆಗಳ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲೂ ಕಂದಾಯ ಸಚಿವರ, ಇಲಾಖಾ ಕಾರ್ಯದರ್ಶಿಗಳ ಜೊತೆಗೂ ಚರ್ಚೆ ನಡೆಸಲಾಗಿದೆ.
ಕರಾವಳಿ ಜಿಲ್ಲೆಗೆ ಸಂಬಂಧಿಸಿದಂತೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಮುಖ್ಯಮಂತ್ರಿಯವರನ್ನು ವೇದಿಕೆ ಪದಾಧಿಕಾರಿಗಳ ಜತೆಗೆ ಭೇಟಿ ಮಾಡಿಸಿ ಮಾತುಕತೆ ನಡೆಸಲು ಶೀಘ್ರದಲ್ಲೇ ದಿನ ನಿಗದಿ ಮಾಡಲಾ ಗುವುದು. ಜೊತೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿ, ತಜ್ಞರ ಜತೆ ಮಾತುಕತೆ ನಡೆಸಿ ನಿಯಮ ರೂಪಿ ಸುವ ಬಗ್ಗೆಯೂ ಚರ್ಚೆ ನಡೆಸ ಲಾಗುವುದು. ಮೂಲಗೇಣಿ ಒಕ್ಕಲು ತನದ ರಕ್ಷಣೆ ಮಾಡಬೇಕಾದುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಿಯಮ ರೂಪಿಸಲು ಸರಕಾರದ ಗಮನ ಸೆಳೆಯುವೆ ಎಂದು ಭರವಸೆ ನೀಡಿದರು.
ಹೊಸ ಕಾಯ್ದೆ ಜಾರಿಗೆ ಬರುವವರೆಗೆ ಮೂಲಗೇಣಿ ಒಕ್ಕಲು ದಾರರಿಗೆ ತೊಂದರೆ ನೀಡಬಾರದು ಎಂದು ಸೂಚಿಸಲಾಗಿದೆ. ಸಮಸ್ಯೆಗೆ ಪರಿಹಾರ ಸಿಗದ ಹೊರತು ಜನರು ಶಾಂತಿಯಿಂದಿರಲು ಸಾಧ್ಯವಿಲ್ಲ. ಸಮಸ್ಯೆ ನಿವಾರಣೆಗೆ ಎಲ್ಲ ಪಕ್ಷಗಳೂ ನೆರವಾಗ ಬೇಕು. ಮೂಲಗೇಣಿ ಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಐವನ್ ಡಿಸೋಜ ಅಭಿಪ್ರಾಯಪಟ್ಟರು.
ವೇದಿಕೆಯ ಕಾನೂನು ಸಲಹೆಗಾರ ಎ.ಪಿ.ಗೌರಿಶಂಕರ ಮಾತನಾಡಿ, ಮೂಲ ಗೇಣಿ ಪದ್ಧತಿಯ ಪ್ರಕಾರ ಮಾಲಕರ ಕಡೆಯಿಂದ ಹೆಚ್ಚು ಪರಿಹಾರ ಸಿಗಬೇಕು ಎಂಬ ಬೇಡಿಕೆ ಇದೆ. ಆದರೆ ಈ ಬಗ್ಗೆ ಕಾನೂನಿನಲ್ಲಿ ನಿರ್ಧರಿತಗೊಂಡ ಪರಿಹಾರ ನ್ಯಾಯಯುತವಾಗಿದೆ ಎಂದರು.
ವೇದಿಕೆಯ ಜೋಸೆಫ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಕೆ. ಯಶೋಧರ, ಕಾರ್ಯಾಧ್ಯಕ್ಷ ಕೆ.ಜಗದೀಶ ರಾವ್, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಡಿಸಿಲ್ವ, ಉಡುಪಿ ಘಟಕದ ಕಾರ್ಯದರ್ಶಿ ದಾಸಪ್ಪ ಕಾಮತ್, ಸಹ ಕಾರ್ಯ ದರ್ಶಿ ಎಸ್.ಎಸ್. ಶೇಟ್, ಉಪಾಧ್ಯಕ್ಷ ಕ್ಯಾಪ್ಟನ್ ಎಚ್.ವಾಸ್, ಕೋಶಾಧಿ ಕಾರಿ ಎರಿಕ್ ಕುವೆಲ್ಲೊ ಉಪಸ್ಥಿತರಿದ್ದರು. ಜೆರಾಲ್ಡ್ ಟವರ್ಸ್ ನಿರೂಪಿಸಿದರು.