ಕರಾವಳಿ

ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ – ಸರಕಾರದ ದಿವಾಳಿತನಕ್ಕೆ ಉದಾಹರಣೆ : ಜಿಲ್ಲಾ ಬಿಜೆಪಿ ಆಕ್ರೋಷ

Pinterest LinkedIn Tumblr

BJP Logo

ಮಂಗಳೂರು : ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಬೇಡಿಕೆಗಳು ಸರಾಸರಿ ಕಡಿಮೆ ಇದ್ದರೂ ಉತ್ಪಾದನೆ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ 15  ಗಂಟೆ, ನಗರ ಪ್ರದೇಶಗಳಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್ ಘೋಷಣೆ ಮಾಡಿ ರಾಜ್ಯದ ಜನರನ್ನು ಕತ್ತಲೆ ಕೂಪಕ್ಕೆ ದೂಡಿ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಜನ ವಿರೋಧಿ ನೀತಿಯನ್ನು ಮುಂದುವರಿಸಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಚುನಾವಣಾ ಪೂರ್ವದಲ್ಲಿ, ಅಧಿಕಾರಕ್ಕೆ ಬಂದರೆ ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ಕೊಡುವುದಾಗಿ ಘೋಷಿಸಿಕೊಂಡ ಕಾಂಗ್ರೆಸ್ ಸರಕಾರ ಇದೀಗ ತನ್ನ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ, ಪಡಿತರ ಚೀಟಿ ಅವ್ಯವಸ್ಥೆ ವಿದ್ಯುತ್ ಅಸಮರ್ಪಕತೆ ಇತ್ಯಾದಿಗಳಿಂದ ನಿಷ್ಕ್ರಿಯವಾದ ಕರ್ನಾಟಕ ರಾಜ್ಯ ಸರಕಾರ ಮಂಗಳೂರು ಮಹಾನಗರಪಾಲಿಕೆಗೆ ಕಮಿಷನರ್ ನೇಮಕಾತಿ ಮಾಡದೆ ಇದ್ದು ಇದೀಗ ರಾಜ್ಯದ 4 ವಿಶ್ವವಿದ್ಯಾನಿಲಯಗಳಿಗೆ ಕಳೆದ 5 ತಿಂಗಳಿನಿಂದ ಕುಲಪತಿಗಳನ್ನು ನೇಮಕ ಮಾಡದೇ ತನ್ನ ಆಡಳಿತ ವೈಫಲ್ಯದಿಂದಾಗಿ ಜನವಿರೋಧಿಯಾಗಿ ಪರಿಣಮಿಸಿ, ತಕ್ಷಣ ರಾಜೀನಾಮೆ ಕೊಟ್ಟು ಹೊಸ ಸರಕಾರ ರಚನೆಗೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Write A Comment