ಮಂಗಳೂರು,ಅ.14: ಮಂಗಳೂರಿನ ಪ್ರಸಿದ್ಧ ಗೋಲ್ಡನ್ ಶೆಟಲ್ ಅಕಾಡೆಮಿಯು ಆಯೋಜಿಸಿದ್ದ ಮಹೇಶ್ ಪಿಯು ಕಾಲೇಜು ಗೋಲ್ಡನ್ ಶೆಟಲ್ ಕ್ಯಾಂಪ್ 2014, 3 ದಿನಗಳ ಶೆಟಲ್ ಬ್ಯಾಟ್ಮಿಂಟನ್ ಕ್ರೀಡಾ ಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭವು ನಗರದ ಲಾಲ್ಬಾಗ್ನ ಯು.ಎಸ್ ಮಲ್ಯ ಇಂಡೋರ್ ಸೆಡಿಯಂನಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯದ ಮೀನುಗಾರಿಕೆ ಹಾಗೂ ಯುವಜನ ಕ್ರೀಡಾ ಸಚಿವರಾದ ಶ್ರೀ ಅಭಯಚಂದ್ರ ಜೈನ್ರವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಮಹಾಬಲ ಮಾರ್ಲ, ಎಮ್.ಟಿ ಎಜುಕೇಶನ್ ಟ್ರಸ್ ನ ಟ್ರಸಿ ಶ್ರೀ ಸುಜಿತ್ ಕೊಯೋಟ್, ಉಪಾಧ್ಯಕ್ಷ ಶ್ರೀ ಪ್ರಕಾಶ್ ಎಮ್ ಕೊಡವೂರು, ಶ್ರೀದೇವಿ ಎಜುಕೇಶನ್ ಟ್ರಸ್ಟ್(ರಿ)ನ ಅಧ್ಯಕ್ಷ ಹಾಗೂ ದ. ಕ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟಿ , ಐವನ್ ಪಿಂಟೊ ಫ್ಟೆಂಟ್ಸ್ ಕ್ಲಬ್ನ ಅಧ್ಯಕ್ಷ ಶ್ರೀ ಐವನ್ ಪಿಂಟೊ ಉಪಸ್ಥಿತರಿದ್ದರು.
ಗೋಲ್ಟನ್ ಶೆಟಲ್ ಕಪ್ ಟೂರ್ನಮೆಂಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸುಧೀರ್ ಪಿ. ಘಾಟೆ ವಂದಿಸಿದರು.
3 ದಿನಗಳ ಈ ಶೆಟಲ್ ಬ್ಯಾಟ್ಮಿಂಟನ್ ಕ್ರೀಡಾ ಕೂಟದಲ್ಲಿ 11.10.2014ರಂದು ನಡೆದ ಜಿಲ್ಲಾ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ:
1) 11 ವರ್ಷ ಕೆಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗದಲ್ಲಿ ಆಕಾಂಶಾ ಪ್ರಥಮ ಹಾಗೂ ಅನನ್ಯಾ ಜೋಶಿ ದ್ವಿತೀಯ
2) 11 ವರ್ಷ ಕೆಳಗಿನ ಹುಡುಗರ ಸಿಂಗಲ್ಸ್ ವಿಭಾಗದಲ್ಲಿ ಆಯುಷ್ ಶೆಟಿ ಪ್ರಥಮ ಹಾಗೂ ಪ್ರೀತೇಶ್ ಸಾಲ್ಯಾನ್ ದ್ವಿತೀಯ
3) 11 ವರ್ಷ ಕೆಳಗಿನ ಹುಡುಗರ ಡಬಲ್ಸ್ ವಿಭಾಗದಲ್ಲಿ ಆಯುಷ್ ಶೆಟಿ ಮತ್ತು ಚಿರಾಗ್ ಪ್ರಥಮ ಹಾಗೂ ಪ್ರೀತೇಶ್ ಸಾಲ್ಯಾನ್ ಮತ್ತು ಮಾವೆ ದ್ವಿತೀಯ
4) 13 ವರ್ಷ ಕೆಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗದಲ್ಲಿ ವರ್ಷಾ ಭಟ್ ಪ್ರಥಮ ಹಾಗೂ ಹಸ್ತಾ ಜೈನ್ ದ್ವಿತೀಯ
5)13 ವರ್ಷ ಕೆಳಗಿನ ಹುಡುಗರ ಸಿಂಗಲ್ಸ್ ವಿಭಾಗದಲ್ಲಿ ಗೌರವ್ ಅಜಿಲ ಪ್ರಥಮ ಹಾಗೂ ಪೃಥ್ವಿ ಪೈ ದ್ವಿತೀಯ
6)13 ವರ್ಷ ಕೆಳಗಿನ ಹುಡುಗರ ಡಬಲ್ಸ್ ವಿಭಾಗದಲ್ಲಿ ಪೃಥ್ವಿ ಪೈ ಮತ್ತು ವಿಕಾಸ್ ಪೈ ಪ್ರಥಮ ಹಾಗೂ ಗೌರವ್ ಅಜಿಲ ಮತ್ತು ಮಾಧವ್ ನಾಯಕ್ ದ್ವಿತೀಯ
7) 15 ವರ್ಷ ಕೆಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗದಲ್ಲಿ ಗ್ಲಾಂನ್ಸಿಯಾ ಪಿಂಟೊ ಪ್ರಥಮ ಹಾಗೂ ಮೇಘನಾ ಅಮೀನ್ ದ್ವಿತೀಯ
8) 19 ವರ್ಷ ಕೆಳಗಿನ ಹುಡುಗಿಯರ ಡಬಲ್ಸ್ ವಿಭಾಗದಲ್ಲಿ ಗ್ಲಾಂನ್ಸಿಯಾ ಪಿಂಟೊ ಮತ್ತು ರೋಶ್ನಿ ಶೆಟಿ ಪ್ರಥಮ ಹಾಗೂ ನೇಹಾ ಜಿ ಮತ್ತು ನೇಹಾ ಹರೀಶ್ ದ್ವಿತೀಯ
9) 17 ವರ್ಷ ಕೆಳಗಿನ ಹುಡುಗರ ಡಬಲ್ಸ್ ವಿಭಾಗದಲ್ಲಿ ಗ್ಲಾನೇಶ್ ಪಿಂಟೊ ಮತ್ತು ವೈಷ್ಣವ್ ಪ್ರಥಮ ಹಾಗೂ ಅಭಯ್ ಪೈ ಮತ್ತು ಚಿರಾಗ್ ದ್ವಿತೀಯ
10) 19 ವರ್ಷ ಕೆಳಗಿನ ಹುಡುಗರ ಡಬಲ್ಸ್ ವಿಭಾಗದಲ್ಲಿ ಅನಿರುದ್ಧ್ ಮತ್ತು ವರುಣ್ ಪ್ರಥಮ ಹಾಗೂ ಗೌರವ್ ನಾಯಕ್ ಮತ್ತು ಸತ್ಯದೀಪ್ ದ್ವಿತೀಯ
12.10.2014 ರಂದು ನಡೆದ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಫೈನಲ್ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ:
1) ಮಹಿಳಾ ಸಿಂಗಲ್ಸ್ ವಿಭಾಗ ಮೇಘನಾ ಕುಲಕರ್ಣಿ ಫ್ರಥಮ ಹಾಗೂ ರೌತ್ ಮಿಶಾ ವಿನೋದ್ ದ್ವಿತೀಯ
2) ಪುರುಷರ ಡಬಲ್ಸ್ ವಿಭಾಗದಲ್ಲಿ (35 ವರ್ಷ ಮೇಲ್ಟಟ್ಟು) ಸುನಿಲ್ ಗ್ಲಾಡ್ಸನ್ ಮತ್ತು ಶ್ರೀಕಾಂತ್ ಸುಭಾಷ್ ಪ್ರಥಮ ಹಾಗೂ ಗುರುಪ್ರಸಾದ್ ಮತ್ತು ಅಭಿಜಿತ್ ದ್ವಿತೀಯ
3) ಪುರುಷರ ಸಿಂಗಲ್ಸ್ ವಿಭಾಗ ಹೇಮಂತ್ ಗೌಡ ಫ್ರಥಮ ಹಾಗೂ ಫಲ್ಗುಣ್ ದ್ವಿತೀಯ
4) ಓಪನ್ ಮಿಕ್ಸ್ಡ್ ಡಬಲ್ಸ್ನಲ್ಲಿ ಆದರ್ಶ್ ಮತ್ತು ವರ್ಷಾ ಬೆಲ್ವಾಡಿ ಪ್ರಥಮ ಹಾಗೂ ಹೇಮಂತ್ ಮತ್ತು ರೌತ್ ಮಿಶಾ ವಿನೋದ್ ದ್ವಿತೀಯ
5) ಪುರುಷರ ಓಪನ್ ಡಬಲ್ಸ್ ವಿಭಾಗದಲ್ಲಿ (45 ವರ್ಷ ಮೇಲ ಟು ) ಜಯರಾಮ್ ಪೈ ಮತ್ತು ಮಂಜುನಾಥ್ ಪ್ರಥಮ ಹಾಗೂ ಸುನಿಲ್ ಪೈ ಮತ್ತು ನರೇಂದ್ರ ದ್ವಿತೀಯ
6) ಮಹಿಳೆಯರ ಓಪನ್ ಡಬಲ್ಸ್ ವಿಭಾಗದಲ್ಲಿ ವರ್ಷಾ ಬೆಲ್ವಾಡಿ ಮತ್ತು ನಿಶ್ಚಿತಾ ಪ್ರಥಮ ಹಾಗೂ ರೌತ್ ಮಿಶಾ ವಿನೋದ್ ಮತ್ತು ಸಂಗೀತಾ ದ್ವಿತೀಯ
7 ) ಪುರುಷರ ಓಪನ್ ಡಬಲ್ಸ್ ವಿಭಾಗದಲ್ಲಿ ಗುರುಪ್ರಸಾದ್ ಮತ್ತು ಸಂಜಿತ್ ಪ್ರಥಮ ಹಾಗೂ ಆದರ್ಶ್ ಮತ್ತು ವಿನೀತ್ ದ್ವಿತೀಯ.