ಮಂಗಳೂರು : ಅಕ್ಟೋಬರ್ 13ರ ಸೋಮವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಪ್ರೋ| ಪಿ.ಪಿ.ಗೋಮತಿ (84) ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಮಂಗಳವಾರ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಮಂಗಳೂರು ಮೇಯರ್ ಮಹಾಬಲ ಮಾರ್ಲ, ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನ ಉದ್ಯಮಾಡಳಿತ ವಿಭಾಗದ ಪ್ರಾಂಶುಪಾಲರಾದ ದೇವರಾಜ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ ಆಶೋಕ್, ಹಿರಿಯ ಯಕ್ಷಗಾನ ಅರ್ಥಧಾರಿ ಪ್ರೋ| ಪ್ರಭಾಕರ್ ಜೋಷಿ, ಉದ್ಯಮಿ ರಮೇಶ್ ಕುಮಾರ್, ಕಾಲೇಜಿನ ಶಿಕ್ಷಕರು ಸೇರಿದಂತೆ ವಿವಿಧ ಗಣ್ಯರು ಶ್ರೀಯುತರಿಗೆ ಅಂತಿಮ ನಮನ ಸಲ್ಲಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ತನ್ನನು ತಾನು ಸಮರ್ಪಣೆ :
ತನ್ನನ್ನು ತಾನು ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಿಸಿಕೊಂಡಿದ್ದ ಪ್ರೋ| ಗೋಮತಿಯವರು ಕೇರಳದ ತಲಶ್ಯೇರಿಯಲ್ಲಿ ಇಂಟರ್ಮೀಡಿಯೆಟ್ ( ಆಂಗ್ಲ ಸಾಹಿತ್ಯ) ಬಳಿಕ ಆಗಿನ ಮದ್ರಾಸ್ನ ಪೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ., ತಲಶ್ಯೇರಿಯಲ್ಲಿ ಬಿ.ಟಿ. ಓದಿದರು. ಪಾಲಕ್ಕಾಡ್ ವಿಕ್ಟೋರಿಯಾ ಕಾಲೇಜ್ನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಬಳಿಕ ಪ್ರೊಫೆಸರ್ ಆಗಿ ವೃತ್ತಿ ಜೀವನ ನಿರ್ವಹಿಸಿ 1954ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿಗೆ ( ಈಗ ವಿ.ವಿ.ಕಾಲೇಜ್) ವರ್ಗಾವಣೆಗೊಂಡರು.
ಬೆಂಗಳೂರಿನ ಮಹಾರಾಜಾ ಕಾಲೇಜಿನಲ್ಲಿ ಸ್ವಲ್ಪ ಸಮಯ ನಿಯುಕ್ತಿ ಸೇವೆ ಸಲ್ಲಿಸಿದರು. ಬಳಿಕ ಬೆಸೆಂಟ್ ಮಹಿಳಾ ಕಾಲೇಜ್ನಲ್ಲಿ 1980 – 88ರಲ್ಲಿ ಪ್ರಾಂಶುಪಾಲರಾಗಿ, ಬೆಸೆಂಟ್ ಆಡಳಿತ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಸತತ 26 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಮ್ಯೊಲಿ ಸಂತಾಪ :
ಪ್ರೋ| ಗೋಮತಿಯವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ವೀರಪ್ಪ ಮ್ಯೊಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗೋಮತಿಯವರ ಆಂಗ್ಲ ಭಾಷಾ ಭೋಧನೆಯ ಫ್ರೌಢಿಮೆಯ ಫಲವನ್ನು ಅಪಾರ ವಿದ್ಯಾರ್ಥಿಗಳು ಪಡೆದಿದ್ದಾರೆಂದು ಸ್ಮರಿಸಿದರು.
1 Comment
Professor Gomathi was my English lecturer when I was studying B.Sc in Government College,Mangalore during 1969-1970.She was the best lecturer I had seen.
My condolences to her family.