ಕರಾವಳಿ

ಕರ್ನಾಟಕ ರಾಜ್ಯ ವಕೀಲರ ಪರೀಷತ್ ನ ವತಿಯಿಂದ ಪಿ.ಪಿ.ಹೆಗ್ಡೆಗೆ ಅಭಿನಂದನಾ ಸಮಾರಂಭ.

Pinterest LinkedIn Tumblr

pphegde_bar_assosiation_1

ಮಂಗಳೂರು,ಅ.16: ವಕೀಲರ ಪರಿಷತ್‌ನ ಅಧ್ಯಕ್ಷ ಹುದ್ದೆ ಪಿ.ಪಿ. ಹೆಗ್ಡೆಗೆ ಸೇರಿದ್ದಲ್ಲ, ಇದು ಮಂಗಳೂರಿಗೆ ಸೇರಿದ್ದು. ಹಿರಿಯ ವಕೀಲರಾದ ಎಲ್ಯಣ್ಣ ಪೂಜಾರಿ, ಸೀತಾರಾಮ ಶೆಟ್ಟಿ, ಟಿ. ನಾರಾಯಣ ಪೂಜಾರಿ ಮೊದಲಾದವರ ಮಾರ್ಗದರ್ಶನದಿಂದ ನಾನು ಈ ಹಂತಕ್ಕೇರಿದ್ದೇನೆ. ನಾನು ಯಾವತ್ತೂ ಮಂಗಳೂರಿನವನಾಗಿರುತ್ತೇನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರೀಷತ್ ನ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಹೇಳಿದರು.

pphegde_bar_assosiation_4 pphegde_bar_assosiation_2 pphegde_bar_assosiation_3

ವಕೀಲರಿಗೆ ಗುಂಪು ವಿಮೆ ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವಾಗಲು ತಾನು ಬದ್ಧನಾಗಿದ್ದು, ಈ ಬಗ್ಗೆ ಅಧ್ಯಯನ ಮಾಡಿ ವರದಿ ತಯಾರಿಸಲು ತಜ್ಞರ ಸಮಿತಿ ರಚಿಸಲಾಗುವುದು‌ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಪಿ.ಪಿ. ಹೆಗ್ಡೆ ಈ ಸಂದರ್ಭದಲ್ಲಿ ಹೇಳಿದರು.

pphegde_bar_assosiation_5 pphegde_bar_assosiation_6 pphegde_bar_assosiation_7 pphegde_bar_assosiation_8

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಅಶೋಕ್‌ ಅರಿಗಾ ಸ್ವಾಗತಿಸಿದರು.  ಹಿರಿಯ ವಕೀಲ ಹಾಗೂ ಪರಿಷತ್‌ನ ಮಾಜಿ ಉಪಾಧ್ಯಕ್ಷ ಟಿ. ನಾರಾಯಣ ಪೂಜಾರಿ ಮತ್ತು ಸಂಘದ ಪದಾಧಿಕಾರಿಗಳು ಪಿ.ಪಿ. ಹೆಗ್ಡೆ ಅವರನ್ನು ಅಭಿನಂದಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ದೇವಾನಂದ ಕೆ. ಮತ್ತು ಮೂಡಬಿದಿರೆ ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌. ಪಂಡಿತ್‌ ಅವರೂ ಅಭಿನಂದಿಸಿದರು. ಕಾರ್ಯದರ್ಶಿ ಲಾವಣ್ಯ ವಂದಿಸಿದರು. ಮಯೂರ್‌ ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.

Write A Comment