ಕರಾವಳಿ

ಮಗನನ್ನು ಕೊಂದವರಿಗೆ ಪೊಲೀಸರು ರಕ್ಷಣೆ ಕೊಡುತ್ತಿದ್ದಾರೆ: ಪ್ರಮೋದ್ ಖಾರ್ವಿ ಹೆತ್ತವರ ಆರೋಪ

Pinterest LinkedIn Tumblr

Kundapura Karvikere_Pramodh Karvi (7)

ಕುಂದಾಪುರ: “ಇರೋ ಒಬ್ಬ ಮಗನೂ ಅನ್ಯಾಯವಾಗಿ ಕೊಲೆಯಾಗಿ ಹೋದ, ಇನ್ನು ಮನೆಗೆ ಗಂಡು ದಿಕ್ಕಿಲ್ಲ, ನನ್ನ ಮಗ ಸಾಯುವಾಗ ನಮ್ಮನ್ನೆಲ್ಲಾ ಎಷ್ಟು ನೆನಪಿಸಿಕೊಂಡನೋ, ನನ್ನ ಮಗನಿಗೆ ಬಂದ ಸಾವು  ಯಾರಿಗೂ ಬಾರದಿರಲಿ, ಆತನನ್ನು ಅಮಾನವೀಯವಾಗಿ ಕೊಂದ ದುಷ್ಟರಿಗೆ ಶಿಕ್ಷೆ ಕೊಡಿಸಿ ಸ್ವಾಮೀ’ ಎಂದು ಮಾಧ್ಯಮದವರ ಬಳಿ ಅಂಗಲಾಚುತ್ತಿದ್ದ ಮಹಿಳೆ ಕುಂದಾಪುರ ಖಾರ್ವಿಕೇರಿ ನಿವಾಸಿ ಗಣಪಯ್ಯ ಖಾರ್ವಿ ಅವರ ಧರ್ಮಪತ್ನಿ ಜಯಲಕ್ಶ್ಮೀ ಖಾರ್ವಿ. ಇವರ ಮಗನೇ ಮಂಗಳವಾರ ಸಂಜೆ ಸುಮಾರಿಗೆ ಖಾರ್ವಿಕೇರಿಯ ಹೊಳೆಯಲ್ಲಿ ಶವಾವಾಗಿ ತೇಲಿಬಂದ ಪ್ರಮೋದ್ ಖಾರ್ವಿ(22).

ಗುರುವಾರ ಆತನ ಮನೆಗೆ ತೆರಳಿದ ಮಾಧ್ಯಮದವರ ಮುಂದೆ ತಮ್ಮ ಸಂಕಷ್ಟವನ್ನು ತಾಯಿ ಜಯಲಕ್ಷ್ಮೀ ತಂದೆ ಗಣಪಯ್ಯ ಖಾರ್ವಿ ಹಾಗೂ ಪ್ರಮೋದ ಖಾರ್ವಿಯ ಮೂವರು ಸಹೋದರಿಯರು ಕಣ್ಣೀರ್‍ಇಡುತ್ತಾ ಹೇಳಿದರು.

D D

D

D Kundapura Karvikere_Pramodh Karvi (10) Kundapura Karvikere_Pramodh Karvi (11) D D Kundapura Karvikere_Pramodh Karvi (8) Kundapura Karvikere_Pramodh Karvi D

ತನ್ನ ಮನೆಮಗನನ್ನು ಪಪಿಗಳು ಅಮಾನುಷವಾಗಿ ರಾತ್ರಿ ಸಮಯದಲ್ಲಿ ಹೊಡೆದಿದ್ದನು ಎಲ್ಲರೂ ಕಂಡಿದ್ದಾರೆ, ಅಲ್ಲದೇ ಬುಧ್ವಾರ ಸ್ಥಳ ಮಹಜರಿಗೆ ಬಂದ ಪೊಲಿಸರಿಗೆ ಆರೋಪಿಗಳಿಗೆ ಸಂಬಂದಪಟ್ಟ ಜಾಗದಲ್ಲಿ ಸಿಕ್ಕ ಕೆಲವು ಮಾಧಕ ದ್ರವ್ಯಗಳು, ಮದ್ಯದ ಬಾಟಲಿಗಳು ಇಲ್ಲೊಂದು ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎದು ತಿಳಿದರೂ ಕೂಡ ಪೊಲಿಸರೂ ಯಾವ ಕ್ರಮವನ್ನು ಕೈಗೊಂಡಿಲ್ಲ, ಆರೋಪಿಗಳ ಯಾವುದೇ ‘ಪ್ರಭಾವ’ಕ್ಕೆ ಒಳಗಾಗಿ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮಗನನ್ನು ಕಳೆದುಕೊಂಡಿದ್ದೇವೆ, ನಮಗೆ ಭದ್ರತೆ ನೀಡುವ ಬದಲು ಆರೋಪಿಗಳ ಮನೆಗೆ ಗರಿಷ್ಟ ಭದ್ರತೆ ಹಾಕುವ ಮೂಲಕ ಹಣವಂತರಿಗೆ ಸಹಾಯ ಮಾಡುತ್ತಿದ್ದಾರೆ, ನಮ್ಮ ಕಷ್ಟ ಕೇಳೋರ್ಯಾರು ಇಲ್ಲ, ನಮಗೆ ನ್ಯಾಯ ಬೇಕು ಎಂದು ಕಣ್ಣೀರಿಟ್ಟಿದ್ದು ಮನಕಲುಕುವಂತಿತ್ತು.

ಇಲ್ಲಿನ ಖಾರ್ವಿಕೇರಿಯ ಮೇಲ್ ಖಾರ್ವಿಕೇರಿ ನಿವಾಸಿ ಗಣಪಯ್ಯ ಖಾರ್ವಿ ಹಲವು ವರ್ಷಗಳಿಂದ ಈ ಭಾಗದಲ್ಲಿ ಮೀನುಗಾರಿಕೆ ಹಾಗೂ ಚಿಪ್ಪು ತೆಗೆಯುವ ಕಾರ್ಯ ಮಾಡಿಕೊಂಡಿದ್ದರು. ಪತ್ನಿ ಜಯಲಕ್ಷ್ಮೀ ಹಾಗೂ ಮೂವರು ಹೆಣ್ಣು ಮಕ್ಕಳು ಸಾಗರ ತಾಲೂಕಿನ ಸೊರಬದಲ್ಲಿ ವಾಸವಾಗಿದ್ದು ಪ್ರಮೋದನೂ ಕೂಡ ಮೊದಲು ಅಲ್ಲಿಯೇ ಇದ್ದ ಎನ್ನಲಾಗಿದೆ. ವಾರಕ್ಕೊಮ್ಮೆಯಂತೆ ಎಲ್ಲರೂ ಖಾರ್ವಿ ಕೇರಿಗೆ ಬಂದು ಹೋಗುವ ಪರಿಪಾಠವೂ ಇತ್ತು. ಹೀಗಿರುವಾಗ ಕೆಲಸದ ತರುವಾಯ 2 ವರ್ಷಗಳ ಹಿಂದೆ ತಂದೆಯೊಂದಿಗೆ ಚಿಪ್ಪಿತೆಗೆಯುವ ಹಾಗೂ ಮೀನುಗಾರಿಕೆ ಕೆಲಸ ಮಾಡಲು ಪ್ರಮೋದ ಖಾರ್ವಿ ಮೇಲ್ ಖಾರ್ವಿಕೇರಿಗೆ ಬಂದು ತಂದೆಯೊಂದಿಗೆ ವಾಸವಿದ್ದ. ಅಲ್ಲದೇ ಇಬ್ಬರು ಸಹೋದರಿಯರಿಗೆ ಉತ್ತಮ ವರನನ್ನು ನೋಡಿ ಮದುವೆಯನ್ನೂ ಮಾಡಿಸಿದ್ದ ಎನ್ನಲಾಗಿದೆ. ಹೀಗೆ ತಾನಾಯಿತು ತನ್ನ ಕೆಲ್ಸವಾಯಿತು ಎಂದಿರುತಿದ್ದ ಈತ ಬರುಬರುತ್ತಾ ತನ್ನ ನಿವಾಸದ ಸಮೀಪದಲ್ಲಿ ಎಗ್ಗಿಲ್ಲದೇ ಸಾಗುತ್ತಿದ್ದ ಮರಳುಗಾರಿಕೆ ಹಾಗೂ ಅವರು ರಾತ್ರಿ ಸಮಯದಲ್ಲಿ ಮಾಡುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳತ್ತ ಗಮನಹರಿಸಿ ಅದನ್ನು ತಿಳಿದುಕೊಳ್ಳಲು ಆರಂಭಿಸಿದ, ಈ ವಿಚಾರ ಅಲ್ಲಿನ ಮೂರ್ನಾಲ್ಕು ಪ್ರಭಾವಿ ವ್ಯಕ್ತಿಗಳ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗಿದೆ. ಕಾರಣ ಏನೋ ಗೊತ್ತಿಲ್ಲ ಆತ  ರಾತ್ರಿ ತಾಯಿಗೆ ಕರೆ ಮಾಡಿ ಇಲ್ಲಿ ಏನು ಸರಿ ಇಲ್ಲಮ್ಮಾ, ಎಲ್ಲಾ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ, ನನಗೂ ಜೀವ ಬೆದರಿಕೆ ಬಂದಿದೆ, ನನಗಿಲ್ಲಿ ಕೆಲಸ ಮಾಡಲು ಆಗುತ್ತಿಲ್ಲ, ನಾನು ಸೊರಬಕ್ಕೆ ಬರುತ್ತೇನೆ’ ಎಂದು ಹೇಳಿದ್ದನಷ್ಟೇ, ಬಳಿಕ ಆ ತಾಯಿಗೆ ಮಗನ ಧ್ವನಿಯನ್ನೇ ಕೇಳಲು ಆಗಿಲ್ಲ. ಬಳಿಕ ಪ್ರಮೋದ ಸಿಕ್ಕಿದ್ದು ನೀರಿನಲ್ಲಿ ತೇಲಿಬಂದ ಶವವಾಗಿ.

ರಾತ್ರಿ ಏನಾಗಿತ್ತು: ಸ್ಥಳಿಯರು ಹಾಗೂ ಪ್ರಮೋದ್ ಖಾರ್ವಿ ಮನೆಯವರು ಹೇಳುವ ಪ್ರಕಾರ ಪ್ರಮೋದನನ್ನು ಅಂದು ರಾತ್ರಿ ಮೂರ್ನಾಲ್ಕು ಜನರ ಗುಂಪು ಮಾತನಾಡುವ ಸಲುವಾಗಿ ಕರೆದೊಯ್ದಿದ್ದರು, ಅಲ್ಲಿ ಪ್ರಮೋದನಿಗೆ ಮದ್ಯಪಾನ ಮಾಡಿಸಲಾಗಿತ್ತು. ಬಳಿಕ ಇವರ ನಡುವೆ ಮಾತಿನ ಚಕಮಕಿಯೂ ನಡೆದಿದ್ದು ಅದು ವಿಪರೀತಕ್ಕೆ ತಿರುಗಿತ್ತಂತೆ, ಬಳಿಕ ಪ್ರಮೋದನನ್ನು ಅಟ್ಟಾಡಿಸಿಕೊಂಡು ಹೋಗಿದ್ದನ್ನು ಈ ಭಾಗದಲ್ಲಿ ನೋಡಿದವರಿದ್ದಾರೆ ಎನ್ನುತ್ತಾರೆ ಆತನ ಮನೆಯವರು.

ಅಂದು ರಾತ್ರಿಯಿಂದ ನಾಪತ್ತೆಯಾದ ಪ್ರಮೋದ ಶವ ಪಂಚಾಗಂಗಾವಳಿ ನದಿಯಲ್ಲಿ ತೇಲುತ್ತಿತ್ತು. ಸ್ಥಳೀಯ ಮೀನುಗಾರರು ಅದನ್ನು ನೋಡಿ ಪೊಲಿಸರಿಗೆ ವಿಚಾರ ಮುಟ್ಟಿಸಿದ್ದಾರೆ, ಪೊಲೀಸರು ಬಂದು ನೋಡುವಾಗ ಅಧು ಪ್ರಮೋದ್ ಖಾರ್ವಿ ಶವವೆಂದು ದ್ರಢಪಟ್ಟಿದೆ. ಮ್ರತ ಪ್ರಮೋದ್ ಕಣ್ಣು ಹಾಗೂ ಕುತ್ತಿಗೆ ಭಾಗದಲ್ಲಿ ರಕ್ತಗಾಯವಾಗಿತ್ತು. ಆಗಲೇ ಸ್ಥಳಿಯರಿಂದ ಇದೊಂದು ವ್ಯವಸ್ಥಿತ ಕೊಲೆಯೆಂದು ಅನುಮಾನ ವ್ಯಕ್ತಪಡಿಸಿ ಕುಂದಾಪುರ ಠಾಣೆಗೆ ಮುತ್ತಿಗೆಯನ್ನು ಹಾಕಲಾಗಿತ್ತು.

ಅನುಮಾನಾಸ್ಪದ ಸಾವು ಹಾಗೂ ಇದೊಂದು ಕೊಲೆಯೆಂಬ ಮಾತುಗಳು ಕೇಳಿಬಂದಿದ್ದರಿಂದ ಶವವನ್ನು ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರಿಕ್ಷೆಗಾಗಿ ಕಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಪ್ರಮೋದ ಖಾರ್ವಿ ಶವ ಬರುತ್ತಿದ್ದಂತೆಯೇ ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಪ್ರಮೋದ್ ಶವವನ್ನು ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿಟ್ಟು ಪ್ರತಿಭಟಿಸಲಾಗಿತ್ತು, ಈ ವೇಳೆ ನಿಸ್ಪಕ್ಶಪಾತ ತನಿಖೆಯ ಭರವಸೆ ಪೊಲೀಸರಿಂದ ಬಂದ ಕಾರಣದಿಂದಾಗಿ ಪ್ರತಿಭಟನೆ ನಿಲ್ಲಿಸಿ ಶವವನ್ನು ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು.

ಇದು ಕೊಲೆಯೇ ಅಥ್ವಾ ನೀರಿಗೆ ಬಿದ್ದಿರಬಹುದೆಮ್ಬ ಹಲವು ಅನುಮಾನಗಳ ನಡುವೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಮರಣೋತ್ತರ ಪರಿಕ್ಷೆಯ ವರದಿ ಬರಲಿದ್ದು ಆ ಬಳಿಕವಷ್ಟೇ ಘಟನೆ ಸತ್ಯಾಸತ್ಯತೆ ತಿಳಿಯಲಿದೆ.

1 Comment

  1. ಕೇಸರಿ ಧ್ವಜಗಳನ್ನು ಹಿಡಿದು ರಸ್ತೆಯಲ್ಲಿ ಹಿಂಡು ಹಿಂಡಾಗಿ
    ಪ್ರತಿಭಟನೆ ಮಾಡುವ ಕೋತಿಗಳೇ ಸ್ವಲ್ಪ ಮುಂದೆ ಬಂದು
    ಇಂತಹ ವಿಷಯಕ್ಕೆ ಸಹಕರಿಸಿ ನಿಮ್ಮ ಸಂಸ್ತೆ ಉದ್ದಾರ
    ವಾಗಲೂಬಹುದು

Write A Comment