ಮಂಗಳೂರು / ಮಂಗಳೂರು : ದೀಪಗಳ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತವಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕರನ್ನು ವಿನಂತಿಸಿದೆ.
ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆ ಹಾಗೂ ಪರಿಸರ ಮಾಲಿನ್ಯ ಮತ್ತು ಶಬ್ಬ ಮಾಲಿನ್ಯಗಳನ್ನು ನಿಯಂತ್ರಣದಲ್ಲಿಡುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹಾಗೂ ಸಿಡಿಮದ್ದುಗಳಿಂದ ಉಂಟಾಗುವ ಶಬ್ಬದ ಮಿತಿಯನ್ನು 4 ಮೀ. ದೂರದಲ್ಲಿ 125 ಡೆಸಿಬಲ್ (ಎಐ=ಆಡಿಬಲ್ ಫ್ರೀಕ್ವೆನ್ಸಿ ಇಂಟೆಗ್ರೇಟೆಡ್ ವ್ಯಾಲ್ಯೂ=ಕೇಳುವ ಶಬ್ದ ಪ್ರಮಾಣ) ಅಥವಾ 145 ಡೆಸಿಬಲ್ (ಸಿ-ಪಿಕೆ= ಕಮ್ಯುನಿಟಿ ನಾಯ್ಸ ಎಟ್ ಪೀಕ್ ವ್ಯಾಲ್ಯೂ=ಹಲವು ಸಿಡಿಮದ್ದುಗಳು ಸಿಡಿದಾಗ ಗಣಿತ ಲೆಕ್ಕದಲ್ಲಿ ಅಳೆಯುವ ಶಬ್ದ ಪ್ರಮಾಣ) ಇದಕ್ಕಿಂತ ಜಾಸ್ತಿ ಶಬ್ದ ಉಂಟಾಗುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ನಿಷೇಧಿಸಲಾಗಿದೆ.
ಈ ಮಾನದಂಡ ಮೀರಿದ ಪಟಾಕಿ ಮತ್ತು ಸಿಡಿಮದ್ದುಗಳನ್ನು ಮಾರಾಟ ಮಾಡದಂತೆ ಹಾಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ತರಹದ ಪಟಾಕಿ/ಸಿಡಿಮದ್ದುಗಳನ್ನು ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಃಶಬ್ದ ವಲಯಗಳೆಂದು ಘೋಷಿಸಲ್ಪಟ್ಟ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ನಿಷೇಧಿತ ಪಟಾಕಿ ಅಥವಾ ಸಿಡಿಮದ್ದುಗಳನ್ನು ಸಿಡಿಸುವಂತಿಲ್ಲ.
ಮಂಡಳಿಯ ಪ್ರಾದೇಶಿಕ ಕಚೇರಿಗಳಲ್ಲಿ ಶಬ್ದ ಪ್ರಮಾಣಗಳನ್ನು ಅಳೆಯುವ ಉಪಕರಣವಿದ್ದು ದೀಪಾವಳಿ ಸಂದರ್ಭ ಮೇಲ್ವಿಚಾರಣೆ ಮಾಡಲಾಗುತ್ತದೆ. ಸಿಡಿಮದ್ದು ಅಂಗಡಿಗಳ ಬಾಕ್ಸ್‌ಗಳಲ್ಲಿ ಡೆಸಿಬಲ್ ಪ್ರಮಾಣವನ್ನು ಬರೆದಿರುತ್ತಾರೆ. ಇದು ಸರಿ ಇದೆಯೆ ಎನ್ನುವುದನ್ನೂ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿ ಯಾವುದೇ ಆದೇಶಗಳನ್ನು ಉಲ್ಲಂ ಸುವುದು ಕಂಡು ಬಂದಲ್ಲಿ ಅದಕ್ಕೆ ಕಾರಣರಾದವರ ಮೇಲೆ ಕಾನೂನಿನ್ವಯ ಕಟ್ಟುನಿಟ್ಟಾದ ಕ್ರಮವನ್ನು ಜರುಗಿಸಲಾಗುವುದೆಂದು ಮಂಡಳಿ ಪ್ರಾದೇಶಿಕ ಕಚೇರಿ ( ದೂರವಾಣಿ ಸಂಖ್ಯೆ : ಉಡುಪಿ – 0820 2572862, ಮಂಗಳೂರು – 0824 2406584) ಪ್ರಕಟನೆ ತಿಳಿಸಿದೆ.