ಕರಾವಳಿ

ಗಣಪತಿ ಭಂಡಾರ್‌ಕರ್ ಆಂಡ್ ಸನ್ಸ್ – ಸುಡುಮದ್ದುಗಳ ವಿಶೇಷ ಮಾರಾಟ – ಪಟಾಕಿ ಖರೀದಿಸಿರಿ, ಬಹುಮಾನ ಗೆಲ್ಲಿರಿ

Pinterest LinkedIn Tumblr

Gbr_Deepavali_Offer_M

ಮಂಗಳೂರು : ನಗರದ ಬಂದರ್‌ನ ಗೋಳಿಕಟ್ಟಾ ಬಜಾರ್, ಜೆ.ಎಂ.ರಸ್ತೆಯಲ್ಲಿರುವ ಗಣಪತಿ ಭಂಡಾರ್‌ಕರ್ ಆಂಡ್ ಸನ್ಸ್ ಮಳಿಗೆಯಲ್ಲಿ ವರ್ಷಂ ಪ್ರತಿ ನಡೆಯುವ ದೀಪಾವಳಿ ಉತ್ಸವದ ವಿಶೇಷ ಮಾರಾಟ ಆರಂಭಗೊಂಡಿದೆ.ಪಟಾಕಿ ಖರೀದಿಸಿರಿ, ಬಹುಮಾನ ಗೆಲ್ಲಿರಿ ವಿಶೇಷ ಕೊಡುಗೆಯೊಂದಿಗೆ ಇಲ್ಲಿ ಬೆಳಕಿನ ಹಬ್ಬಕ್ಕೆ ಚಾಲನೆ ಸಿಕ್ಕಿದೆ.

ಅನಿಲ್, ಸೋನಿ, ಕಾರ್ಕ್ ಸೇರಿದಂತೆ ಪ್ರಮುಖ ಪಟಾಕಿ ತಯಾರಿಕಾ ಕಂಪೆನಿಗಳ ಅಪಾರ ಸಂಗ್ರಹ ಇಲ್ಲಿದೆ. ಮನೆಗಳನ್ನು ಬೆಳಕಿನಿಂದ, ಗಗನವನ್ನು ಪಟಾಕಿಗಳಿಂದ ಪ್ರಕಾಶಿಸುವುದು ಆರೋಗ್ಯ, ಸಂಪತ್ತು; ಜ್ಞಾನ ಶಾಂತಿ ಹೊಂದಲು ಭಗವಂತನಿಗೆ ಮಾಡುವ ವಂದನೀಯ ವಿಧಾನ ಎಂಬುದು ನಂಬಿಕೆ. ಕಳೆದ ೬ ದಶಕಗಳಿಂದ ಪಟಾಕಿ ವ್ಯವಹಾರದಲ್ಲಿ ಅಪೂರ್ವ ಅನುಭವ ಹೊಂದಿರುವ ಗಣಪತಿ ಭಂಡಾರ್‌ಕರ್ ಸಂಸ್ಥೆ ಕರಾವಳಿಯಲ್ಲಿ ಮನೆಮಾತಾಗಿದೆ.

Gbr_Deepavali_Offer_2 Gbr_Deepavali_Offer_3 Gbr_Deepavali_Offer_4 Gbr_Deepavali_Offer_5

ಬಿಡಿ ಪಟಾಕಿ, ಓಲೆ ಪಟಾಕಿ, ಮಳೆ ಮಾಲರ, ಬಾಣ, ರಾಕೆಟ್, ಹೂವಿನ ಕುಂಡ ಹೀಗೆ ವಿವಿಧ ವಿನ್ಯಾಸಗಳಿಂದ ಕೂಡಿದ ಸಾಂಪ್ರದಾಯಿಕ ಮತ್ತು ಆಧುನಿಕ ಪಟಾಕಿಗಳ ಸರಮಾಲೆಯೇ ಇಲ್ಲಿದೆ. ಮಕ್ಕಳಿಗೆ ವಿಶೇಷ ಆಕರ್ಷಣೆಯುಳ್ಳ ಹೊಸ ಮಾದರಿಯ ಪಟಾಕಿಗಳಾದ ಚೋಟಾ ಭೀಮ್ ಹಾಗೂ ಬೆನ್ – ೧೦ ಈ ವರ್ಷ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಒಟ್ಟಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರವರೆಗೆ ಮುದ ನೀಡುವ ಬಾಣಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ವೈವಿಧ್ಯಮಯ ಪಟಾಕಿಗಳ ಬಹುದೊಡ್ಡ ಸಂಗ್ರಹವನ್ನು ಈ ಮಳಿಗೆಯಲ್ಲಿ ಕಾಣ ಬಹುದಾಗಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೇ ಇತರ ಎಲ್ಲಾ ಹಬ್ಬಗಳ ಆಚರಣೆಗೆ ಅನುಕೂಲವಾಗುವಂತೆ ವರ್ಷವಿಡಿ ಪಟಾಕಿ ದೊರೆಯುವ ಮಂಗಳೂರಿನ ಏಕೈಕ ಮಳಿಗೆ ಗಣಪತಿ ಭಂಡಾರ್‌ಕರ್ ಆಂಡ್ ಸನ್ಸ್. ಗ್ರಾಹಕರ ಅನುಕೂಲಕ್ಕಾಗಿ ಮಹಮ್ಮದ ಆಲಿ ರಸ್ತೆ ಬಂದರ್ ಹಾಗೂ ವಾಮನಾಶ್ರಮ ಕಟ್ಟಡ ಕಾರ್‌ಸ್ಟ್ರೀಟ್ ಇಲ್ಲಿ ಇನ್ನೆರಡು ಮಳಿಗೆಗಳನ್ನು ಹೊಂದಿದೆ. ಇದರ ಸಹ ಸಂಸ್ಥೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ವಿಶಾಲ ಮಳಿಗೆಯೊಂದಿಗೆ ಕಾರ್ಯಾಚರಿಸುತ್ತಿದೆ.

Gbr_Deepavali_Offer_6 Gbr_Deepavali_Offer_7 Gbr_Deepavali_Offer_8 Gbr_Deepavali_Offer_9 Gbr_Deepavali_Offer_10

ಪಟಾಕಿ ಖರೀದಿಸಿ : ಬಹುಮಾನ ಗೆಲ್ಲಿ – ಬಹುಮಾನ ಯೋಜನೆ

ಇದೀಗ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಖರೀದಿಯೊಂದಿಗೆ ಬಹುಮಾನ ಗೆಲ್ಲುವ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಬಂಪರ್ ಬಹುಮಾನ ಇನ್‌ವರ್ಟರ್ ಎಸಿ, 2ನೇ ಬಹುಮಾನ ಎಲ್‌ಇಡಿ ಟಿ.ವಿ, 3ನೇ ಬಹುಮಾನ ಚಿನ್ನದ ನಾಣ್ಯ ಹಾಗೂ 100 ಸಮಾಧಾನಕರ ಬಹುಮಾನ ಗೆಲ್ಲುವ ಅವಕಾಶವಿದೆ.

ಸಂಸ್ಥೆಯ ಸಂಸ್ಥಾಪಕ ತಮ್ಮ ತಂದೆ ದಿ. ಬಿ.ಗಣಪತಿ ಭಂಡಾರ್‌ಕರ್ ಅವರ ಆದರ್ಶವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಅವರ ಅನುಕೂಲಕ್ಕಾಗಿ ವಿವಿಧ ಮಾದರಿಯ ಗಿಪ್ಟ್ ಬಾಕ್ಸ್‌ಗಳನ್ನು ಈ ಸಂದರ್ಭದಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಸಂಸ್ಥೆಯ ಪಾಲುದಾರರಾದ ಬಿ.ದಿನೇಶ್ ಭಡಾರ್‌ಕರ್ ( ಮಂಜಣ್ಣ) ಹಾಗೂ ಬಿ.ದಿಲೀಪ್ ಭಂಡಾರ್‌ಕರ್ (ಬಬ್ಬಿಯಣ್ಣ) ತಿಳಿಸಿದ್ದಾರೆ.

Write A Comment