ಕರಾವಳಿ

ಗೋ ಹತ್ಯೆ ನಿಷೇಧ ಜಾರಿ ಹಾಗೂ ಗಂಗಾ ಶುದ್ಧೀಕರಣವಾಗಬೇಕು: ಕೋಟೇಶ್ವರದಲ್ಲಿ ಪೇಜಾವರ ಶ್ರೀ ಹೇಳಿಕೆ

Pinterest LinkedIn Tumblr

Pejavara Shri_ visit_Koteshwara (14)

ಕುಂದಾಪುರ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕೋಟೇಶ್ವರ ಘಟಕದ ವತಿಯಿಂದ ನಾಲ್ಕನೇ ವರ್ಷದ ಸಾಮೂಹಿಕ ಗೋಪೂಜೆ ಪ್ರಯುಕ್ತ ಗೋ ರಕ್ಷಾ ಸಂಕಲ್ಪ ಸಮಾವೇಶ ಕೋಟೇಶ್ವರದ ಕುರುಕ್ಷೇತ್ರ ಮೈದಾನದಲ್ಲಿ ಶುಕ್ರವಾರ ಸಂಜೆ ಜರುಗಿತು.

Pejavara Shri_ visit_Koteshwara Pejavara Shri_ visit_Koteshwara (12) Pejavara Shri_ visit_Koteshwara (11) Pejavara Shri_ visit_Koteshwara (13)

ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಗಳು ಈ ಸಂದರ್ಭ ಆಶೀರ್ವಚನ ನೀಡಿ, ದೇಶದಲ್ಲಿ ಗೋ ಹತ್ಯೆ ನಿಷೇದ ಕಾಯ್ದೆ ಜಾರಿ ಹಾಗೂ ಪವಿತ್ರ ಗಂಗೆಯ ಶುದ್ಧೀಕರಣದಂತಹ ಮಹತ್ಕಾರ್ಯಗಳಾಬೇಕು. ನಮ್ಮ ದೇಶದ ಪ್ರಾಣಿ ಹುಲಿಯಾಗಿದ್ದು, ಈ ಕಾರಣದಿಂದಲೇ ಎಲ್ಲೆಡೆ ಕ್ರೌರ್ಯ ತುಂಬಿದೆ, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿದಲ್ಲಿ ಇಡೀ ಸಮಾಜ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆ, ಕಾಲ ಬದಲಾದ ಹಾಗೆಲ್ಲಾ ಸಮಾಜವು ಬದಲಾಗುತ್ತಾ ಬಂದಿದೆ, ಆದರೇ ಕಾಮಧೇನು ಮಾತ್ರ ಅಂದಿನಿಂದ ಇಂದಿನವರೆಗೂ ತ್ಯಾಗವನ್ನು ಮಾಡುತ್ತಲೇ ಇದ್ದಾಳೆ ಎಂದು ಹೇಳಿದರು.

Pejavara Shri_ visit_Koteshwara (8) Pejavara Shri_ visit_Koteshwara (7) Pejavara Shri_ visit_Koteshwara (6) Pejavara Shri_ visit_Koteshwara (5) Pejavara Shri_ visit_Koteshwara (3) Pejavara Shri_ visit_Koteshwara (1) Pejavara Shri_ visit_Koteshwara (4) Pejavara Shri_ visit_Koteshwara (2) Pejavara Shri_ visit_Koteshwara (9) Pejavara Shri_ visit_Koteshwara (10)

ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಕ್ಕಿಂತಲೂ ಗೋಹತ್ಯೆ ನಿಷೇಧ ಜಾರಿ ಮುಖ್ಯ ಎಂದಿದ್ದರು. ಕಾಂಗ್ರೆಸ್ ನಾಯಕರಿಗೆ ಮತ ಕೇಳಲು ಗಾಂಧೀಜಿಯವರ ಆದರ್ಶ ಬೇಕು ಆದರೇ ಗೋ ಹತ್ಯೆ ನಿಷೇದದ ಬಗ್ಗೆ ತಲೆಕೆಡಿಸಿಕೊಳ್ಳುತಿಲ್ಲ, ಕಾಂಗ್ರೆಸಿಗರು ಗೋವನ್ನು ಮರೆತಿದ್ದು, ಖಂಡಿತವಾಗಿಯೂ ಅವುಗಳ ಶಾಪಕ್ಕೆ ಗುರಿಯಾಗುತ್ತೀರಿ ಎಂದರು.

ಈ ಸಂದರ್ಭದಲ್ಲಿ ಕೋಟೇಶ್ವರ ಸರಕಾರಿ ಪ್ರಾಥಮಿಕ ಶಾಲೆ ಸಮೀಪದದಿಂದ ಕುರುಕ್ಷೇತ್ರ ಮೈದಾನದವರೆಗೂ ಪುರಮೆರವಣಿಗೆಯಲ್ಲಿ ಅಲಂಕ್ರತ ರಥದಲ್ಲಿ ಪುಟಾಣಿ ಕರುವನ್ನು ತರಲಾಗಿತ್ತು.

ಸಾಹಿತಿ , ಪ್ರಸಂಗಕರ್ತ ಕೆ. ಬಸವರಾಜ್ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment