ಮಂಗಳೂರು: ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತು ಅಭಿಪ್ರಾಯ ಭೇದಗಳನ್ನು ಮರೆತು ನಮ್ಮೊಂದಿಗೆ ಕೈಜೋಡಿಸುವುದಾದರೆ ಎಸ್ಎಸ್ಎಫ್, ಎಸ್ಕೆಎಸ್ಎಸ್ ಎಫ್ನೊಂದಿಗೆ ಮೈತ್ರಿಗೆ ಸದಾ ಸಿದ್ಧ ವಿದೆಯೆಂದು ಎಸ್ಎಸ್ಎಫ್ ಮುಖಂಡ ಶಾಫಿ ಸಅದಿ ತಿಳಿಸಿದ್ದಾರೆ.
ಇಂದಿನಿಂದ (ಅಕ್ಟೋಬರ್ 25ರಿಂದ) ನವೆಂಬರ್ 2ರವರೆಗೆ ನಡೆಯುವ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರರ ಕರ್ನಾಟಕ ಯಾತ್ರೆಯ ಪ್ರಚಾರಾರ್ಥ ಅಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತ ನಾಡಿದ ಎಸ್ಎಸ್ಎಫ್ ಮುಖಂಡ ಮತ್ತು ಕರ್ನಾಟಕ ಯಾತ್ರೆ ಸಂಚಾಲಕರಾದ ಶಾಫಿ ಸಅದಿ, ಎಸ್ಎಸ್ಎಫ್ಗೆ ದೇಶದಾದ್ಯಂತ ಬಡಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಸಂಕಲ್ಪವಿದೆ. ಇದೇ ತಿಂಗಳ 25ರಿಂದ ಕರ್ನಾಟಕದಾದ್ಯಂತ ನಡೆಯಲಿರುವ ಎ.ಪಿ.ಉಸ್ತಾದರ ಮನು ಕುಲವನ್ನು ಗೌರವಿಸಿ ಯಾತ್ರೆ ಜನರಲ್ಲಿ ಮಾನವೀಯ ತುಡಿತ ಮತ್ತು ಸೌಹಾರ್ದ ವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸೌಹಾರ್ದ ವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳನ್ನು ಕಾರ್ಯಕ್ರಮಕ್ಕೆ ಗೌರವಯುತವಾಗಿ ಆಹ್ವಾನಿಸಲಾಗಿದೆ. ಅಲ್ಲದೆ ಕ್ರಿಶ್ಚಿಯನ್ ಧರ್ಮದ ಮುಖಂಡರೂ ಈ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ಅವರು ಹೇಳಿದರು.
ಅಲ್ಲದೆ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಕೇರಳದಲ್ಲಿ ಭಾರತದಲ್ಲೇ ಅತೀ ದೊಡ್ಡ ಮಸ್ಜಿದ್ ನಿರ್ಮಾಣವಾಗುತ್ತಿದೆ ಎಂದು ಈ ಹಿಂದೆ ಘೋಷಿ ಸಿದ್ದೆವು. ಅದರಂತೆ ಶಅರೇ ಮುಬಾರಕ್ ಮಸ್ಜಿದ್ನ ಕೆಲಸ ನಡೆಯುತ್ತಿದ್ದು ಸದ್ಯದಲ್ಲೇ ಆಮಂತ್ರಣ ಪತ್ರಿಕೆ ನಿಮ್ಮ ತಲುಪಲಿದೆ ಎಂದರು. ಪತ್ರಕರ್ತ ರೊಬ್ಬರು ಮುಸ್ಲಿಮರಲ್ಲೇ ಒಡೆದಿರುವ ಹಲವು ಸಂಘಟನೆಗಳಿಂದ ಸಮಾಜದಲ್ಲಿ ದಿನದಿನಕ್ಕೂ ತ್ರಾಸದಾಯಕ ವಿಚಾರ ಗಳು ಹೆಚ್ಚುತ್ತಿವೆ ಎಂದು ಪ್ರಶ್ನಿಸಿದಾಗ, ಸಮಾಜದ ಸ್ವಾಸ್ತ್ಯ ಕೆಡಿಸುವ ಉದ್ದೇಶ ಹೊಂದಿರುವವರಿಗೆ ಸಂಘಟನೆಯ ಅಗತ್ಯವಿಲ್ಲ. ಯಾವ ಮೂಸೆಯಿಂದಾದರೂ ಅವರು ಅದಕ್ಕೆ ಅಣಿಯಾಗಿ ರುತ್ತಾರೆ ಮತ್ತು ಗಲಭೆ ಸೃಷ್ಟಿಸಲು ಹೆಣಗುತ್ತಿರುತ್ತಾರೆ. ಎಸ್ಎಸ್ಎಫ್ಗೆ ಯಾವ ಸಂಘಟನೆಯ ವಿರೋಧಿ ಯೂ ಅಲ್ಲ. ಎಸ್ಎಸ್ಎಫ್ 1973 ರಿಂದ ನಡೆದುಕೊಂಡು ಬರುತ್ತಿದೆ. ಹಾಗೆ ಇತರ ಸಂಘಟನೆಗಳ ಬಗ್ಗೆ ಎಸ್ಎಸ್ಎಫ್ ಸೊಲ್ಲೆತ್ತುವುದಿಲ್ಲ. ಸೈದ್ಧಾಂತಿಕ ಭಿನ್ನಾಬಿಪ್ರಾಯದ ಹೊರತು ನಮ್ಮೊಂದಿಗೆ ಕೈಜೋಡಿಸು ವ ಎಲ್ಲರೊಂದಿಗೂ ಮೈತ್ರಿಗೆ ಸಿದ್ಧ. ಹಾಗೇ ಗೌರವಿಸಿ ಕರ್ನಾಟಕ ಯಾತ್ರೆಗೆ ಎಸ್ಕೆಎಸ್ಎಸ್ಎಫ್ನ ಸದಸ್ಯರನ್ನೂ ಆಹ್ವಾನಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.
ಕರ್ನಾಟಕ ಯಾತ್ರೆ ಸಂಚಾಲಕರಾದ ಶಾಫಿ ಸಅದಿ, ಝೈನಿ ಕಾಮಿಲ್ ಸಕಾಫಿ ಕಕ್ಕಿಂಜೆ, ಹೈದರ್ ಪರ್ತಿಪ್ಪಾಡಿ, ಹಮೀದ್ ಕಂದಕ್ ರಶೀದ್ ಹಂಝ ಸಖಾಫಿ, ಮುಮ್ತಾಜ್ ಅಲಿ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.