ಕುಂದಾಪುರ: ಇತಿಹಾಸ ಪ್ರಸಿದ್ಥ ಕೋಟ ಹದಿನಾಲ್ಕು ಗ್ರಾಮಗಳ ಗ್ರಾಮ ದೇವತೆ ಎಂದೇ ಬಿಂಬಿತವಾಗಿರುವ ಶ್ರೀ ಕ್ಷೇತ್ರ ಕೋಟ ಹಲವು ಮಕ್ಕಳ ತಾಯಿ ಅಮೃತೇಶ್ವರೀ ದೇವಳದ ನೂತನ ಶಿಲಾಮಯದ ಪುನರ್ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಾಷಾಭಿಷೇಕ ಹಾಗೂ ಹಾಲು ಹಬ್ಬ ಗೆಂಡ ಸೇವೆ ಜನವರಿ 5 ರಿಂದ 11 ರ ವರೆಗೆ ನೆಡೆಯುವ ಕಾರ್ಯಕ್ರಮದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಇತೀಚಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್.ಸಿ ಕುಂದರ್ ನೇತ್ರತ್ವದಲ್ಲಿ ಜರುಗಿತು.
ಸಭೆಯಲ್ಲಿ ಹಲವು ಉಪ ಸಮಿತಿಗಳನ್ನು ರಚಿಸಿ ಕಾರ್ಯಾಚರಿಸುವ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಜೀವ ದೇವಾಡಿಗ, ರಾಜು ಪೊಜಾರಿ,ಸುಶೀಲ ಸೋಮಶೇಖರ್, ಸುಬ್ರಾಯ ಆಚಾರ್ಯ,ಜ್ಯೋತಿ ಭರತ್ ಕುಮಾರ್ ಶೆಟ್ಟಿ,ಎಮ್.ಸಂಜೀವ,ಅರ್ಚಕ ಪ್ರತಿನಿಧಿ ಸುಬ್ರಾಯ ಬಳೆಗಾರ್ ಹಾಗೂ ಜೀಣೋದ್ಥಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು