ಕರಾವಳಿ

ಸ್ನೇಹ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

Pinterest LinkedIn Tumblr

Ekatha Dinacharane

ದಿನಾಂಕ 31.10.2014 ರಂದು ಏಕತಾ ದಿನಾಚರಣೆಯ ಅಂಗವಾಗಿ ಸರದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವೆಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸರದಾರರ ಜೀವನಗಾಥೆಯ ಮುಖ್ಯ ವಿಷಯಗಳನ್ನು ನೆನಪಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ವಿಸ್ಮಯ ಡಿ, ವಿದ್ಯಾಭೂಷಣ ಪಿ, ಚರಣ್ ರಾಜ್ ಎನ್ ಎಂ, ದಿಶಾ, ಶಾಲಿನಿ ಪಿ ಆರ್, ನಿಶಾ ಪಿ, ವಿಶ್ವಾಸ್, ಪ್ರೀತಿ ಯು, ಅನಘಾ ಆರ್ ಯು ಮತ್ತು ಬ್ರಿಜೇಶ್ ಜೆ ಎಸ್ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕು ಹರಿಣಿ ರೈ , ಕು ಅನನ್ಯಾ ಟಿ ವಂದನಾರ್ಪಣೆಗೈದರು.

Write A Comment