ಕರಾವಳಿ

ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆಯೇ ಪೂರಕ-ಡಾ ಚಂದ್ರಶೇಖರ ದಾಮ್ಲೆ

Pinterest LinkedIn Tumblr

Kannada Rajyotsava

ಮಗುವಿನ ಮಾತೃಭಾಷೆಯಲ್ಲಿನ ಕಲಿಕೆ ವಿಕಸನಕ್ಕೆ ಪೂರಕವಾದುದು. ಅಖಂಡ ಭಾರತದಲ್ಲಿ ಕರ್ನಾಟಕ ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿದೆ. ಈ ಅನನ್ಯತೆಯನ್ನು ಉಳಿಸುವ ಕಾರ್ಯ ಪ್ರತಿಯೊಬ್ಬ ವ್ಯಕ್ತಿಯಿಂದ ಆಗಬೇಕು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆ ಅವರು ಹೇಳಿದರು. ಅವರು ಸುಳ್ಯದ ಸ್ನೇಹಶಾಲೆಯಲ್ಲಿ ಕನ್ನಡ ಸಂಘವು 01-11-2014ರಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿ-ಶಿಕ್ಷಕ ವೃಂದದವರಿಂದ ಕವನ ಗೋಷ್ಠಿ ಮತ್ತು ಗಾಯನ ಗೋಷ್ಠಿಗಳು ಹಾಗೂ ಶಿಕ್ಷಕ ವೃಂದದವರಿಂದ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಹಿರಿಯರ ಜೀವನ ಚಿತ್ರಣ ನೀಡಿದರು.

ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ತಮ್ಮ ಮಾತುಗಳಲ್ಲಿ ಕನ್ನಡ ನುಡಿ ಅಜರಾಮರ, ಸ್ನೇಹಶಾಲೆ ಯಾವತ್ತೂ ಕನ್ನಡ ಸ್ನೇಹಿಯಾಗಿದೆ. ಕನ್ನಡ ಉಳಿಸುವಲ್ಲಿ ಮಕ್ಕಳು ಕೈಜೋಡಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕಿ ಕು ಅನನ್ಯಾ ಟಿ, ಕನ್ನಡ ಸಂಘದ ಅಧ್ಯಕ್ಷ ಪ್ರೀತಮ್ ಆರ್ ಹೆಗಡೆ, ಕನ್ನಡ ಸಂಘದ ನಿರ್ದೇಶಕಿ ಶ್ರೀಮತಿ ಸವಿತಾ ಎಂ ಉಪಸ್ಥಿತರಿದ್ದರು. ಶಿಕ್ಷಕಿ ಕು ಜಯಲಕ್ಷ್ಮಿ ಸ್ವಾಗತಿಸಿ ಶ್ರೀಮತಿ ಜಯಂತಿ ಚೊಕ್ಕಾಡಿ ವಂದನಾರ್ಪಣೆಗೈದರು. ಕನ್ನಡ ಸಂಘದ ನಿರ್ದೇಶಕಿ ಶ್ರೀಮತಿ ಸವಿತಾ ಎಂ ಕಾರ್ಯಕ್ರಮ ನಿರ್ವಹಿಸಿದರು.

Write A Comment