ಕರಾವಳಿ

ಕುಂದಾಪುರ ಭಾಗದಲ್ಲಿ ನಡೆಯುತ್ತಿದೆ ‘ಡೀಲ್’ ಚಿತ್ರೀಕರಣ| ಕೋಡಿ, ಅಂಕದಕಟ್ಟೆ, ತೆಕ್ಕಟ್ಟೆ, ಕೋಟೇಶ್ವರ, ಮಣಿಪಾದಲ್ಲಿ ಶೂಟಿಂಗ್

Pinterest LinkedIn Tumblr

ಕುಂದಾಪುರ: ಕುಂದಾಪುರ ಕರಾವಳಿ ಪ್ರದೇಶದಲ್ಲಿ ಹಲವು ಚಿತ್ರಗಳ ಚಿತ್ರೀಕರಣ ಈ ಹಿಂದೆ ನಡೆದಿದ್ದು ಬಹಳಷ್ಟು ಚಿತ್ರಗಳು ಜನಪ್ರಿಯವಾಗಿದೆ. ಸದ್ಯ ‘ಡೀಲ್’ ಎನ್ನುವ ಕನ್ನಡ ಚಿತ್ರದ ಚಿತ್ರೀಕರಣ ಕುಂದಾಪುರದ ಹಲವೆಡೆ ನಧೆಯುತ್ತಿದೆ. ಇಡೀ ಚಿತ್ರ ತಂಡ ವಾರಗಳ ಕಾಲ ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ ಹಾಗೂ ಉಡುಪಿಯ ಮಣಿಪಾಲ ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.

Deal_Film_Shooting (20) Deal_Film_Shooting (19)

ಮೂರ್ನಾಲ್ಕು ಚಿತ್ರಗಳಲ್ಲಿ ಅಸೋಸಿಯೆಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವುಳ್ಳ ಯುವ ನಿರ್ದೇಶಕ ವಿಜಯ ತಮ್ಮಣ್ಣ ಚೊಚ್ಚಲ ನಿರ್ದೇಶನದ ಡೀಲ್ ಚಿತ್ರ ಕುತೂಹಲ ಭರಿತ ಕಥೆಯನ್ನಾಧರಿಸಿದ್ದು ಇಡೀ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಕುತೂಹಲದ ಕ್ಷಣಗಳಿಗೆ ಕೊಂಡೊಯ್ಯುತ್ತದೆ.

ತಾರಾಂಗಣ: ಡೀಲ್ ಚಿತ್ರದ ತಾರಾಂಗಣದಲ್ಲಿ ಹಲವು ಮಂದಿ ಕಲಾವಿದರಿದ್ದಾರೆ. ನಾಯಕ ಬೆಂಗಳೂರು ಮೂಲದ ದೀಪಕ್ ರಾಜ್ ಚಿತ್ರರಂಗಕ್ಕೆ ಹೊಸಪರಿಚಯವಾಗಿದ್ದು ಚಿತ್ರದಲ್ಲಿ ಸೆಲೆಬ್ರೆಟಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ತೆಲಗು ಹಾಗೂ ತಮಿಳು ಚಿತ್ರ ಹಾಗೂ ಕನ್ನಡದ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದಲ್ಲಿ ನಾಯಕಿಯಾಗಿರುವ ಬೆಂಗಳೂರು ಹುಡುಗಿ ಜೀವಿತಾ ಈ ಚಿತ್ರಕ್ಕೆ ನಾಯಕಿ. ವಿಶೇಷ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಆದಿ ಲೋಕೆಶ್ ಪೊಲೀಸ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ಇನ್ನೊಂದು ವಿಶೇಷ. ಇನ್ನು ಹಾಸ್ಯದ ಮುಖ್ಯ ಪಾತ್ರದಲ್ಲಿ ಸಿಲ್ಲಿಲಲ್ಲಿ ಖ್ಯಾತಿಯ ಶ್ರೀನಿವಾಸ್ ಗೌಡ ಹಾಗೂ ಹನುಮಂತ ರಾಜು ಇರಲಿದ್ದಾರೆ. ಖಳ ನಾಯಕನಾಗಿ ಲಕ್ಷ್ಮಿಕಾಂತ (ಹೊಸ ಪರಿಚಯ), ಕಥಾನಾಯಕಿಯ ತಂದೆ ಪಾತ್ರದಲ್ಲಿ ಜಯರಾಂ ಬಣ್ಣ ಹಚ್ಚಲಿದ್ದಾರೆ. ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದು ಕುಂದಾಪುರದ ಹಲವರಿಗೂ ಚಿತ್ರದ ಕೆಲವೊಂದು ಪಾತ್ರಗಳಲ್ಲಿ ಅವಕಾಶ ನೀಡಲಾಗಿದೆ. ಚಿತ್ರಕ್ಕೆ ವೀರಸಮರ್ಥ (ದ್ಯಾವ್ರೆ ಸಿನಿಮಾ ಖ್ಯಾತಿಯ) ಸಂಗೀತ ನೀಡಲಿದ್ದು ೨ ಹಾಡುಗಳಿದೆ, ರಾಜ್ ಗುರು ಸಾಹಿತ್ಯ, ಹೈಟ್ ಮಂಜು ನೃತ್ಯ ಸಂಯೋಜಿಸಲಿದ್ದಾರೆ. ರಾಜು ಅವರ ಛಾಯಾಗ್ರಹಣದಲ್ಲಿ ಸಂಪೂರ್ಣ ಚಿತ್ರ ಮೂಡಿಬರಲಿದೆ.

Deal_Film_Shooting (17) Deal_Film_Shooting (16) Deal_Film_Shooting (13) Deal_Film_Shooting (14) Deal_Film_Shooting (15) Picture 006 P Deal_Film_Shooting (11) P Deal_Film_Shooting (12)

ಚಿತ್ರಕಥೆ ಹಾಗೂ ನಿರ್ದೇಶನವನ್ನು ವಿಜಯ್ ತಮ್ಮಣ್ಣ ಮಾಡುತ್ತಿದ್ದು ಕುಂದಾಪುರದ ತೆಕ್ಕಟ್ಟೆಯ ನಿವಾಸಿ ಮುತ್ತಾರಿಫ್ ತೆಕ್ಕಟ್ಟೆ ಇದಕ್ಕೆ ಸಹ ನಿರ್ದೇಶಕರಾಗಿ (ಅಸಿಸ್ಟೆಂಟ್ ಡೈರೆಕ್ಟರ್) ಕೆಲಸ ಮಾಡುತಿದ್ದಾರೆ. ನಿರ್ದೇಶಕ ವಿಜಯ ಅವರು ವಿಪ್ರೋ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದು ಮುತ್ತಾರಿಫ್ ತೆಕ್ಕಟ್ಟೆ ಅವರು ಲಿನೋವಾದಲ್ಲಿ ಇಂಜಿನಿಯರ್ ವೃತ್ತಿ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ಇಂಜಿನಿಯರ್ ಆಗಿರುವುದು ಇನ್ನೊಂದು ವಿಶೇಷ.

ಚಿತ್ರದ ಕಥೆ ತುಂಬಾ ಸಸ್ಪೆನ್ಸ್: ಪ್ರೇಕ್ಷಕ ಈ ಸನ್ನಿವೇಶದಲ್ಲಿ ಹೀಗೆ ಆಗಬಹುದು ಎಂದು ಆಲೋಚಿಸುತ್ತಾನೇ ಆದರೇ ಪ್ರೇಕ್ಷಕನ ಆಲೋಚನೆ ಮೀರಿಸುವಂತೆ ಸನ್ನಿವೇಶ ಬದಲಾಗಿರುತ್ತದೆ. ನಾಯಕ ದೀಪಕ್ ರಾಜ್ ಚಿತ್ರದಲ್ಲಿ ಸಿನೆಮಾ ನಾಯಕನ ಪಾತ್ರ ಮಾಡುತ್ತಿದ್ದು ಆತನ ಹೆಂಡತಿ ಕೊಲೆಯಾಗುತ್ತಾಳೆ, ಈ ರೀತಿಯಾಗಿ ಸೆಲೆಬ್ರೆಟಿಯೊಬ್ಬ ಆಪತ್ತಿನಲ್ಲಿ ಸಿಕ್ಕಾಗ ಆತ ಅನುಭವಿಸುವ ತೊಂದರೆ-ತಾಪತ್ರಯಗಳನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ತೋರಿಸಲಾಗುತ್ತದೆ. ಸಮಾಜದಲ್ಲಿ ಪ್ರೀತಿ-ಸ್ನೇಹಕ್ಕೂ ಡೀಲ್ ನಡೆಯುತ್ತೆ, ಸ್ವಾರ್ಥಕ್ಕೂ ಡೀಲ್ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ತೋರಿಸುವ ಸಲುವಾಗಿ ‘ಡೀಲ್’ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ಚಿತ್ರದ ಯುವ ನಿರ್ದೇಶಕ ವಿಜಯ ತಮ್ಮಣ್ಣ.

ಶನಿವಾರ ಬೆಳಿಗ್ಗೆ ಆದಿಲೋಕೇಶ್ ಹಾಗೂ ಇತರೇ ಕಲಾವಿದರು ಅಂಕದಕಟ್ಟೆಯ ಮನೆಯೊಂದರಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ನಡೆಸಿದರು. ಶನಿವಾರ ಸಂಜೆ ಸುಮಾರಿಗೆ ಚಿತ್ರದ ಇಂಟರ್ವೆಲ್ (ವಿರಾಮದ) ಬಳಿಕದ ಸಸ್ಪೆನ್ಸ್ ಮರ್ಡರ್ ಸ್ಟೋರಿ ಚಿತ್ರೀಕರಣ ಕೋಡಿ ಪ್ರದೇಶದಲ್ಲಿ ನಡೆಯಿತು. ಕಥಾನಾಯಕಿ ಕೊಲೆಯ ಸಂದರ್ಭದಲ್ಲಿ ಪೊಲೀಸ್ ಪಾತ್ರದಲ್ಲಿರುವ ಆದಿಲೋಕೇಶ್ ಸ್ಥಳಕ್ಕಾಗಮಿಸಿ ಪರಿಶೀಲಿಸುವ ಕಥೆಯನ್ನು ಕೋಡಿಯಲ್ಲಿ ಚಿತ್ರೀಕರಿಸಲಾಗಿತ್ತು. ಇನ್ನು ಭಾನುವಾರ ಮಣಿಪಾಲದ ಸುತ್ತಮುತ್ತ ಹಾಗೂ ತೆಕ್ಕಟ್ಟೆಯಲ್ಲಿ ಚಿತ್ರೀಕರಣ ನಡೆದಿದ್ದು ಮುಂದಿನ ದಿನಗಳಲ್ಲಿ ಹಾಡೊಂದರ ಚಿತ್ರೀಕರಣ ಕೋಟೇಶ್ವರ ಆಸುಪಾಸಿನಲ್ಲಿ ನಡೆಯಲಿದೆ.

ಇದೇ ತಿಂಗಳ ೮ನೇ ತಾರಿಖಿನೊಳಗೆ ಚಿತ್ರೀಕರಣ ಸಂಪೂರ್ಣವಾಗಲಿದ್ದು ಮುಂದೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದೆ. ಜನವರಿ ಮೊದಲನೇ ಅಥವಾ ಎರಡನೇ ವಾರದಲ್ಲಿ ಈ ಚಿತ್ರ ತೆರೆಮೇಲೆ ಬರಲಿದೆ ಎಂದು ವಿಜಯ್ ಹಾಗೂ ಮುತ್ತಾರೀಫ್ ತೆಕ್ಕಟ್ಟೆ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಕಳೆದ 2 ವರ್ಷಗಳ ಹಿಂದೆ ಕುಂದಾಪುರ ಭಾಗದಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಡ್ರಾಮ ಸಿನಿಮಾ ಚಿತ್ರೀಕರಣವಾಗಿತ್ತು. ಆ ಬಳಿಕ ಇಲ್ಲಿ ಡೀಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದ ಚಿತ್ರೀಕರಣ ವೀಕ್ಷಿಸಲು ಸ್ಥಳೀಯರು ಬರುತ್ತಿರುವ ದೃಶ್ಯವೂ ಕಂಡುಬರುತ್ತಿದೆ.

 

ಕುಂದಾಪುರ ಸುಂದರ ತಾಣ. ಆದ್ದರಿಂದ ಒಂದು ಹಾಡನ್ನು ಬೆಂಗಳೂರು, ಮಂಡ್ಯದಲ್ಲಿಯೂ ಇನ್ನೊಂದು ಹಾಡನ್ನು ಕುಂದಾಪುರ ಆಸುಪಾಸಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕುಂದಾಪುರ ಕನ್ನಡ ಭಾಷೆ ನಿಜಕ್ಕೂ ಅದ್ಬುತವಾಗಿದ್ದು ಅದರ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಚಿತ್ರದಲ್ಲಿ ಈ ಭಾಷೆಯನ್ನು ಬಳಸಿಕೊಂಡಿದ್ದೇವೆ.

_ ವಿಜಯ ತಮ್ಮಣ್ಣ (ಡೀಲ್ ಚಿತ್ರದ ನಿರ್ದೇಶಕ)

ಕುಂದಾಪುರಕ್ಕೆ ಹಲವು ಬಾರೀ ಬಂದಿದ್ದೆ ಆದರೇ ಸಿನಿಮಾ ಚಿತ್ರೀಕರಣಕ್ಕಾಗಿ ಬಂದಿರಲಿಲ್ಲ. ಸ್ನೇಹಿತರಾದ ವಿಜಯ ನಿರ್ದೇಶನದ ಚಿತ್ರದಲ್ಲಿ ಅತಿಥಿ ಕಲಾವಿದನಾಗಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಈ ಅನುಭವ ತುಂಬಾ ಸಂತಸ ನೀಡಿದೆ. ಕುಂದಾಪುರ ಜನರು, ಇಲ್ಲಿನ ಬೀಚ್ ಹಾಗೂ ಪರಿಸರ ಸೂಪರ್.

_ ಆದಿ ಲೋಕೇಶ್ ( ನಟ)

ಕುಂದಾಪುರದಲ್ಲಿ ಬಿಸಿಲು ಜಾಸ್ಥಿಯಿದ್ದರೂ ಕೂಡ ಒಳ್ಳೆಯ ವಾತವರಣವಿದೆ. ಸಂಪೂರ್ಣ ಚಿತ್ರತಂಡ ಉತ್ತಮವಾಗಿ ಕೆಲಸಮಾಡುತ್ತಿದ್ದೇವೆ. ಸಿಟಿಯಲ್ಲಿ (ನಗರದಲ್ಲಿ) ಶೂಟಿಂಗ್ ಮಾಡುವದಕ್ಕಿಂತ ಗ್ರಾಮೀಣ ಪ್ರದೇಶ ಅದರಲ್ಲಿಯೂ ಕರಾವಳಿಯಲ್ಲಿ ಚಿತ್ರೀಕರಣದ ಅನುಭವ ಉತ್ತಮವಾಗಿದೆ. ಕುಂದಾಪುರದ ಮೀನು ಅಂದರೇ ತುಂಬಾ ಇಷ್ಟ.

_ ಜೀವಿತಾ ( ಚಿತ್ರದ ನಾಯಕಿ)

ಮೊದಲ ಬಾರಿ ಚಿತ್ರದಲ್ಲಿ ನಟಿಸುತ್ತಿದ್ದು ಅನುಭವ ಉತ್ತಮವಾಗಿದೆ. ಚಿತ್ರೀಕರಣ ಉತ್ತಮವಾಗಿ ಸಾಗುತ್ತಿದ್ದು ಈ ಚಿತ್ರದಲ್ಲಿ ಸೆಲೆಬ್ರೆಟಿಯೊಬ್ಬನ ಪಾತ್ರವನ್ನು ಮಾಡುತ್ತಿದ್ದೇನೆ.

_ ದೀಪಕ್ ರಾಜ್ (ಚಿತ್ರದ ನಾಯಕ)

Write A Comment