ಮಂಗಳೂರು, ನವೆಂಬರ್ 3: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಷ್ಕಮಿಗಳು ನಡೆಸಿದ ದಾಂಧಲೆಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ರಾಜಹಂಸ ಬಸ್ ನ ಕಿಟಕಿಗಾಜುಗಳು ಹಾನಿಗೀಡಾದ ಘಟನೆ ನಗರದ ಹೊರವಲಯದ ಅಡ್ಯಾರು ಕಟ್ಟೆಯ ಬಳಿ ಸೋಮವಾರ ನಸುಕಿನ ವೇಳೆ ಸುಮಾರು 5 ಗಂಟೆಗೆ ನಡೆದಿದೆ.
ಅಡ್ಯಾರು ಕಟ್ಟೆಯ ಬಳಿ ಇಂದು ಮುಂಜಾನೆ ಅಪರಿಚಿತ ದುರ್ಷ್ಕಮಿಗಳು ಕೆ ಎಸ್ ಆರ್ ಟಿ ಸಿ ಬಸ್ ಗೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ, ಮಾತ್ರವಲ್ಲದೇ ಅನತಿ ದೂರದಲ್ಲೇ ಚಕ್ರಗಳಿಗೆ ಬೆಂಕಿ ಹಚ್ಚಿ ರಸ್ತೆ ಮಧ್ಯೆ ಇಟ್ಟು ವಾಹನ ಸಂಚಾರಕ್ಕೆ ತಡೆಯುಂಟು ಮಾಡಿದ್ದಾರೆ. ಇದರಿಂದ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸೈ ಉಂಟಾಯಿತು. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಲದೇ ಟ್ರಾಫಿಕ್ ಸಮಸೈ ಬಗೆಹರಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.