ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
ಮುಂಬಯಿ: ಹೊರನಾಡ ಶ್ರೇಷ್ಠ ಸಮಾಜ ಸೇವಕರಾಗಿ 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ನ. 2ರಂದು ಸಂಜೆ ಮುಂಬಯಿಗಾಗಮಿಸಿದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ಜಯ ಸಿ. ಸುವರ್ಣ ಅವರನ್ನು ಸಂತಾಕ್ರೂಸ್ ವಿಮಾನ ನಿಲ್ಧಾಣದಲ್ಲಿ ತುಳು-ಕನ್ನಡಿಗರು ಆತ್ಮೀಯವಾಗಿ ಸ್ವಾಗತಿಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಗೌ. ಕಾರ್ಯದರ್ಶಿ ಡಾ. ಯು. ಧನಂಜಯಕುಮಾರ್, ಉಪಾಧ್ಯಕ್ಷರುಗಳಾದ ಸಿ. ಟಿ. ಸಾಲ್ಯಾನ್, ಚಂದ್ರಶೇಖರ ಪೂಜಾರಿ, ಭಾಸ್ಕರ ಸಾಲ್ಯಾನ್, ಜ್ಯೋತಿ ಸುವರ್ಣ ಹಾಗೂ ಇತರ ಪದಾಧಿಕಾರಿಗಳು, ಭಾರತ್ ಬ್ಯಾಂಕಿನ ಸಿಇಓ ಸಿ. ಆರ್. ಮೂಲ್ಕಿ, ಮಹಾ ಪ್ರಬಂಧಕರಾದ ಅನಿಲ್ ಕುಮಾರ್ ಅಮೀನ್, ಶೋಭಾ ದಯಾನಂದ್ ಹಾಗೂ ಬ್ಯಾಂಕಿನ ನಿರ್ದೇಶಕರು ಮತ್ತುಇತರ ಉನ್ನತ ಅಧಿಕಾರಿಗಳು, ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಉಪಸಮಿತಿಗಳ ಹಾಗೂ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರುಗಳು, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ರತ್ನಾಕರ ಮುಂಡ್ಕೂರು, ಜಯ ಎ. ಶೆಟ್ಟಿ, ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರಂಗಪ್ಪ ಸಿ. ಗೌಡ, ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸ್ವಾಗತಿಸಿ ಹೂಹಾರ ಹಾಕಿ ಅಭಿನಂದಿಸಿದರು.
ನಂತರ ಕೊಂಬು-ಕಹಳೆಯೊಂದಿಗೆ ಜಯ ಸುವರ್ಣರು ಬಿಲ್ಲವ ಭವನಕ್ಕೆ ಆಗಮಿಸಿದರು. ನಾರಾಯಣ ಗುರುಗಳ ಮೂರ್ತಿಗೆ ಜಯ ಸುವರ್ಣ ದಂಪತಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಆ ನಂತರ ಜರಗಿದ ಸಭಾಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ಅಧಿಕಾರಿಗಳು, ಬಿಲ್ಲವರ ಅಸೋಸಿಯೇಶನ್ ನ ಪದಾಧಿಕಾರಿಗಳಲ್ಲದೆ ನಗರದ ವಿವಿಧ ಸಂಘಟನೆಯ ಗಣ್ಯರು ಜಯ ಸುವರ್ಣರನ್ನು ಅಭಿನಂದಿಸಿದರು.