ಕರಾವಳಿ

ವಿದ್ಯಾರ್ಥಿ ದೌರ್ಜನ್ಯ ವಿಶೇಷ ಪೊಲೀಸ್ ದಳ ಸ್ಥಾಪನೆಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಆಗ್ರಹ 

Pinterest LinkedIn Tumblr

all_college_protetst_1

ಮಂಗಳೂರು,ನ.06: ತೀರ್ಥಹಳ್ಳಿಯ ಅಪ್ರಾಪ್ತ ಬಾಲಕಿ ( ವಿದ್ಯಾರ್ಥಿನಿ) ನಂದಿತಳ ನಿಗೂಡ ಸಾವಿನ ರಹಸ್ಯವನ್ನು ಭೇದಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿ ದೌರ್ಜನ್ಯ ವಿಶೇಷ ಪೊಲೀಸ್ ದಳ ಸ್ಥಾಪಿಸ ಬೇಕು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ವತಿಯಿಂದ ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

all_college_protetst_2

ರಾಜ್ಯದ ವಿವಿಧ ಕಡೆ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಶಂಕಾಸ್ಪದವಾಗಿ ಸಾವಿಗೀಡಾದ ನಂದಿತಾ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ನಿರಂತರವಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಗೆ ಸಾಧ್ಯವಾಗಲಿಲ್ಲ. ಇಂತಹ ಪ್ರಕರಣದ ಹಿಂದೆ ಸಮಾಜದ ಯಾವುದೇ ಶಕ್ತಿ ಇದ್ದರೂ ಸರ್ಕಾರ ಯಾವುದೇ ಮೃದು ಧೋರಣೆಯನ್ನು ತಾಳದೆ ಆರೋಪಿಗಳನ್ನು ಹಿಡಿಯುವಲ್ಲಿ ಕ್ರಮಕೈಗೊಳ್ಳಬೇಕು ಹಾಗೂ ವಿಧ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು  ಪ್ರತಿಭಟನಕಾರರು ಆಗ್ರಹಿಸಿದರು.

.

all_college_protetst_3

ಹಿಂದೆ ನಡೆದ ಅಕ್ಷತಾ, ರತ್ನಾ ಕೊಠಾರಿ ಈಗೇ ಒಂದರ ಮೇಲೊಂದುರಂತೆ ಸಾವು ಸಂಭವಿಸಿದಾಗಲೂ ಆರೋಪಿಗಳ ಬಂಧನ ನಡೆದಿಲ್ಲ. ಈ ಪ್ರಕರಣವನ್ನು ಸಿಒಡಿಗೆ ನೀಡಿದರೂ ಯಾವುದೇ ರೀತಿಯ ಪ್ರಯೋಜನ ಕಾಣುವುದಿಲ್ಲ. ಆದ್ದರಿಂದ ಪ್ರತೀ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ರಕ್ಷಣೆಗೆ ವಿಶೇಷ ದಳ ಸ್ಥಾಪಿಸಿ ರಕ್ಷಣೆ ನೀಡಬೇಕು ಎಂದು ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಸರ್ವ ಕಾಲೇಜು ಸಂಘದ ನಾಯಕ ದೀಕ್ಷಿತ್ ವಿ.ಶೆಟ್ಟಿ, ಪದಾಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.

Write A Comment