ಕರಾವಳಿ

ಗ್ಯಾಸ್ ಗೋಡೌನ್‌ಗೆ ನಿರಪೇಕ್ಷಣಾ ಪತ್ರ ನೀಡುವಂತೆ ಪ್ರತಿಭಟನೆ; ರಾಜಕೀಯ ಮಾಡದಂತೆ ಆಗ್ರಹ,..!

Pinterest LinkedIn Tumblr

Kota_Gas_agency Protest (2)

ಉಡುಪಿ: ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಕಾರ್ಕಡದಲ್ಲಿ  ನಿರ್ಮಾಣವಾಗುತ್ತಿರುವ ಗ್ಯಾಸ್ ಗೋಡೌನ್‌ಗೆ ನಿರಪೇಕ್ಷಣಾ ಪತ್ರ ನೀಡುವಂತೆ ಆಗ್ರಹಿಸಿ  ಗ್ಯಾಸ್ ಎಜೆನ್ಸಿಯ ಮಾಲಕಿ ಬೋಜಮ್ಮ, ಗ್ರಾಹಕರೊಂದಿಗೆ ಪಟ್ಟಣ ಪಂಚಾಯತ್ ಎದುರು ಧರಣಿ ನಡೆಸಿದರು.

ಗ್ಯಾಸ್ ಎಜೆನ್ಸಿ ಸುಮಾರು 12 ಸಾವಿರ ಗ್ಯಾಸ್ ಬಳಕೆದಾರರನ್ನು ಹೊಂದಿದ್ದು, ಇನ್ನು ಒಂದು ವಾರದಲ್ಲಿ  ಪ.ಪಂ ನಿರಪೇಕ್ಷಣಾ ಪತ್ರ ನೀಡದಿದ್ದಲ್ಲಿ  ಗ್ಯಾಸ್ ವಿತರಣೆ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದ್ದು, ಶೀಘ್ರ ನಿರಪೇಕ್ಷಣಾ ಪತ್ರ ನೀಡುವಂತೆ ಆಗ್ರಹಿಸಿದರು.

Kota_Gas_agency Protest Kota_Gas_agency Protest (1)

ನಿರಪೇಕ್ಷಣಾ ಪತ್ರ ನೀಡಲು ಅಸಾಧ್ಯವಾದಲ್ಲಿ, ಅನುಮತಿ ನಿರಾಕರಿಸಬೇಕು. ಅದನ್ನು ಬಿಟ್ಟು  ಎಕಪಕ್ಷೀಯ ತಿರ್ಮಾಣಗಳನ್ನು  ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಇಂದು ಸಾಂಕೇತಿಕವಾಗಿ ಒಂದು ದಿನದ ಧರಣಿ ನಡೆಸಲಿದ್ದು, ಒಂದು ವಾರದ ಸಮಯವಕಾಶ ನೀಡಲಾಗುವುದು. ಅನಂತರವು ಅನುಮತಿ ನೀಡದಿದ್ದಲ್ಲಿ  ಸ್ಥಳೀಯ ಸಂಘ-ಸಂಸ್ಥೆ, ಜನಪ್ರತಿನಿದಿಗಳ ಸಹಕಾರ ಪಡೆದು, ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿ.ಜೆ.ಪಿಯಿಂದ ಬೆಂಬಲ: ಗ್ಯಾಸ್ ಗೋಡೌನ್‌ಗೆ ನಿರಪೇಕ್ಷಣಾ ಪತ್ರ ನಿರಾಕರಿಸಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಸಾರ್ವಜನಿಕರ ಪರವಾಗಿ ಬಿ.ಜೆ.ಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ ಎಂದು ಕೋಟ ಬಿ.ಜೆ.ಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಠ್ಠಲ್ ಪೂಜಾರಿ ತಿಳಿಸಿದರು.

ಪ.ಪಂ ಸದಸ್ಯ ಸಂಜೀವ ದೇವಾಡಿಗ, ರಾಘವೇಂದ್ರ ಗಾಣಿಗ, ಬಿ.ಜೆ.ಪಿ ಮುಖಂಡ ಕೆ.ಪಿ ಶೇಖರ್, ಮಂಜುನಾಥ ನಾರಿ, ಕೃಷ್ಣ ಪೂಜಾರಿ ಕಾರ್ಕಡ, ಚಂದ್ರ ಮೋಹನ್ ಸಾಸ್ತಾನ, ಸಂದೀಪ್ ಕೋಡಿ, ಸುರೇಂದ್ರ ಗಾಣಿಗ ಕಾರ್ಕಡ, ದೇವರಾಜ್ ಗಾಣಿಗ ಸಾಲಿಗ್ರಾಮ ಮುಂತಾದವರು ಉಪಸ್ಥಿತರಿದ್ದರು.

ಗ್ಯಾಸ್ ಗೋಡೌನ್ ವಿಚಾರದಲ್ಲಿ  ರಾಜಕೀಯ ಮೇಲಾಟ
ಗ್ಯಾಸ್ ಗೋಡೌನ್‌ಗೆ ನಿರಪೇಕ್ಷಣಾ ಪತ್ರ ನೀಡುವ ವಿಚಾರ ಹಲವು ದಿನಗಳಿಂದ ರಾಜಕೀಯ ಮೇಲಾಟಗಳಿಗೆ  ಕಾರಣವಾಗಿದೆ. ಪ.ಪಂನಲ್ಲಿ  ಬಿ.ಜೆ.ಪಿ ಚಿಹ್ನೆಯಿಂದ ಗೆದ್ದ  ೮ಮಂದಿ ಸದಸ್ಯರಿದ್ದು, ಆಡಳಿತ ಪಕ್ಷ ಕೂಡ ಬಿ.ಜೆ.ಪಿ ಯೇ ಆಗಿದೆ. ಆಡಳಿತ ಪಕ್ಷದ ವತಿಯಿಂದ ೭ ಮಂದಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಗೋಡೌನ್‌ಗೆ ಅನುಮತಿ ನೀಡಬಾರದು ಎಂದು ಈ ಹಿಂದೆ ಲಿಖಿತವಾಗಿ ಕೋರಿದ್ದರು. ಆದರೆ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ  ಪ.ಪಂ ಬಿ.ಜೆ.ಪಿ ಸದಸ್ಯರುಗಳು ಹಾಗೂ ಸ್ಥಳೀಯ ಮುಖಂಡರುಗಳು  ಭಾಗವಹಿಸಿ  ಗ್ಯಾಸ್ ಗೋಡೌನ್ ಪರ ಬೆಂಬಲ ಸೂಚಿಸಿದ್ದು, ಇದು ಆಡಳಿತ ಪಕ್ಷದ ಪರ ಆಡಳಿತ ಪಕ್ಷದ ಮುಖಂಡರ ಧರಣಿಯೆ?  ಅಥವಾ ಪ.ಪಂ ಸದಸ್ಯರು ಹಾಗೂ ಸ್ಥಳೀಯ ಮುಖಂಡರುಗಳು ಸ್ವಯಂ ಪ್ರತಿಷ್ಠೆಗಾಗಿ ಗ್ಯಾಸ್‌ಗೋಡೌನ್ ವಿಚಾರವನ್ನು  ರಾಜಕೀಯವಾಗಿಸಿ ಸಾರ್ವಜನಿಕರು ದಾರಿ ತಪ್ಪಿಸುತ್ತಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Write A Comment