ಕುಂದಾಪುರ: ತೀರ್ಥಹಳ್ಳಿ ಶಾಲಾ ವಿದ್ಯಾರ್ಥಿನಿ ನಂದಿತಾ ಅವರಿಗೆ ಕೋಟೇಶ್ವರದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕೋಟೇಶ್ವರ ಹಿಂದೂ ವಿದ್ಯಾರ್ಥಿವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣತೆ ದೀಪ ಬೆಳಗಿಸಿ ನಂದಿತಾಗೆ ಶ್ರದ್ಧಾಂಜಲಿ ಅರ್ಪಿಸಿ ಶಾಂತಿ ಕೋರಲಾಯಿತು.
ಕೋಟೇಶ್ವರ ಹಿಂದೂ ವಿದ್ಯಾರ್ಥಿ ವೇದಿಕೆ ಸಂಚಾಲಕ ನಯನ್ ಪೂಜಾರಿ, ಅಭಿಷೇಕ್ ಅಂಕದಕಟ್ಟೆ, ವಿವೇಕ್ಕುಮಾರ್, ಹಿಂದೂ ಜಾಗರಣ ವೇದಿಕೆ ಮುಖಂಡರು ಇದ್ದರು.