Karavali

ದೇವರು ಕ್ಷಮಿಸುತ್ತಾರೆ, ಪ್ರಕೃತಿ ಕ್ಷಮಿಸುವುದಿಲ್ಲ; ಕೇಮಾರು ಶ್ರೀ ನೇತ್ರತ್ವದ ‘ಕೊಲ್ಲೂರು ಸೌಪರ್ಣಿಕ ಉಳಿಸಿ’ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ

Pinterest LinkedIn Tumblr

KolLuru_souparnika ulisi_ protest (16)

ಕುಂದಾಪುರ: ಕೊಲ್ಲೂರಿನ ಪುಣ್ಯ ನದಿ ಸ್ವಚ್ಚತೆಗೆ ಆಗ್ರಹಿಸಿ  ’ಸೌಪರ್ಣಿಕ ಉಳಿಸಿ’ ಹೋರಾಟದ ಅಂಗವಾಗಿ ಭಾನುವಾರ ಬೆಳಿಗ್ಗೆ ಕೇಮಾರು ಈಶ ವಿಠ್ಠಲ್‌ದಾಸ ಸ್ವಾಮೀಜಿಯವರು ಸೌಪರ್ಣಿಕ ನದಿಗೆ ಭಾಗೀನ ಅರ್ಪಿಸಿ, ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತೆರಳಿ, ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್ ಮಾರುತಿಯವರಿಗೆ ಮನವಿ ಅರ್ಪಿಸಿದ ಬಳಿಕ, ದೇವಾಲದ ಸ್ವರ್ಣಮುಖಿ ಮಂಟಪದಲ್ಲಿ ನೂರಾರು ಬೆಂಬಲಿಗರೊಂದಿಗೆ ಸಂಜೆಯವರೆಗೂ ಉಪವಾಸ ಸತ್ಯಾಗ್ರಾಹ ನಡೆಸಿದರು.

KolLuru_souparnika ulisi_ protest (1) KolLuru_souparnika ulisi_ protest (6) KolLuru_souparnika ulisi_ protest (5) KolLuru_souparnika ulisi_ protest (3) KolLuru_souparnika ulisi_ protest (4) KolLuru_souparnika ulisi_ protest (8) KolLuru_souparnika ulisi_ protest (2) KolLuru_souparnika ulisi_ protest (13) KolLuru_souparnika ulisi_ protest (14) KolLuru_souparnika ulisi_ protest (16) KolLuru_souparnika ulisi_ protest (15) KolLuru_souparnika ulisi_ protest (12) KolLuru_souparnika ulisi_ protest (10) KolLuru_souparnika ulisi_ protest (11) KolLuru_souparnika ulisi_ protest (9) KolLuru_souparnika ulisi_ protest (17) KolLuru_souparnika ulisi_ protest (20) KolLuru_souparnika ulisi_ protest (18) KolLuru_souparnika ulisi_ protest (19) KolLuru_souparnika ulisi_ protest (21) KolLuru_souparnika ulisi_ protest (22) KolLuru_souparnika ulisi_ protest (23) KolLuru_souparnika ulisi_ protest (25) KolLuru_souparnika ulisi_ protest (26) KolLuru_souparnika ulisi_ protest (24)

ಭಾಗೀನ ಸಮರ್ಪಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಮಾರು ಶ್ರೀಗಳು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಲ್ಲೂರಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಪುಣ್ಯ ಕ್ಷೇತ್ರಗಳಲ್ಲಿ ದೇವರಿಗೆ ಇರುವಷ್ಟೆ ಪಾಮುಖ್ಯತೆ ತೀರ್ಥ ಘಟ್ಟಗಳಿಗೂ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪುಣ್ಯ ನದಿಯ ಪಾವಿತ್ರ್ಯತೆ ದಿನೆ ದಿನೆ ಮಲಿನವಾಗುತ್ತಿದೆ. ಭಕ್ತರು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ಪ್ರೋಕ್ಷಣೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಆದರೆ ಕೊಲ್ಲೂರಿನಲ್ಲಿ ವ್ಯಾಪಾರೀಕರಣದ ಉದ್ದೇಶಗಳು ಹೆಚ್ಚಾಗುತ್ತಿರುವುದೆ, ಇದಕ್ಕೆ ಕಡಿವಾಣ ಬೀಳಬೇಕು. ಸ್ಥಳೀಯಾಡಳಿತವೂ ಇಲ್ಲಿನ ಅವ್ಯವಸ್ಥೆಗಳನ್ನು ಸರಿ ಪಡಿಸುವಲ್ಲಿ ಯಾವುದೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಪ್ರಮಖ ಕೆ.ಸಾಬು ಅವರು ಇಲ್ಲಿನ ಅವ್ಯವಸ್ಥೆಗಳನ್ನು ಸರಿ ಪಡಿಸಿ ಎಂದು ಎಷ್ಟೆ ಹೋರಾಟ ನಡೆಸಿದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ವಹಿಸುತ್ತಿಲ್ಲ. ಧರ್ಮ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಬಸ್ ಸ್ಟಾಂಡ್‌ನಿಂದ ಪ್ರಾರಂಭವಾಗುವ ಸುಲಿಗೆ ದೇವರ ದರ್ಶನ ಮಾಡುವವರೆಗೂ ಮುಂದುರೆಯುತ್ತದೆ. ಇಲ್ಲಿನ ವ್ಯವಸ್ಥೆ ಸರಿಯಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.

ಸ್ವಾಮೀಜಿ ಹಾಗೂ ಭಕ್ತರು ಗರಂ: ಸೌಪರ್ಣಿಕ ಸ್ನಾನ ಘಟ್ಟದಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರಿಗೆ ಕೊಲ್ಲೂರಿನ ಆನೆ ಬಾಗಿಲು ಬಳಿಯಲ್ಲಿ ಇರುವ ತಾತ್ಕಾಲಿಕ ತಡೆ ಬೇಲಿಗೆ ಬೀಗ ಹಾಕಿರುವುದು ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಆಕ್ರೋಶ ವ್ಯಕ್ತ ಪಡಿಸಿದ ಕೇಮಾರು ಸ್ವಾಮೀಜಿಗಳು ಬ್ರಾಹ್ಮಣ ಸ್ವಾಮೀಜಿಗಳು ಬಂದಿದ್ದರೆ, ದೇವಸ್ಥಾನದವರು ಈ ರೀತಿ ಬೀಗ ಹಾಕಿಯೇ ಸ್ವಾಗತಿಸುತ್ತಿದ್ದರಾ ಎಂದು ಪ್ರಶ್ನಿಸಿದರು. ಅಲ್ಲದೇ ಯಾವುದೇ ವಿ.ಐ.ಪಿ. ಗಳು ಬಂದರೇ ಅವರಿಗೆ ಸ್ವಾಗತಕೋರುವ ದೇವಸ್ಥಾನದವರು ಹಿಂದೂ ಸ್ವಾಮೀಜಿಯೋರ್ವರು ಬಂದರೇ ತಮ್ಮ ಪಾಡಿಗೆ ತಾವಿದ್ದಾರೆಂದು ಆರೋಪಿಸಿ ಸ್ವಾಮೀಜಿ ಅನುಯಾಯಿಗಳು ಗರಂ ಆದರು. ವಸ್ತುಸ್ಥಿತಿ ಗಮನಿಸಿದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಕೂಡಲೇ ತಮ್ಮ ಕಛೇರಿಯಿಂದ ಆಗಮಿಸಿ ಬಂದು ಸ್ವಾಮೀಜಿಯವರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು. ಬೀಗ ಹಾಕಿದ ಬಗ್ಗೆ  ಸ್ವಾಮೀಜಿಯವರಿಗೆ ಸಮಜಾಯಿಕೆ ನೀಡಿದ ಅಡ್ಯಂತಾಯರು ಮೆರವಣಿಗೆ ಬರುವಾಗ ರಥ ಬೀದಿಯಲ್ಲಿ ಜನಜಂಗುಳಿ ಇರಬಾರದು ಎನ್ನುವ ಕಾರಣಕ್ಕಾಗಿ ವಾಹನ ನಿಯಂತ್ರಣಗಾಗಿ ಬೀಗ ಹಾಕಲಾಗಿತ್ತು ಎಂದು ಹೇಳಿದರು.

KolLuru_souparnika ulisi_ protest (30) KolLuru_souparnika ulisi_ protest (31) KolLuru_souparnika ulisi_ protest (32) KolLuru_souparnika ulisi_ protest (34) KolLuru_souparnika ulisi_ protest (33) KolLuru_souparnika ulisi_ protest (35) KolLuru_souparnika ulisi_ protest (37) KolLuru_souparnika ulisi_ protest (36) KolLuru_souparnika ulisi_ protest (38) KolLuru_souparnika ulisi_ protest (39) KolLuru_souparnika ulisi_ protest (40) KolLuru_souparnika ulisi_ protest (41) KolLuru_souparnika ulisi_ protest (43) KolLuru_souparnika ulisi_ protest KolLuru_souparnika ulisi_ protest (45) KolLuru_souparnika ulisi_ protest (44) KolLuru_souparnika ulisi_ protest (7) KolLuru_souparnika ulisi_ protest (42)

ಚರ್ಚೆಯ ಹೈಲೈಟ್ಸ್:  ದೇಗುಲದ ಮಲೀನ ನೀರು ವಿಲೆವಾರಿ, ತ್ಯಾಜ್ಯ ವಿಲೆವಾರಿ, ತಪ್ಪಿತಸ್ಥ ನೌಕರರ ಮರು ನೇಮಕಾತಿ, ಪುಣ್ಯ ನದಿಯ ಸಂರಕ್ಷಣೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಿತು. ಖಾಸಗಿ ವಸತಿ ಗೃಹಗಳಿಂದ ಹರಿದು ಬರುತ್ತಿರುವ ಮಲೀನ ನೀರುಗಳ ತಡೆಗೆ ದೇವಸ್ಥಾನ ಏನು ಕ್ರಮ ಕೈಗೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಡ್ಯಂತಾಯರು ಪುಣ್ಯ ನದಿಯ ಪಾವಿತ್ರ್ಯತೆಗೆ ತೊಂದರೆಯಾಗುತ್ತಿರುವ ಕುರಿತು ಖಾಸಗಿ ವಸತಿ ಗ್ರಹದವರಿಗೆ ಮನವರಿಕೆ ಮಾಡುವ ಪ್ರಯತ್ನಗಳನ್ನು ಮಾಡಲಾಗಿದೆ. ಆದರೂ ಇದನ್ನು ಪೂರ್ತಿಯಾಗಿ ನಿಯಂತ್ರಣ ಮಾಢಲು ಸಾಧ್ಯವಾಗಿಲಿಲ್ಲ. ಈ ಕುರಿತು ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತಗಳು ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಉತ್ತರ ನೀಡಿದರು.

ಶ್ರೀ ದೇವಿಯ ದರ್ಶನ ಮಾಡಿದ ಸ್ವಾಮೀಜಿಗಳಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ದೇವಸ್ಥಾನದ ಒಳ ಪ್ರಾಂಗಾಣದ ಒಳಗೆ  ನಿರಶನ ಕುಳಿತುಕೊಳ್ಳುವಂತೆ ವಿನಂತಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೋರಾಟದ ಪ್ರಮುಖರು ದೇವಸ್ಥಾನದ ಆವರಣದ ಒಳಗೆ ನಿರಶನ ಕೈಗೊಳ್ಳುವುದರಿಂದ ದೇಗುಲದ ಭಕ್ತರಿಗೆ ತೊಂದರೆಯಾಗುತ್ತದೆ, ಆದುದರಿಂದ ಸ್ವರ್ಣ ಮುಖಿ ಮಂಟಪದಲ್ಲಿ ಕುಳಿತುಕೊಳ್ಳುವಂತೆ ಒತ್ತಾಯ ಮಾಡಿದರು. ಕೊನೆಗೆ ಸ್ವರ್ಣ ಮುಖಿ ಮಂಟಪದಲ್ಲಿ ನಿರಶನವನ್ನು ಪ್ರಾರಂಭಿಸಲಾಯಿತು.

ಜೈ ಭಾರ್ಗವ ಸಂಘಟನೆಯ ರಾಜ್ಯ ಸಂಚಾಲಕ ಅಜಿತ್ ಶೆಟ್ಟಿ ಕಿರಾಡಿ, ಸಂಘಟನೆಯ ಪ್ರಮುಖರಾದ ವಸಂತ ಶೆಟ್ಟಿ ಗಿಳಿಯಾರು, ರತ್ನಾಕರ ಬಾರಿಕೆರೆ, ರಜತ ಹೆಬ್ಬಾರ್ ತೆಕ್ಕಟ್ಟೆ, ಅಶೋಕ ಶೆಟ್ಟಿ ಬನ್ನಾಡಿ, ಕೊಲ್ಲೂರಿನ ಪರಶುರಾಮ ಸೇನೆಯ ಅಧ್ಯಕ್ಷ ಹರೀಶ್ ತೋಳಾರ್, ವಿನೋದ್ ಹೆಬ್ಬಾರ್, ಕೃಷ್ಣ, ವಿಶ್ವ ಹೆಬ್ಬಾರ್, ಅನಿಲ್, ನಾಗೇಶ್ ದಳಿ, ಸಂದೀಪ್ ಪ್ರತಿಭಟನೆಯ ನೇತ್ರತ್ವವನ್ನು ವಹಿಸಿದ್ದರು.

ಸಂಜೆ ವೇಳೆಗೆ ಸೌಪರ್ಣಿಕಾ ನದಿಗೆ ಅರ್ಗ್ಯ ಸಮರ್ಪಿಸುವ ಮೂಲಕ ಸಾಂಕೇತಿಕ ಉಪವಾಸ ಸತ್ಯಾಗ್ರಹ ಅಂತ್ಯವಾಯಿತು.

Write A Comment