ತೀರ್ಥಹಳ್ಳಿ, ನ.9: ಉಡುಪಿ ಪದ್ಮಪ್ರಿಯಾ ಪ್ರಕರಣ, ಪ್ರೇಮ ಕುಮಾರಿ ಪ್ರಕರಣ, ನರ್ಸ್ ಜಯಲಕ್ಷ್ಮಿ ಪ್ರಕರಣ, ಧರ್ಮಸ್ಥಳ ಸೌಜನ್ಯಾ ಪ್ರಕರಣ, ಹಾಲಪ್ಪ ಪ್ರಕರಣ, ಜೀವರಾಜ್ ಪ್ರಕರಣ, ರಾಮದಾಸ್ ಪ್ರಕರಣ ಹೀಗೆ ಹತ್ತಾರು ಲೈಂಗಿಕ ಹಾಗೂ ಕೊಲೆ ಪ್ರಕರಣದ ಆರೋಪ ಹೊಂದಿರುವವರಿಗೆ ಸ್ಥಾನಮಾನ ಕೊಟ್ಟ ಬಿಜೆಪಿ ನಾಯಕರಿಗೆ ತೀರ್ಥಹಳ್ಳಿ ಹೈಸ್ಕೂಲ್ ವಿದ್ಯಾರ್ಥಿನಿ ನಂದಿತಾ ನಿಗೂಢ ಸಾವಿನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದ್ದಾರೆ.
ರವಿವಾರ ಇಲ್ಲಿನ ಪತ್ರಿಕಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಭಾಗಿಯಾಗಿರುವ ಲೈಂಗಿಕ ಹಾಗೂ ಕೊಲೆ ಪ್ರಕರಣಗಳನ್ನು ಕನಿಷ್ಠ ಖಂಡಿಸಲೂ ಹೋಗದ ಬಿಜೆಪಿ ಮತ್ತು ಸಂಘಪರಿವಾರ, ಬಾಲಕಿ ನಂದಿತಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಅನೈತಿಕತೆಯ ಹಾಗೂ ದುಷ್ಟ ರಾಜಕಾರಣದ ಪರಮಾವಧಿ ಎಂದರು.
ಬಿಜೆಪಿ ಮತ್ತು ಸಂಘಪರಿವಾರ ಬಾಲಕಿ ನಂದಿತಾ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದ ತೀರ್ಥಹಳ್ಳಿಯ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆರೆಸ್ಸೆಸ್ಸ್ ಮತ್ತು ಬಿಜೆಪಿ ಒಟ್ಟಾಗಿ ಕೋಮು ದಳ್ಳುರಿಯನ್ನು ಉಂಟು ಮಾಡಲು ಕಳೆದೊಂದು ವಾರದಿಂದ ನಿರಂತರ ಪ್ರಯತ್ನಿಸುತ್ತಿವೆ. ಯಾವುದೇ ರಾಜಕೀಯ ಪಕ್ಷವಾಗಲೀ ಸಾವಿನ ಮನೆಯಲ್ಲಿ ಈ ರೀತಿಯ ರಾಜಕೀಯ ನಡೆಸುವುದು ಅಮಾನವೀಯ ಎಂದು ಪ್ರಸನ್ನ ಕುಮಾರ್ ಹೇಳಿದರು. ಮೈತ್ರಾದೇವಿ ಸಂಶಯಾಸ್ಪದ ಸಾವು ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಹಾಗೂ ಬಿ.ಎಸ್.ಯಡಿಯೂರಪ್ಪರ ನೇರ ಕೈವಾಡವಿದೆ ಎಂದು ಆರೋಪಿಸಿದ ಅವರು, ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪರಿಗೆ ನಿಕಟ ಸಂಪರ್ಕವಿದೆ. ಅವರಿಬ್ಬರೂ ಕೇರಳದ ದೇವಸ್ಥಾನವೊಂದರಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ. ಈ ಬಗ್ಗೆ ಒಂದು ಕಾಲದಲ್ಲಿ ಯಡಿಯೂರಪ್ಪರ ಆಪ್ತ ಕಾರ್ಯದರ್ಶಿಯಾಗಿದ್ದ ಸಿದ್ದಲಿಂಗ ಸ್ವಾಮಿ ನನಗೆ ಸಿ.ಡಿ. ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸೂಕ್ತ ಸಾಕ್ಷಾಧಾರಗಳಿಲ್ಲದೆ ನೀವು ಮಾಡುವ ಈ ರೀತಿಯ ಆರೋಪವನ್ನು ಮುದ್ರಿಸುವ ಮತ್ತು ಬಿತ್ತರಿಸುವ ಪತ್ರಿಕೆಗಳು ಮತ್ತು ಮಾಧ್ಯಮಗಳು ಸೇರಿ ಎಲ್ಲರೂ ಮಾನಹಾನಿ ಪ್ರಕರಣದ ವ್ಯಾಪ್ತಿಗೆ ಒಳಗಾಗಬೇಕಾಗುತ್ತದೆಯಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೆಜೆಪಿ ಅಧ್ಯಕ್ಷ, ಈ ಬಗ್ಗೆ ತನ್ನ ಬಳಿ ಬಲವಾದ ಸಾಕ್ಷಾಧಾರಗಳಿವೆ. ಸಿಡಿಯೂ ಇದೆ. ಇದನ್ನು ಡಿಸೆಂಬರ್ 10ರಂದು ಪತ್ರಕರ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರಲ್ಲದೆ, ತನ್ನ ಆರೋಪವನ್ನು ಪುನರುಚ್ಚರಿಸಿದರು. 2012ರಲ್ಲಿ 621, 2013ರಲ್ಲಿ 1,038 ಹಾಗೂ 2014ರಲ್ಲಿ ಈ ಹೊತ್ತಿಗಾಗಲೆ 1,040 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಅದರಲ್ಲೂ ಹೆಚ್ಚಾಗಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇನು ಕತ್ತೆ ಕಾಯುತ್ತಿದೆಯೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಮಲೆನಾಡು ಭಾಗದ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.
http://vbnewsonline.com
1 Comment
Evanige madoke bete kelsa ella adake eneno heltane hagadre c d bidugade madoke time yak tagobeku ninnene release madbekalwa.yaradre deel madoke barli anta kaytirbeku nonsense