ದಿನಾಂಕ 08 ಮತ್ತು 09 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಸಿದ್ಧಿ ಫೌಂಡೇಶನ್ ಸಹಯೋಗದಲ್ಲಿ ಕಥಾ ರಚನಾ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಸಿದ್ಧಿ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅನಿಲ್ ಕುಮಾರ್, ಶ್ರೀ ಬದರಿನಾರಾಯಣ್ ಹೊಸಪೇಟೆ ಮತ್ತು ಶ್ರೀ ಬದರೀಶ್ ಹೊಸಪೇಟೆ ನಡೆಸಿಕೊಟ್ಟರು.ಈ ಕಾರ್ಯಕ್ರಮವನ್ನು ‘ಕಥಾ ಸಮಯ’ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿತ್ತು.
ಮೂಲತಃ ಸಾಹಿತಿಗಳಲ್ಲದಿದ್ದರೂ ಸಾಹಿತ್ಯವನ್ನು ಕಟ್ಟುವ ಕೆಲಸ ಸಿದ್ಧಿ ಫೌಂಡೇಶನ್ ಮಾಡುತ್ತಿದೆ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆಯವರು ಶ್ಲಾಘಿಸಿದರು. ಸುಮಾರು 60 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.