ಕ್ರೀಡೆ

ಮಹೇಂದ್ರ ಸಿಂಗ್ ಧೋನಿ ಹೆಬ್ಬೆರಳಿಗೆ ಗಾಯ

Pinterest LinkedIn Tumblr

20dhoni

ಮುಂಬೈ, ನ.12: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಲಗೈನ ಹೆಬ್ಬೆರಳಿಗೆ ಆಗಿರುವ ಗಾಯದಿಂದಾಗಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವರು ತಂಡದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ.
ಧೋನಿ ಕೈ ಬೆರಳಿಗೆ ಆಗಿರುವ ಗಾಯಕ್ಕೆ ಚಿಕಿತ್ಸೆ ಪಡೆಯು ತ್ತಿದ್ದಾರೆ. ಮುಂಬರುವ ವಿಶ್ವಕಪ್ ವೇಳೆಗೆ ಧೋನಿಗೆ ಗಾಯದ ಸಮಸ್ಯೆ ಬಾಧಿಸದಂತೆ ಎಚ್ಚರವಹಿಸಲು ಇದೀಗ ವಿಶ್ರಾಂತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಧೋನಿಗೆ ವಿಶ್ರಾಂತಿ ನೀಡಿದ ಹಿನ್ನೆಲೆಯಲ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬ ವರದಿ ಮಾಧ್ಯ ಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಧೋನಿ ತಂಡದಿಂದ ಹೊರಗುಳಿಯಲು ಅವರ ಕೈಗೆ ಆಗಿರುವ ಗಾಯ ಕಾರಣ ವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಧೋನಿ ಕೈಗೆ ವೆಸ್ಟ್‌ಇಂಡೀಸ್ ತಂಡದ ಪ್ರವಾಸದ ವೇಳೆ ಗಾಯವಾಗಿತ್ತು. ಹೀಗಿದ್ದರೂ ಅವರು ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು. ಬಳಿಕ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಗೆ ಧೋನಿಗೆ ವಿಶ್ರಾಂತಿ ನೀಡಲಾಗಿತ್ತು. ಹಂಗಾಮಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಲಂಕಾ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಭರ್ಜರಿ ಗೆಲುವಿನೊಂದಿಗೆ ಸರಣಿ ಗೆಲುವನ್ನು ದೃಢಪಡಿಸಿದಾಗ ಧೋನಿಗೆ ವಿಶ್ರಾಂತಿಯನ್ನು ವಿಸ್ತರಿಸಲಾಗಿತ್ತು. ಆದರೆ ಅತ್ಯಂತ ಮಹತ್ವದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ಗೆ ಧೋನಿಗೆ ವಿಶ್ರಾಂತಿ ನೀಡಿರು ವುದು ನಾನಾ ಉಹಾಪೋಹಗಳಿಗೆ ಕಾರಣವಾಗಿತ್ತು.

http://vbnewsonline.com

Write A Comment