ಕನ್ನಡ ವಾರ್ತೆಗಳು

ಉಡುಪಿ: ವರದಕ್ಷಿಣೆ-ಕಿರುಕುಳ ಆರೋಪ : ಆರೋಪಿಗಳು ದೊಷಮುಕ್ತ

Pinterest LinkedIn Tumblr

court

ಕಾರ್ಕಳ/ಕುಂದಾಪುರ : ಪತಿ ವಿಜಯ ಕೋಟ್ಯಾನ್‌, ಆತನ ತಾಯಿ ಕಂಪಾಬಾಯಿ, ಸಹೋದರರರಾದ ನವೀನ್‌ ಕೋಟ್ಯಾನ್‌ ಹಾಗೂ ನಿತ್ಯಾನಂದ ಕೋಟ್ಯಾನ್‌ ಅವರ ವಿರುದ್ಧ ವೈವಾಹಿಕ ಹಿಂಸೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪಗಳನ್ನು ಹೊರಿಸಿದ್ದ ಕಲಾ ಅವರ ಅರ್ಜಿಯನ್ನು ಕಾರ್ಕಳದ ಜೆಎಂಎಫ್‌ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ಉಡುಪಿ ತಾಲೂಕಿನ ಶಿರ್ವಾದ ನಿವಾಸಿಯಾದ ವಿಜಯ ಕೋಟ್ಯಾನ್‌ ಈತನು ಕಾರ್ಕಳ ನಿಟ್ಟೆಯ ಕಜೆ ನಿವಾಸಿ ಕಲಾ ಎಂಬಾಕೆಯನ್ನು 2001ರ ಫೆಬ್ರವರಿಯಲ್ಲಿ 26ರಂದು ಕಾರ್ಕಳದ ಸಾಲ್ಮರದ ಮಲ್ಟಿಪರ್ಪಸ್‌ ಹಾಲ್‌ನಲ್ಲಿ ವಿವಾಹವಾಗಿತ್ತು. ಅ ಸಂದರ್ಭದಲ್ಲಿ ಎರಡು ಲಕ್ಷ ರೂ. ವರದಕ್ಷಿಣೆಯನ್ನು ಪತಿ ವಿಜಯ ಕೋಟ್ಯಾನ್‌ ಬೇಡಿಕೆ ಸಲ್ಲಿಸಿ ಪಡೆದಿದ್ದು ಅನಂತರ ಹೆಚ್ಚಿನ ವರದಕ್ಷಿಣೆಗಾಗಿ ವಿವಿಧ ರೀತಿಯಿಂದ ಹಿಂಸಿಸಿದ್ದರು ಎಂದು ಆರೋಪಿಸಲಾಗಿತ್ತು.

ಆರೋಪಿತರು ನಾಸಿಕ್‌ನಲ್ಲಿ ವ್ಯಾಪಾರ ಮಾಡುತ್ತಿದ್ದು ಅಲ್ಲಿ ಕೂಡ ಪತ್ನಿ ಕಲಾರನ್ನು ಹಿಂಸಿಸಿ ಅನಂತರ ತವರು ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು.

ಕಾರ್ಕಳದ ಅಂದಿನ ವೃತ್ತ ನಿರೀಕ್ಷಕರಾದ ಟಿ.ಅರ್‌ ಪುಟ್ಟಸ್ವಾಮಿಗೌಡ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಮಧ್ಯೆ ಪತಿಯ ಸಹೋದರಿಯನ್ನು ಕೂಡ ಆರೋಪಿಗಳಾನ್ನಾಗಿ ಸೇರಿಸಬೇಕೆಂದು ಕಲಾ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು.ಆರೋಪಿಗಳ ವಿರುದ್ಧ ಮಾಡಿದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗಿಲ್ಲವೆಂದು ಕಾರ್ಕಳದ ನ್ಯಾಯಾಧೀಶ ಮಹಾಜನ ರಮೇಶ ಅಪ್ಪಾಸಾಬ ಅವರು ನಾಲ್ವರೂ ಆರೋಪಿಗಳನ್ನು ದೊಷಮುಕ್ತಿಗೊಳಿಸಿದ್ದಾರೆ.

ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುರ್ಡೆಶ್ವರ್‌ ವಾದಿಸಿದ್ದರು.

Write A Comment