ರಾಷ್ಟ್ರೀಯ

ಉತ್ತರಪ್ರದೇಶ: ಘಾಗ್ರಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ಸಾವು

Pinterest LinkedIn Tumblr

Boat-capsized

ಬಸ್ತಿ(ಉತ್ತರಪ್ರದೇಶ): ಬಸ್ತಿ ಜಿಲ್ಲೆಯ ಮಜಾಕಲ್ ಗ್ರಾಮದ ಕಲವಾರಿಯ ಘಾಗ್ರಾ ನದಿಯಲ್ಲಿ ದೋಣಿ ಮುಳುಗಿ ಆರು ಮಂದಿ ಭಾನುವಾರ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಘಾಗ್ರಾ ನದಿಯಲ್ಲಿ 40 ಮಂದಿ ಪ್ರಯಾಣಿಕರನ್ನು ಹೊತ್ತ ದೋಣಿಯೊಂದು ಮುಗುಚಿಕೊಂಡಿದೆ. ಪರಿಣಾಮ 6 ಮಂದಿ ಅಸುನೀಗಿದ್ದಾರೆ. ಇನ್ನುಳಿದಂತೆ 34 ಮಂದಿ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ನದಿಯಲ್ಲಿ ಮುಳುಗಿರುವವರ ಪತ್ತೆಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment