ಮಂಗಳೂರು ನ .17: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನಿಯಮಿತ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ 61 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಅಂಗವಾಗಿ ನಂದಿನಿ ಉತ್ಪನ್ನಗಳ ಬಿಡುಗಡೆ ಸಮಾರಂಭನ್ನು ಕುಲಶೇಖರ ಮಂಗಳೂರು ಡೈರಿ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ನೂತನ ಉತ್ಪನಗಳಾದ ನಂದಿನಿ ರಿಯಲ್ ಥಿಕ್ ಕಡ್ ಮತ್ತು ನಂದಿನಿ ಕ್ರೀಂನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು .
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ,ಕರ್ನಾಟಕ ಹಾಲು ಮಹಾಮಂಡಳಿ, ಬೆಂಗಳೂರು ಇದರ ಅಧ್ಯಕ್ಷ .ಪಿ. ನಾಗರಾಜು , ಲೋಕಸಭಾ ಸದಸ್ಯರು ನಳಿನ್ ಕುಮಾರ್ ಕಟೀಲ್ , ಕ್ಯಾಂಪ್ಕೊ ಲಿ ಮಂಗಳೂರು ಇದರ ಅಧ್ಯಕ್ಷ ಕೊಂಕೋಡಿ ಪದ್ಮನಾಭ , ಕರ್ನಾಟಕ ಹಾಲು ಮಹಾಮಂಡಳಿ, ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರು, ಎ.ಎಸ್. ಪ್ರೇಮನಾಥ,ವಿಧಾನ ಪರಿಷತ್ , ಕರ್ನಾಟಕ ಸರ್ಕಾರ ಸದಸ್ಯರು ಕ್ಯಾಪ್ಟನ್ ಗಣೇಶ ಕಾರ್ಣಿಕ್, ಜಿಲ್ಲಾ ಸಹಕಾರಿ ಯೂನಿಯನ್,ಅಧ್ಯಕ್ಷ ಹರೀಶ್ ಆಚಾರ್, ರು , ಮಂಗಳೂರು ಕಾರ್ಪೋರೇಟರ್, ಭಾಸ್ಕರ ಕೆ, ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸದರಿ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಾಡಿದರು.