ಉಡುಪಿ: ಇಲ್ಲಿನ ಖಾಸಗಿ ಪದವಿಪೂರ್ವ ಕಾಲೇಜಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಕೇರಳ ಮೂಲದ ಯುವಕ ಅತ್ಯಾಚಾರ ನಡೆಸಿದ ಪ್ರಕರಣ ಶುಕ್ರವಾರ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದ್ದು ಫೇ(ಕ್)ಸ್ ಬುಕ್ ವಂಚನೆಯೆಂದು ತಿಳಿದುಬಂದಿದೆ.
ಘಟನೆಯ ವಿವರ: ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದು, ಕಳೆದ ತಿಂಗಳು ಫೇಸ್‍ಬುಕ್ ಮೂಲಕ ಕೇರಳ ಮೂಲದವನಾದ ಸದ್ಯ ಶಿರ್ವ ನಿವಾಸಿ ಹರೀಶ(23) ಎಂಬಾತನ ಪರಿಚಯವಾಗಿತ್ತು. ಇಬ್ಬರ ಮಧ್ಯೆ ತಿಂಗಳುಗಳಿಂದಲೂ ‘ಚಾಟಿಂಗ್’ ನಡೆಯುತ್ತಿದ್ದು, ಆಕೆಯನ್ನು ಫುಸಲಾಯಿಸಿದ ಯುವಕ ಆಕೆಯನ್ನು ‘ಡೇಟಿಂಗ್’ಗೆ ಕರೆದಿದ್ದಾನೆ. ಅದಕ್ಕೊಪ್ಪಿದ ಆಕೆ ಆತನ ಜೊತೆಗೆ ಕಾರ್ಕಳಕ್ಕೆ ಬಸ್ಸಿನಲ್ಲಿ ಹೊರಟಿದ್ದಳು. ಆದರೇ ಹಿರಿಯಡ್ಕ ಜಂಕ್ಷನ್ ಬಳಿ ಬಸ್ಸಿನಿಂದ ಇಳಿಸಿ ಈಕೆಯನ್ನು ಕಾಡಿಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಯುವಕ-ಯುವತಿ ಕಾಡಿನತ್ತ ತೆರಳುವುದನ್ನು ಗಮನಿಸಿದ ಸ್ಥಳೀಯರು ಹಿಂಬಾಲಿಸಿದ್ದು, ಕೊನೆಗೆ ಕಾಡಿನಲ್ಲಿ ಇಬ್ಬರೂ ‘ಸರಸ-ಸಲ್ಲಾಪ’ವಾಡುತ್ತಿದ್ದ ಅಸಹ್ಯ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಹಿಡಿದು ಹಿರಿಯಡ್ಕ ಠಾಣೆಗೆ ಒಪ್ಪಿಸಲಾಗಿದೆ.
ಯುವತಿಯು ಅಪ್ರಾಪ್ತೆಯಾದ ಕಾರಣ ಯುವಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳು ಉಡುಪಿಗೆ ಬಂದಿದ್ದ ಆರೋಪಿ ಯುವಕ ಆ ಸಂದರ್ಭದಲ್ಲೂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಯುವತಿ ದೂರಿದ್ದಾಳೆ.
ಯುವಕನನ್ನು ಹಿರಿಯಡ್ಕ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.